India vs England: ಟೀಮ್ ಇಂಡಿಯಾಕ್ಕೆ ಡಬಲ್ ಶಾಕ್: ಇಂದು ಫೀಲ್ಡ್​​ಗಿಳಿಯಲ್ಲ ಈ ಆಟಗಾರರು: 5ನೇ ಟೆಸ್ಟ್​ಗೂ ಅನುಮಾನ

TV9 Digital Desk

| Edited By: Vinay Bhat

Updated on: Sep 06, 2021 | 9:19 AM

Rohit Sharma Injury: ಎರಡನೇ ಇನ್ನಿಂಗ್ಸ್​ನಲ್ಲಿ ಭಾರತಕ್ಕೆ ಆಸರೆಯಾದ ಚೇತೇಶ್ವರ್ ಪೂಜಾರ ಮತ್ತು ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದು, ಇಂದಿನ ಅಂತಿಮ ದಿನದಾಟದಲ್ಲಿ ಕಣಕ್ಕಿಳಿಯುವುದು ಅನುಮಾನ.

India vs England: ಟೀಮ್ ಇಂಡಿಯಾಕ್ಕೆ ಡಬಲ್ ಶಾಕ್: ಇಂದು ಫೀಲ್ಡ್​​ಗಿಳಿಯಲ್ಲ ಈ ಆಟಗಾರರು: 5ನೇ ಟೆಸ್ಟ್​ಗೂ ಅನುಮಾನ
Virat Kohli IND vs ENG

ಲಂಡನ್​ನ ನ್ಯಾಟಿಂಗ್​ಹ್ಯಾಮ್​ ಓವಲ್​ನಲ್ಲಿ ನಡೆಯುತ್ತಿರು ಇಂಗ್ಲೆಂಡ್ (England) ವಿರುದ್ಧದ ನಾಲ್ಕನೇ ಟೆಸ್ಟ್ (4th Test) ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ (Team India) ಗೆಲುವು ಅಥವಾ ಪಂದ್ಯ ಡ್ರಾ ಆಗುವುದು ಖಚಿತ ಎಂದೇ ಹೇಳಲಾಗುತ್ತಿದೆ. ಇಂದು ಅಂತಿಮ ದಿನದಾಟದಲ್ಲಿ ಆಂಗ್ಲರ ಗೆಲುವುಗೆ 291 ರನ್​ಗಳ ಅವಶ್ಯತೆಯಿದೆ. ಹೊಸ ಬಾಲ್ ಪ್ರಯೋಜವನ್ನು ಭಾರತೀಯ ವೇಗಿಗಳು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ. ಕೊಹ್ಲಿ ಪಡೆಗೆ ಸೋಲಿನ ಭೀತಿ ಹತ್ತಿರದಿಂದ ಇಲ್ಲವಾದರೂ ದೊಡ್ಡ ಹೊಡೆತವಂತು ಬಿದ್ದಿದೆ. ತಂಡದ ಇಬ್ಬರು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಹಾಗೂ ಚೇತೇಶ್ವರ್ ಪೂಜಾರ (Cheteshwar Pujara) ಇಂಜುರಿಗೆ ತುತ್ತಾಗಿದ್ದಾರೆ.

ಹೌದು, ಟೀಮ್ ಇಂಡಿಯಾಕ್ಕೆ ಎರಡನೇ ಇನ್ನಿಂಗ್ಸ್​ನಲ್ಲಿ ಆಸರೆಯಾದ ಇಬ್ಬರು ಸ್ಟಾರ್ ಬ್ಯಾಟ್ಸ್​ಮನ್​ಗಳಾದ ಪೂಜಾರ ಮತ್ತು ರೋಹಿತ್ ಗಾಯಕ್ಕೆ ತುತ್ತಾಗಿದ್ದು, ಇಂದಿನ ಅಂತಿಮ ದಿನದಾಟದಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಹೇಳಲಾಗಿದೆ.

ನಿನ್ನೆ ನಾಲ್ಕನೇ ದಿನ ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್ ಮಾಡಿದಾಗ ರೋಹಿತ್ ಮತ್ತು ಪೂಜಾರ ಅವರು ಫೀಲ್ಡಿಂಗ್ ಮಾಡಲಿಲ್ಲ. ಬ್ಯಾಟಿಂಗ್ ಮಾಡುವ ವೇಳೆ ರೋಹಿತ್ ಮೊಣಕಾಲಿಗೆ ಗಾಯ ವಾಗಿತ್ತು. ಪೂಜಾರ ಹಿಮ್ಮಡಿ ಉಳುಕಿತ್ತು. ಇದರಿಂದಾಗಿ ಅವರನ್ನು ಸ್ಕ್ಯಾನಿಂಗ್​ಗೆ ಒಳಪಡಿಸಲಾಗಿದೆ.ನಿನ್ನೆ ಬದಲೀ ಆಟಗಾರರು ಅವರಿಬ್ಬರ ಬದಲಿಗೆ ಫೀಲ್ಡಿಂಗ್ ಮಾಡಿದರು. ಇಂದು ಇವರಿಬ್ಬರ ಸ್ಕ್ಯಾನಿಂಗ್​ ವರದಿ ಬರಲಿದೆ.

ವಿಶ್ರಾಂತಿಯಲ್ಲಿರುವ ಕಾರಣ ಇವರಿಬ್ಬರು ಐದನೇ ದಿನದಾಟದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ದೊಡ್ಡ ಮಟ್ಟದ ಗಾಯಗಳಾಗಿದ್ದಲ್ಲಿ, ಐದನೇ ಟೆಸ್ಟ್​ನಲ್ಲಿ ಆಡುವುದು ಅನುಮಾನ. ಹೀಗಾಗಿ ಭಾರತಕ್ಕೆ ದೊಡ್ಡ ಗಂಡಾಂತರ ಎದುರಾದಂತಿದೆ.

ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ, ಮನಮೋಹಕ ಹೊಡೆತಗಳ ಮೂಲಕ ರೋಹಿತ್‌ ಶರ್ಮಾ ನೆರದಿದ್ದ ಅಪಾರ ಕ್ರಿಕೆಟ್‌ ಪ್ರೇಮಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದರು. 256 ಎಸೆತಗಳನ್ನು ಎದುರಿಸಿದ್ದ ರೋಹಿತ್‌, ಒಂದು ಭರ್ಜರಿ ಸಿಕ್ಸರ್‌ ಹಾಗೂ 14 ಬೌಂಡರಿಗಳ ನೆರವಿನಿಂದ 127 ರನ್‌ ಗಳಿಸಿದರು. ಇವರಿಗೆ ಉತ್ತಮ ಸಾತ್ ನಿಡಿದ ಚೇತೇಶ್ವರ್ ಪೂಜಾರ 61 ರನ್ ಬಾರಿಸಿ ನೆರವಾದರು.

ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದುನಿಂತಿದೆ. ಕೊಹ್ಲಿ ಪಡೆ ನೀಡಿರುವ 367 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿರುವ ಆಂಗ್ಲರು ನಾಲ್ಕನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 77 ರನ್ ಬಾರಿಸಿದೆ. ಪಂದ್ಯದ ಫಲಿತಾಂಶ ಅಂತಿಮ ದಿನಕ್ಕೆ ತಲುಪಿದ್ದು ಇಂಗ್ಲೆಂಡ್ ಗೆಲುವಿಗೆ 291 ರನ್​ಗಳ ಅವಶ್ಯಕತೆಯಿದ್ದರೆ, ಭಾರತದ ಗೆಲುವಿಗೆ ರೂಟ್ ಪಡೆಯ ವಿಕೆಟ್​ಗಳು ಬೇಕಾಗಿದೆ. ಹೀಗಾಗಿ ಐದನೇ ದಿನದಾಟದ ಸಾಕಷ್ಟು ಕುತೂಹಲ ಕೆರಳಿಸಿದೆ.

Shardul Thakur: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಲಾರ್ಡ್ ಠಾಕೂರ್

India vs England: 90 ಓವರ್: ಭಾರತದ ಗೆಲುವಿಗೆ ಬೇಕು ಆಂಗ್ಲರ 10 ವಿಕೆಟ್, ಇಂಗ್ಲೆಂಡ್​ಗೆ ಬೇಕು 291 ರನ್ಸ್: ಯಾರಿಗೆ ಜಯ?

(Rohit Sharma and Cheteshwar Pujara got injured Big blow to Team India Difficulty in fifth test)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada