ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವುದಕ್ಕೆ ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಇಂಗ್ಲೆಂಡ್ನ ಕೆಲವು ಆಟಗಾರರು ಟೀಮ್ ಇಂಡಿಯಾ (Team India), ಬಿಸಿಸಿಐ (BCCI) ಮೇಲೆ ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ. ದಿ ಸನ್ ವರದಿ ಮಾಡಿರುವ ಪ್ರಕಾರ, ವಿರಾಟ್ ಕೊಹ್ಲಿ (Virat Kohli) ಹಾಗೂ ತಂಡ ಕೊನೆಯ ಕ್ಷಣಗಳಲ್ಲಿ ಕೋವಿಡ್-19 (Covid 19) ಸೋಂಕು ಹರಡುವ ಆತಂಕ ವ್ಯಕ್ತಪಡಿಸಿದ ಕಾರಣ ಪಂದ್ಯ ರದ್ದುಗೊಳಿಸಲು ಬಿಗಿ ಪಟ್ಟು ಹಿಡಿದಿದ್ದರಿಂದ ಇಸಿಬಿಯೊಂದಿಗೆ (ECB) ಚರ್ಚಿಸಿ ಬಿಸಿಸಿಐ ಪಂದ್ಯ ರದ್ದುಗೊಳಿಸಿದೆ. ಇದರಿಂದ ಇಂಗ್ಲೆಂಡ್ನ ಕೆಲ ಆಟಗಾರರು ಕುಪಿತಗೊಂಡಿದ್ದಾರಂತೆ.
ಇದರಿಂದ ಇಂಗ್ಲೆಂಡ್ನ ಓರ್ವ ಸ್ಟಾರ್ ಆಟಗಾರ ಸೆಪ್ಟೆಂಬರ್ 19 ರಿಂದ ಮತ್ತೆ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರಂತೆ. ಈ ಬಾರಿಯ ಐಪಿಎಲ್ನಲ್ಲಿ ಇಂಗ್ಲೆಂಡ್ನ ಜಾನಿ ಬೈರ್ಸ್ಟೋ, ಸ್ಯಾಮ್ ಕುರ್ರನ್, ಮೊಯೀನ್ ಅಲಿ, ಡೇವಿಡ್ ಮಲನ್ ಮತ್ತು ಕ್ರಿಸ್ ವೋಕ್ಸ್ ಆಡಲಿದ್ದಾರೆ. ಆದರೆ, ಇವರಲ್ಲಿ ಓರ್ವ ಆಟಗಾರ ಐಪಿಎಲ್ 2021 ರಿಂದ ಹೊರಗುಳಿಯಲು ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ.
ಬೈರ್ಸ್ಟೋ ಸನ್ರೈಸರ್ಸ್ ಹೈದರಾಬಾದ್ ತಂಡದವರಾಗಿದ್ದರೆ, ಸ್ಯಾಮ್ ಕುರ್ರನ್ ಮತ್ತು ಮೊಯೀನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್, ಡೇವಿಡ್ ಮಲನ್ ಪಂಜಾನ್ ಕಿಂಗ್ಸ್ ಮತ್ತು ಕ್ರಿಸ್ ವೋಕ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರಾಗಿದ್ದಾರೆ.
ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರಿಗೆ ಕೋವಿಡ್-19 ಪಾಸಿಟಿವ್ ಬಂದಿತ್ತು. ಇದರ ನಡುವೆ ಇನ್ನೇನೇ ಶುಕ್ರವಾರ ಭಾರತ ಹಾಗೂ ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್‌ನಲ್ಲಿ ಐದನೇ ಟೆಸ್ಟ್ ಆರಂಭವಾಗಬೇಕಿತ್ತು. ಆದರೆ, ಗುರುವಾರ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಮತ್ತೊಂದು ಕೋವಿಡ್ -19 ಪ್ರಕರಣ ದಾಖಲಾಯಿತು. ಫಿಜಿಯೋ ಯೋಗೇಶ್ ಪರ್ಮಾರ್ ಅವರಿಗೆ ಸೋಂಕು ತಗುಲಿದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಯಿತು.
ಕೊನೇಯ ಕ್ಷಣದ ವರೆಗೂ ಈ ಐದನೇ ಟೆಸ್ಟ್ ಪಂದ್ಯ ನಡೆಯುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯ ಶುರುವಾಗಲು ಇನ್ನೇನು ಕೆಲವೇ ಕ್ಷಣಗಳು ಬಾಕಿಯಿರುವಾಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪಂದ್ಯ ರದ್ದೆಂದು ಘೋಷಿಸಿತು. ಕೋವಿಡ್-19 ಪ್ರಕರಣಗಳು ಹೆಚ್ಚಿದ್ದರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರದ್ದಾಗಲು ಕಾರಣ ಎಂದು ಹೇಳಲಾಗಿದೆ.
Virat Kohli: ಟೆಸ್ಟ್ ಪಂದ್ಯ ರದ್ದು: ವಿರಾಟ್ ಕೊಹ್ಲಿಗಾಗಿ ಮ್ಯಾಂಚೆಸ್ಟರ್ಗೆ ಬರಲಿದೆ ಆರ್ಸಿಬಿಯ ವಿಶೇಷ ವಿಮಾನ
India vs England: ಬಿಸಿಸಿಐಗೆ ತಲೆನೋವಾದ ರೋಹಿತ್, ಜಡೇಜಾ ಸೇರಿ ಟೀಮ್ ಇಂಡಿಯಾದ 6 ಸ್ಟಾರ್ ಆಟಗಾರರು
(India vs England Test Cancelled Some England cricketers angry on Team India and BCCI one player pull out of IPL 2021)