IND vs ENG: ಆಂಡರ್ಸನ್​ಗೆ ‘ನೀ ತಾಂಟ್ರೆ ಬಾ ತಾಂಟ್’ ಎಂದ ಮೊಹಮ್ಮದ್ ಸಿರಾಜ್: ಇಬ್ಬರ ನಡುವೆ ಮಾತಿನ ಚಕಮಕಿ

| Updated By: Digi Tech Desk

Updated on: Aug 07, 2021 | 10:53 AM

ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಚಕಮಕಿ ನಡೆಯಿತು. 85ನೇ ಓವರ್​ನನಲ್ಲಿ ಆಂಡರ್ಸನ್ ಬೌಲಿಂಗ್ ಮಾಡುವ ನಡೆವೆ ಇಬ್ಬರೂ ಮಾತಿಗೆ ಮಾತು ಬೆಳೆಸಿ ತಾಗಿಕೊಂಡು ಹೋದರು.

IND vs ENG: ಆಂಡರ್ಸನ್​ಗೆ ನೀ ತಾಂಟ್ರೆ ಬಾ ತಾಂಟ್ ಎಂದ ಮೊಹಮ್ಮದ್ ಸಿರಾಜ್: ಇಬ್ಬರ ನಡುವೆ ಮಾತಿನ ಚಕಮಕಿ
Mohammed Siraj and James Anderson
Follow us on

ನ್ಯಾಟಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೊದಲ ಟೆಸ್ಟ್​ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಉಭಯ ತಂಡಗಳಿಗೆ ಇಂದಿನ ನಾಲ್ಕನೇ ದಿನ ಪ್ರಮುಖವಾಗಿದೆ. ಮೂರನೇ ದಿನ ಟೀಮ್ ಇಂಡಿಯಾಕ್ಕೆ ಕೆ. ಎಲ್ ರಾಹುಲ್ (KL Rahul) ಹಾಗೂ ರವೀಂದ್ರ ಜಡೇಜಾ (Ravindra Jadeja) ಆಸರೆಯಾಗಿದ್ದು ಬಿಟ್ಟರೆ, 9ನೇ ವಿಕೆಟ್​ಗೆ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಜೋಡಿ ಕೊಂಚ್ ರನ್ ಕಲೆಹಾಕಿತು. ಇದರ ನಡುವೆ ಇಂಗ್ಲೆಂಡ್ ಆಟಗಾರರ ಸ್ಲೆಡ್ಜಿಂಗ್ ಕೂಡ ನಡೆಯಿತು.

ಹೌದು, ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಚಕಮಕಿ ನಡೆಯಿತು. 85ನೇ ಓವರ್​ನನಲ್ಲಿ ಆಂಡರ್ಸನ್ ಬೌಲಿಂಗ್ ಮಾಡುವ ನಡೆವೆ ಇಬ್ಬರೂ ಮಾತಿಗೆ ಮಾತು ಬೆಳೆಸಿ ತಾಗಿಕೊಂಡು ಹೋದರು. ಇದಕ್ಕೆ ಕಾರಣ ಸಿರಾಜ್ ಅವರು ಆಂಡರ್ಸನ್​ನ ಹಿಂದಿನ ಎಸೆತದಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟಲು ಯತ್ನಿಸಿದ್ದರು. ಆದರೆ, ಚೆಂಡು ಬ್ಯಾಟ್​ಗೆ ತಾಗದೆ ಕೀಪರ್ ಸೈರಿತ್ತು.

ಸದ್ಯ ಇವರಿಬ್ಬರ ನಡುವಣ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಇಂಗ್ಲೆಂಡ್ ತಂಡವನ್ನು 183 ರನ್​ಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ 278 ರನ್ ಬಾರಿಸಿ 95 ರನ್​ಗಳ ಮುನ್ನಡೆ ಸಾಧಿಸಿತು. ಇತ್ತ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಆಂಗ್ಲರು 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 25 ರನ್ ಕಲೆಹಾಕಿದೆ. 70 ರನ್​ಗಳ ಹಿನ್ನಡೆಯಲ್ಲಿದೆ.

ಕೆ. ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ನಿರ್ಗಮನದ ಬಳಿಕ ದಿಢೀರ್ ಕುಸಿತ ಕಂಡ ಭಾರತಕ್ಕೆ 9ನೇ ವಿಕೆಟ್​ಗೆ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಬ್ಯಾಟಿಂಗ್ ನಡೆದ ತಂಡದ ಮೊತ್ತವನ್ನು 278ಕ್ಕೆ ತಂದಿಟ್ಟರು.

ಭಾರತ ಪರ ಕೆ. ಎಲ್ ರಾಹುಲ್ 214 ಎಸೆತಗಳಲ್ಲಿ 84 ರನ್ ಬಾರಿಸಿದರೆ, ರವೀಂದ್ರ ಜಡೇಜಾ 86 ಎಸೆತಗಳಲ್ಲಿ 56 ರನ್ ಚಚ್ಚಿದರು. ಭಾರತ 84.5 ಓವರ್​ನಲ್ಲಿ 278 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ರಾಬಿನ್​ಸನ್ 5 ವಿಕೆಟ್ ಕಿತ್ತರೆ, ಜೇಮ್ಸ್ 4 ವಿಕೆಟ್ ಪಡೆದು ವಿಶೇಷ ಸಾಧನೆ ಮಾಡಿದರು.

India vs England: ಥೇಟ್ ರೋಹಿತ್ ಶರ್ಮಾ ರೀತಿಯಲ್ಲೇ ಚೆಂಡನ್ನು ಸಿಕ್ಸ್​ಗೆ ಅಟ್ಟಿದ ಜಸ್​ಪ್ರೀತ್ ಬುಮ್ರಾ: ವಿಡಿಯೋ

Tokyo Olympics: ರಿಲೇಯಲ್ಲಿ ಭಾರತಕ್ಕೆ ನಿರಾಸೆ: ಒಂದು ಸ್ಥಾನದಿಂದ ಕೈತಪ್ಪಿದ ಫೈನಲ್

(India vs England Team india bowler Mohammed Siraj and James Anderson involved in argument)

Published On - 9:17 am, Sat, 7 August 21