Shardul Thakur: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಲಾರ್ಡ್ ಠಾಕೂರ್

| Updated By: Vinay Bhat

Updated on: Sep 06, 2021 | 8:13 AM

India vs England: ಒಂದು ಟೆಸ್ಟ್​ ಪಂದ್ಯದ ಎರಡೂ ಇನ್ನಿಂಗ್ಸ್​ನಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅರ್ಧಶತಕ ದಾಖಲಿಸಿದ ಎರಡನೇ ಭಾರತೀಯ ಆಟಗಾರ ಎಂಬ ಸಾಧನೆಯನ್ನು ಶಾರ್ದೂಲ್ ಠಾಕೂರ್ ಮಾಡಿದ್ದಾರೆ.

Shardul Thakur: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಲಾರ್ಡ್ ಠಾಕೂರ್
Shardul Thakur
Follow us on

ಟೀಮ್ ಇಂಡಿಯಾಕ್ಕೆ (Team India) ಬೌಲರ್ ಆಗಿ ಎಂಟ್ರಿ ಕೊಟ್ಟಿದ್ದ ಶಾರ್ದೂಲ್ ಠಾಕೂರ್ (Shardul Thakur) ಈಗ ಸ್ಟಾರ್ ಆಲ್ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಆರಂಭಿಕ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವೈಫಲ್ಯದ ನಡುವೆ ಆಂಗ್ಲರ ನಾಡಿನಲ್ಲಿ ಇಂಗ್ಲೆಂಡ್ ಬೌಲರ್​ಗಳ ಬೆವರಳಿಸುತ್ತಿರುವ ಠಾಕೂರ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ನಾಲ್ಕನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಸ್ಫೋಟಕ ಅರ್ಧ ಶತಕ ಸಿಡಿಸಿ ಅಬ್ಬರಿದ್ದ ಶಾರ್ದೂಲ್, ಎರಡನೇ ಇನ್ನಿಂಗ್ಸ್​ನಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಹಾಫ್ ಸೆಂಚುರಿ ಬಾರಿಸಿದರು. ಈ ಮೂಲಕ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.

ಒಂದು ಟೆಸ್ಟ್​ ಪಂದ್ಯದ ಎರಡೂ ಇನ್ನಿಂಗ್ಸ್​ನಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅರ್ಧಶತಕ ದಾಖಲಿಸಿದ ಎರಡನೇ ಭಾರತೀಯ ಆಟಗಾರ ಎಂಬ ಸಾಧನೆಯನ್ನು ಠಾಕೂರ್ ಮಾಡಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಆರನೇ ಬ್ಯಾಟ್ಸ್​ಮನ್ ಆಗಿದ್ದಾರೆ.

 

ಮೊದಲ ಇನ್ನಿಂಗ್ಸ್​ನಲ್ಲೂ ಬಿರುಸಿನ ಅರ್ಧಶತಕ ಸಿಡಿಸಿ ಠಾಕೂರ್ ದಾಖಲೆ ಬರೆದಿದ್ದರು. ಕೇವಲ 36 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಅಮೋಘ ಸಿಕ್ಸರ್ ಸಿಡಿಸಿದ ಠಾಕೂರ್ 57 ರನ್ ಚಚ್ಚಿದ್ದರು. 31ನೇ ಎಸೆತದಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಭಾರತ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಸಾಧನೆ ಮಾಡಿದರು.

ಭಾರತ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ದಾಖಲೆ ಕಪಿಲ್ ದೇವ್ ಹೆಸರಲ್ಲಿದೆ. ಇವರು 1982 ರಲ್ಲಿ ಪಾಕಿಸ್ತಾನ ವಿರುದ್ಧ ಕೇವಲ 30 ಎಸೆತಗಳಲ್ಲಿ 50 ರನ್ ಬಾರಿಸಿದ್ದರು. ನಂತರದ ಸ್ಥಾನದಲ್ಲಿ ಠಾಕೂರ್ ಇದ್ದು31 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ವಿರೇಂದ್ರ ಸೆಹ್ವಾಗ್ 2008 ರಲ್ಲಿ ಇಂಗ್ಲೆಂಡ್ ವಿರುದ್ಧ 32 ಎಸೆತಗಳಲ್ಲಿ 50 ರನ್ ಪೂರೈಸಿದ್ದರು.

ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದುನಿಂತಿದೆ. ಟೀಮ್ ಇಂಡಿಯಾ ನೀಡಿರುವ 367 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿರುವ ಆಂಗ್ಲರು ನಾಲ್ಕನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 77 ರನ್ ಬಾರಿಸಿದೆ. ಪಂದ್ಯದ ಫಲಿತಾಂಶ ಅಂತಿಮ ದಿನಕ್ಕೆ ತಲುಪಿದ್ದು ಇಂಗ್ಲೆಂಡ್ ಗೆಲುವಿಗೆ 291 ರನ್​ಗಳ ಅವಶ್ಯಕತೆಯಿದ್ದರೆ, ಭಾರತದ ಗೆಲುವಿಗೆ ರೂಟ್ ಪಡೆಯ ಎಲ್ಲ ವಿಕೆಟ್​ಗಳು ಬೇಕಾಗಿದೆ. ಹೀಗಾಗಿ ಐದನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ.

ಮೊದಲ ಇನಿಂಗ್ಸ್‌ನಲ್ಲಿ 191ಕ್ಕೆ ಆಲ್‌ಔಟ್‌ ಆಗಿದ್ದ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಅದ್ಭುತ ಕಮ್‌ಬ್ಯಾಕ್‌ ಮಾಡಿ 466 ರನ್‌ಗಳ ಶಿಖರ ನಿರ್ಮಿಸಿತು.  ಲಂಚ್‌ ವೇಳೆ ಭಾರತ 6 ವಿಕೆಟಿಗೆ 329 ರನ್‌ ಗಳಿಸಿದ್ದ ಭಾರತಕ್ಕೆ ಪಂತ್‌ ಮತ್ತು ಠಾಕೂರ್‌ ಸೇರಿಕೊಂಡು 7ನೇ ವಿಕೆಟಿಗೆ ಭರ್ತಿ 100 ರನ್‌ ಪೇರಿಸಿ ತಂಡವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದರು.

ಪಂತ್‌ ಮತ್ತು ಠಾಕೂರ್‌ ಇಬ್ಬರೂ ಅರ್ಧ ಶತಕ ಬಾರಿಸಿ ಇಂಗ್ಲೆಂಡ್‌ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿದರು. ಪಂತ್‌ ಕೊಡುಗೆ ಭರ್ತಿ 50 ರನ್‌. 106 ಎಸೆತಗಳ ಈ ಆಟದಲ್ಲಿ 4 ಬೌಂಡರಿ ಸೇರಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ 57 ರನ್‌ ಹೊಡೆದು ಟಾಪ್‌ ಸ್ಕೋರರ್‌ ಆಗಿದ್ದ ಠಾಕೂರ್‌ ಮತ್ತೂಂದು ಸ್ಫೋಟಕ ಇನ್ನಿಂಗ್ಸ್‌ ಮೂಲಕ ಮತ್ತೂಮ್ಮೆ ತಮ್ಮ ಬ್ಯಾಟಿಂಗ್‌ ಸಾಹಸವನ್ನು ತೆರೆದಿಟ್ಟರು. ಅದೇ ಬಿರುಸಿನಲ್ಲಿ ಸಾಗಿದ ಠಾಕೂರ್‌ 72 ಎಸೆತಗಳಿಂದ 60 ರನ್‌ ಸಿಡಿಸಿದರು.

India vs England: 90 ಓವರ್: ಭಾರತದ ಗೆಲುವಿಗೆ ಬೇಕು ಆಂಗ್ಲರ 10 ವಿಕೆಟ್, ಇಂಗ್ಲೆಂಡ್​ಗೆ ಬೇಕು 291 ರನ್ಸ್: ಯಾರಿಗೆ ಜಯ?

4ನೇ ಟೆಸ್ಟ್​ನಲ್ಲೂ ಶತಕ ಬರಲಿಲ್ಲ, ಔಟಾದ ನಿರಾಸೆ; ಕೋಪಗೊಂಡ ಕೊಹ್ಲಿ ಡ್ರೆಸಿಂಗ್ ರೂಂನಲ್ಲಿ ಮಾಡಿದ್ದೇನು ಗೊತ್ತಾ? ವಿಡಿಯೋ