T20 World Cup 2021: ಅನುಭವಿ ಆಟಗಾರರಿಗೆ ಕೊಕ್, ಅಟ್ಟರ್ ಫ್ಲಾಪ್ ಆಟಗಾರರಿಗೆ ಸ್ಥಾನ: ಟಿ20 ವಿಶ್ವಕಪ್​ಗೆ ಪಾಕ್ ತಂಡ ಪ್ರಕಟ

Pakistan's T20 World Cup squad: ಬಾಬರ್ ಅಜಮ್ (ಕ್ಯಾಪ್ಟನ್), ಮೊಹಮ್ಮದ್ ರಿಜ್ವಾನ್, ಆಸಿಫ್ ಅಲಿ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಶೋಯೆಬ್ ಮಕ್ಸೂದ್, ಅಜಮ್ ಖಾನ್, ಇಮಾದ್ ವಾಸಿಂ.

T20 World Cup 2021: ಅನುಭವಿ ಆಟಗಾರರಿಗೆ ಕೊಕ್, ಅಟ್ಟರ್ ಫ್ಲಾಪ್ ಆಟಗಾರರಿಗೆ ಸ್ಥಾನ: ಟಿ20 ವಿಶ್ವಕಪ್​ಗೆ ಪಾಕ್ ತಂಡ ಪ್ರಕಟ
ಪಾಕಿಸ್ತಾನ್ ತಂಡ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 06, 2021 | 2:36 PM

ಟಿ20 ವಿಶ್ವಕಪ್​ಗಾಗಿ (T20 World Cup 2021) ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಸೋಮವಾರ 15 ಸದಸ್ಯರ (Pakistan’s T20 World Cup squad) ತಂಡವನ್ನು ಪ್ರಕಟಿಸಿದೆ. ಈ ತಂಡವನ್ನು ಬಾಬರ್ ಆಜಮ್ (Babar Azam) ಮುನ್ನಡೆಸಲಿದ್ದಾರೆ. ಅಕ್ಟೋಬರ್ 24 ಭಾರತದ (Team India) ವಿರುದ್ದದ ಪಂದ್ಯದ ಮೂಲಕ ಪಾಕ್ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇನ್ನು ಈ ತಂಡದಲ್ಲಿ ಆಸಿಫ್ ಅಲಿ (Asif Ali) ಮತ್ತು ಖುಷ್ದಿಲ್ ಶಾ (Kushdil Sha) ಸ್ಥಾನ ಪಡೆದಿದ್ದಾರೆ. ಹಾಗೆಯೇ ಮೊಹಮ್ಮದ್ ಅಮೀರ್, ಸರ್ಫರಾಜ್ ಅಹ್ಮದ್, ಶೊಯೇಬ್ ಮಲಿಕ್ ಹಾಗೂ ವಹಾಬ್ ರಿಯಾಝ್​ರನ್ನು ಕೈ ಬಿಡಲಾಗಿದೆ. ಅಷ್ಟೇ ಅಲ್ಲದೆ ಈ ಹಿಂದೆ  ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಟೀಮ್ ಇಂಡಿಯಾ ವಿರುದ್ದ ಶತಕ ಸಿಡಿಸಿದ್ದ ಫಖರ್ ಝಮಾನ್ ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ.

ತಂಡದಲ್ಲಿ ಸ್ಥಾನ ಪಡೆದಿರುವ ಆಸಿಫ್ ಅಲಿ ಹಾಗೂ ಖುಷ್ಧಿಲ್ ಶಾ ಬಗ್ಗೆ ಆರಂಭದಲ್ಲೇ ಅಪಸ್ವರಗಳು ಕೇಳಿ ಬಂದಿವೆ. ಏಕೆಂದರೆ ಈ ಇಬ್ಬರೂ ಆಟಗಾರರು ಅಟ್ಟರ್ ಫ್ಲಾಪ್ ಆಗಿದ್ದವರು. ಇದಾಗ್ಯೂ ಪಾಕ್ ಕ್ರಿಕೆಟ್ ಮಂಡಳಿಗೆ ಇಬ್ಬರಿಗೂ ಸ್ಥಾನ ನೀಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಆಸಿಫ್ ಅಲಿ 2019 ರಲ್ಲಿ ಪಾಕ್ ಪರ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ಅವರು ಪಾಕಿಸ್ತಾನದ ಪರ ಕೇವಲ 4 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಒಟ್ಟು 13 ರನ್ ಮಾತ್ರ ಗಳಿಸಿದ್ದಾರೆ. ಮತ್ತೊಂದೆಡೆ, ಖುಷ್ದಿಲ್ 2 ಟಿ20 ಪಂದ್ಯಗಳನ್ನು ಆಡಿದ್ದು, ಒಟ್ಟು 27 ರನ್ ಗಳಿಸಿದ್ದಾರೆ. ಕಳೆದ 10 ಲೀಗ್ ಮತ್ತು ದೇಶೀಯ ಟಿ20 ಪಂದ್ಯಗಳಲ್ಲಿ ಖುಷ್ದಿಲ್ ಒಮ್ಮೆ ಮಾತ್ರ ಅರ್ಧ ಶತಕ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಆಸಿಫ್ ಕಳೆದ 10 ಟಿ20 ಪಂದ್ಯಗಳಲ್ಲಿ 67 ರ ಬಾರಿಸಿರುವುದೇ ಶ್ರೇಷ್ಠ ಸಾಧನೆ. ಇಂತಹ ಫ್ಲಾಪ್ ಆಟಗಾರರಿಗೆ ಸ್ಥಾನ ನೀಡಿ ಅನುಭವಿ ಆಟಗಾರ, ಪ್ರಸ್ತುತ ಫಾರ್ಮ್​ನಲ್ಲಿರುವ ಶೊಯೇಬ್ ಮಲಿಕ್ ರನ್ನು ಕೈ ಬಿಟ್ಟಿರುವ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ತಿಂಗಳು ಟಿ20 ವಿಶ್ವಕಪ್ ಆರಂಭವಾಗಲಿದ್ದು, ಅಕ್ಟೋಬರ್ 17 ರಿಂದ ಅರ್ಹತಾ ಸುತ್ತಿನ ಪಂದ್ಯಗಳು ಜರುಗಲಿದೆ. ಹಾಗೆಯೇ ಅಕ್ಟೋಬರ್ 23 ರಂದು ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಮುಖಾಮುಖಿಯೊಂದಿಗೆ ಸೂಪರ್ 12 ಕಾದಾಟ ಶುರುವಾಗಲಿದೆ. ಇನ್ನು ಪಾಕ್ ತಂಡವು ಮೊದಲ ಪಂದ್ಯವನ್ನು ಅಕ್ಟೋಬರ್ 14 ರಂದು ಭಾರತ ವಿರುದ್ದ ಆಡಲಿದೆ. ಇನ್ನು ಪ್ರಸ್ತುತ ಆಯ್ಕೆ ಮಾಡಲಾದ ತಂಡ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 3 ರವರೆಗೆ ನ್ಯೂಜಿಲೆಂಡ್ ವಿರುದ್ಧ 5 ಟಿ20 ಪಂದ್ಯಗಳ ಸರಣಿಯನ್ನು ಹಾಗೂ ಅಕ್ಟೋಬರ್ 13 ಮತ್ತು 14 ರಂದು, ಇಂಗ್ಲೆಂಡ್ ವಿರುದ್ದ ಎರಡು ಟಿ20 ಪಂದ್ಯಗಳನ್ನು ಆಡಲಿದೆ.

ಟಿ 20 ವಿಶ್ವಕಪ್‌ಗಾಗಿ ಪಾಕಿಸ್ತಾನ್ ತಂಡ ಹೀಗಿದೆ: ಬಾಬರ್ ಅಜಮ್ (ಕ್ಯಾಪ್ಟನ್), ಮೊಹಮ್ಮದ್ ರಿಜ್ವಾನ್, ಆಸಿಫ್ ಅಲಿ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಶೋಯೆಬ್ ಮಕ್ಸೂದ್, ಅಜಮ್ ಖಾನ್, ಇಮಾದ್ ವಾಸಿಂ, ಮೊಹಮ್ಮದ್ ನವಾಜ್, ಮೊಹಮ್ಮದ್ ಹಸನ್ ಅಲಿ, ಹಾರ್ದಿಸ್ ಖಾನ್, ರೌಫ್, ಮೊಹಮ್ಮದ್ ಹಸ್ನೈನ್, ಶಾಹೀನ್ ಅಫ್ರಿದಿ

ಮೀಸಲು ಆಟಗಾರರು: ಫಖರ್ ಜಮಾನ್, ಉಸ್ಮಾನ್ ಖಾದಿರ್, ಶಹನವಾಜ್ ಧನಿ

ಇದನ್ನೂ ಓದಿ: IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್

ಇದನ್ನೂ ಓದಿ: ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ

ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ

(no place for Sarfaraz, Malik, Wahab as Pakistan’s T20 World Cup squad is named)

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’