India vs England: ಟೀಮ್ ಇಂಡಿಯಾ 2-1 ಮುನ್ನಡೆಗೆ ಅಡ್ಡಿ ಪಡಿಸುತ್ತಾನ ವರುಣ?: ಅಂತಿಮ ದಿನದ ಹವಾಮಾನ ವರದಿ ಇಲ್ಲಿದೆ
ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ನ ಅಂತಿಮ ದಿನ ಭಾರತಕ್ಕೆ ಸುಲಭ ಗೆಲುವು ಸಾಧಿಸುವ ಅವಕಾಶವಿತ್ತು. ಆದರೆ, ಇಂಗ್ಲೆಂಡ್ಗೆ ಮಳೆರಾಯ ವರವಾಗಿ ಪರಿಣಮಿಸಿದೆ. ಆದರೆ, ಈ ಬಾರಿ ಹಾಗಾಗಲು ಚಾನ್ಸ್ ಇಲ್ಲ.
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್ನ ಅಂತಿಮ ಐದನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದ ಸಮಬಲ ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾ ಆದರೆ, ಎರಡನೇ ಟೆಸ್ಟ್ನಲ್ಲಿ ಭಾರತ ಗೆದ್ದು ಬೀಗಿತು. ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಜಯಿಸಿದ್ದು, ಸದ್ಯ ನಾಲ್ಕನೇ ಟೆಸ್ಟ್ (4th test) ಕುತೂಹಲ ಕೆರಳಿಸಿದೆ. ಅಂತಿಮ ದಿನದಲ್ಲಿ ಇಂಗ್ಲೆಂಡ್ ಗೆಲುವಿಗೆ 291 ರನ್ಗಳ ಅವಶ್ಯಕತೆಯಿದ್ದರೆ, ಟೀಮ್ ಇಂಡಿಯಾ (Team India) ಗೆಲುವಿನಗೆ ಇಂಗ್ಲೆಂಡ್ನ 10 ವಿಕೆಟ್ ಕೀಳಬೇಕಿದೆ. ಇದರ ನಡುವೆ ಈ ರೋಚಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆಯೇ?.
ಮೊದಲ ಟೆಸ್ಟ್ನ ಅಂತಿಮ ದಿನ ಭಾರತಕ್ಕೆ ಸುಲಭ ಗೆಲುವು ಸಾಧಿಸುವ ಅವಕಾಶವಿತ್ತು. ಆದರೆ, ಇಂಗ್ಲೆಂಡ್ಗೆ ಮಳೆರಾಯ ವರವಾಗಿ ಪರಿಣಮಿಸಿದೆ. ಆದರೆ, ಈ ಬಾರಿ ಹಾಗಾಗಲು ಚಾನ್ಸ್ ಇಲ್ಲ. ಇಂದಿನ ಐದನೇ ದಿನ ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ಮಳೆಯ ಸಾಧ್ಯತೆ ಇಲ್ಲ ಎಂದು ಹವಾಮಾನ ವರದಿ ಹೇಳಿದೆ. ಪಂದ್ಯ ಆರಂಭವಾಗುವ ಹೊತ್ತಿಗೆ ಮೋಡ ಮುಸುಕಿದ ವಾತಾವರಣ ಇದ್ದರೂ, ಮಳೆ ಬರುವ ಸಾಧ್ಯತೆ ಇಲ್ಲ.
ಲಂಡನ್ನ ನ್ಯಾಟಿಂಗ್ಹ್ಯಾಮ್ ಓವಲ್ನಲ್ಲಿ ನಡೆಯುತ್ತಿರು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಗೆಲುವು ಅಥವಾ ಪಂದ್ಯ ಡ್ರಾ ಆಗುವುದು ಖಚಿತ ಎಂದೇ ಹೇಳಲಾಗುತ್ತಿದೆ. ಇಂದು ಅಂತಿಮ ದಿನದಾಟದಲ್ಲಿ ಆಂಗ್ಲರ ಗೆಲುವುಗೆ 291 ರನ್ಗಳ ಅವಶ್ಯತೆಯಿದೆ. ಹೊಸ ಬಾಲ್ ಪ್ರಯೋಜವನ್ನು ಭಾರತೀಯ ವೇಗಿಗಳು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ.
ಕೊಹ್ಲಿ ಪಡೆ ನೀಡಿರುವ 367 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿರುವ ಆಂಗ್ಲರು ನಾಲ್ಕನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 77 ರನ್ ಬಾರಿಸಿದೆ. ಪಂದ್ಯದ ಫಲಿತಾಂಶ ಅಂತಿಮ ದಿನಕ್ಕೆ ತಲುಪಿದ್ದು ಇಂಗ್ಲೆಂಡ್ ಗೆಲುವಿಗೆ 291 ರನ್ಗಳ ಅವಶ್ಯಕತೆಯಿದ್ದರೆ, ಭಾರತದ ಗೆಲುವಿಗೆ ರೂಟ್ ಪಡೆಯ ವಿಕೆಟ್ಗಳು ಬೇಕಾಗಿದೆ. ಹೀಗಾಗಿ ಐದನೇ ದಿನದಾಟದ ಸಾಕಷ್ಟು ಕುತೂಹಲ ಕೆರಳಿಸಿದೆ.
India vs England: ಟೀಮ್ ಇಂಡಿಯಾಕ್ಕೆ ಡಬಲ್ ಶಾಕ್: ಇಂದು ಫೀಲ್ಡ್ಗಿಳಿಯಲ್ಲ ಈ ಆಟಗಾರರು: 5ನೇ ಟೆಸ್ಟ್ಗೂ ಅನುಮಾನ
Shardul Thakur: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಲಾರ್ಡ್ ಠಾಕೂರ್
(India vs England Kennington Oval Weather Day 5 No chances of rain as India aims to go 2-1 up against England)