ಇಂಗ್ಲೆಂಡ್ (England) ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋಲುಕಂಡ ಬೆನ್ನಲ್ಲೆ ಟೀಮ್ ಇಂಡಿಯಾಕ್ಕೆ (Team India) ಮತ್ತೊಂದು ಆಘಾತ ಉಂಟಾಗಿದೆ. ಆಂಗ್ಲರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಕೊಹ್ಲಿ ಪಡೆ 3ನೇ ಟೆಸ್ಟ್ನಲ್ಲಿ ಇನ್ನಿಂಗ್ಸ್ ಹಾಗೂ 76 ರನ್ಗಳಿಂದ ಸೋಲು ಕಂಡಿತು. ಮೊದಲ ಇನ್ನಿಂಗ್ಸ್ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದರೆ, ಎರಡನೇ ಇನ್ನಿಂಗ್ಸ್ನ ನಾಲ್ಕನೇ ದಿನ ದಿಢೀರ್ ಕುಸಿತ ಕಂಡಿತು. ಪರಿಣಾಮ ಇಂಗ್ಲೆಂಡ್ 1-1 ಅಂತರದಿಂದ ಸರಣಿಯನ್ನು ಸಮಬಲ ಸಾಧಿಸಿದೆ. ಭಾರತಕ್ಕೆ ಈ ಸೋಲಿನ ಜೊತೆಗೆ ಮತ್ತೊಂದು ಶಾಕ್ ಉಂಟಾಗಿದೆ. ತಂಡದ ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja ) ಗಾಯಕ್ಕೆ ತುತ್ತಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂರನೇ ಟೆಸ್ಟ್ನ ಎರಡನೇ ದಿನ ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಫೀಲ್ಡಿಂಗ್ ಮಾಡುವಾಗ ಜಡೇಜಾ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಸದ್ಯ ಜಡೇಜಾ ಆಸ್ಪತ್ರೆಗೆ ತೆರಳಿ ಸ್ಕ್ಯಾನ್ ಮಾಡಿದ್ದು ಫೋಟೋವನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ವಿಶ್ರಾಂತಿಯಲ್ಲಿರುವ ಜಡ್ಡು ನಾಲ್ಕನೇ ಟೆಸ್ಟ್ನಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇವರ ಬದಲು ರವಿಚಂದ್ರನ್ ಅಶ್ವಿನ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಮೂರನೇ ಟೆಸ್ಟ್ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 78 ರನ್ಗೆ ಸರ್ವಪತನ ಕಂಡಿತು. ರೋಹಿತ್ ಶರ್ಮಾ 19 ಮತ್ತು ಅಜಿಂಕ್ಯಾ ರಹಾನೆ 18 ರನ್ ಗಳಿಸಿದರಷ್ಟೆ. ಜೇಮ್ಸ್ ಆಂಡರ್ಸನ್ ಹಾಗೂ ಕ್ರೈಗ್ ಓವರ್ಟನ್ ತಲಾ 3 ವಿಕೆಟ್ ಕಿತ್ತು ಭಾರತಕ್ಕೆ ಮಾರಕವಾದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ಜೋ ರೂಟ್ (121) ಶತಕದಾಟವಾಡಿದರೆ, ಡೇವಿಡ್ ಮಲನ್ 70, ಹಸೀಬ್ ಹಮೀದ್ 68 ಮತ್ತು ರಾರಿ ಬರ್ನ್ಸ್ 68 ರನ್ ಕಲೆಹಾಕಿದರು.
ಭರ್ಜರಿ ಮುನ್ನಡೆಯೊಂದಿಗೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 432 ರನ್ ಕಲೆಹಾಕಿತು. ಭಾರತ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಮೂರನೇ ದಿನ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು ಬಿಟ್ಟರೆ ನಾಲ್ಕನೇ ದಿನ ಮತ್ತದೆ ಹಳೆಯ ಚಾಳಿ ಮುಂದುವರೆಸಿತು. ಚೇತೇಶ್ವರ್ ಪೂಜಾರ 189 ಎಸೆತಗಳಲ್ಲಿ 91 ರನ್ ಬಾರಿಸಿ ಫಾರ್ಮ್ಗೆ ಬಂದರೆ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರಷ್ಟೆ.
2ನೇ ಇನ್ನಿಂಗ್ಸ್ನಲ್ಲಿ ಭಾರತ 278 ರನ್ಗೆ ಸರ್ವಪತನ ಕಂಡಿತು. ಓಲಿ ರಾಬಿನ್ಸನ್ 5 ವಿಕೆಟ್ ಕಿತ್ತು ಮಿಂಚಿದ್ದಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಇಂಗ್ಲೆಂಡ್ ಇನ್ನಿಂಗ್ಸ್ ಮತ್ತು 76 ರನ್ಗಳ ಗೆಲುವು ದಾಖಲಿಸಿತು. ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ಸೆಪ್ಟೆಂಬರ್ 2 ರಿಂದ ಆರಂಭವಾಗಲಿದೆ.
India vs England: ‘ಟೀಮ್ ಇಂಡಿಯಾ ಆಟಗಾರರು ಕೆಲಸಕ್ಕೆ ಬಾರದವರು’ ಎಂದ ವಾನ್ಗೆ ಮೈಚಳಿ ಬಿಡಿಸಿದ ಅಭಿಮಾನಿಗಳು
Tokyo Paralympics: ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಚೊಚ್ಚಲ ಪದಕ: ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾವಿನಾ
(India vs England Ravindra Jadeja taken to a hospital in Leeds for precautionary scans)
Published On - 9:22 am, Sun, 29 August 21