IPL 2021: ಇಂಗ್ಲೆಂಡ್ನಿಂದ RCB ತಂಡಕ್ಕೆ ಹೊಸ ವೇಗದ ಅಸ್ತ್ರ
George Garton: ಐಪಿಎಲ್ 2021ರ ಆರ್ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) ದ್ವಿತಿಯಾರ್ಧಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪೂರ್ಣಗೊಂಡಿದೆ. ಈ ಹಿಂದೆ ಆರ್ಸಿಬಿ ತಂಡ ಆ್ಯಡಂ ಝಂಪಾ, ಫಿನ್ ಅಲೆನ್ ಮತ್ತು ಡೇನಿಯಲ್ ಸ್ಯಾಮ್ ಬದಲಿಗೆ ವನಿಂದು ಹಸರಂಗ (Wanindu Hasaranga), ಟಿಮ್ ಡೇವಿಡ್ (Tim David) ಮತ್ತು ದುಷ್ಮಂತ ಚಮೀರಾ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಇದಾಗ್ಯೂ ಕೇನ್ ರಿಚರ್ಡ್ಸನ್ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಎಂಬುದನ್ನು ಖಚಿತಪಡಿಸಿರಲಿಲ್ಲ. ಇದೀಗ ಇಂಗ್ಲೆಂಡ್ ವೇಗಿ ಜಾರ್ಜ್ ಗಾರ್ಟನ್ (George Garton) ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅದರಂತೆ ಆರ್ಸಿಬಿ ತಂಡದ 8 ವಿದೇಶಿ ಆಟಗಾರರ ಕೋಟಾ ಪೂರ್ಣಗೊಂಡಿದೆ.
24 ವರ್ಷದ ಎಡಗೈ ವೇಗಿ ಗಾರ್ಟನ್ 38 ಟಿ20 ಪಂದ್ಯಗಳನ್ನು ಆಡಿದ್ದು, 8.26 ಸರಾಸರಿಯಲ್ಲಿ 44 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಕೌಂಟಿಯಲ್ಲಿ ಸಸೆಕ್ಸ್ ಆಡುತ್ತಿರುವ ಗಾರ್ಟನ್, ಇತ್ತೀಚೆಗೆ ಮುಕ್ತಾಯಗೊಂಡ ದಿ ಹಂಡ್ರೆಡ್ ಲೀಗ್ನಲ್ಲಿ ಸದರ್ನ್ ಬ್ರೇವ್ ತಂಡದ ಭಾಗವಾಗಿದ್ದರು. ಕರಾರುವಾಕ್ ದಾಳಿ ಹಾಗೂ ಯಾರ್ಕರ್ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಂಗೆಡಿಸುವ ಸಾಮರ್ಥ್ಯ ಹೊಂದಿರುವ ಜಾರ್ಜ್ ಗಾರ್ಟನ್ ಆರ್ಸಿಬಿ ತಂಡದ ಎಡಗೈ ವೇಗಿಯ ಕೊರತೆಯನ್ನು ನೀಗಿಸುವ ವಿಶ್ವಾಸದಲ್ಲಿದ್ದಾರೆ.
ಈ ಹಿಂದೆ ತಂಡದಲ್ಲಿದ್ದ ಎಡಗೈ ವೇಗಿ ಡೇನಿಯಲ್ ಸ್ಯಾಮ್ಸ್ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಎಡಗೈ ವೇಗಿ ಜಾರ್ಜ್ ಗಾರ್ಟನ್ ಅವರನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ. ಅಷ್ಟೇ ಈ ಮೂಲಕ 8 ವಿದೇಶಿ ಆಟಗಾರರ ಕೋಟವನ್ನು ಆರ್ಸಿಬಿ ಪೂರ್ಣಗೊಳಿಸಿದೆ.
ಪ್ರಸ್ತುತ ಆರ್ಸಿಬಿ ತಂಡದಲ್ಲಿ ವಿದೇಶಿ ಆಟಗಾರರಾಗಿ ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್, ಕೈಲ್ ಜೇಮಿಸನ್, ವನಿಂದು ಹಸರಂಗ, ಟಿಮ್ ಡೇವಿಡ್ , ದುಷ್ಮಂತ ಚಮೀರಾ, ಡೇನಿಯಲ್ ಕ್ರಿಶ್ಚಿಯನ್ ಹಾಗೂ ಜಾರ್ಜ್ ಗಾರ್ಟನ್ ಸ್ಥಾನ ಪಡೆದಿದ್ದಾರೆ.
IPL 2021ರ ದ್ವಿತಿಯಾರ್ಧ ಸೆಪ್ಟೆಂಬರ್ 19 ರಂದು ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ – ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಅಕ್ಟೋಬರ್ 15 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಐಪಿಎಲ್ 2021ರ ಆರ್ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ವನಿಂದು ಹಸರಂಗ, ದುಷ್ಮಂತ ಚಮೀರಾ, ಗ್ಲೆನ್ ಮ್ಯಾಕ್ಸ್ ವೆಲ್, ಟಿಮ್ ಡೇವಿಡ್, ಕೈಲಿ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್
ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು
ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!
ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!
(IPL 2021: RCB Sign England Seamer George Garton)
Published On - 7:15 pm, Wed, 25 August 21