India vs England: 88 ರನ್​ಗೆ 7 ವಿಕೆಟ್: ಭಾರತದ ಮಧ್ಯಮ ಕ್ರಮಾಂಕದಿಂದ ತೀರಾ ಕಳಪೆ ಪ್ರದರ್ಶನ!

| Updated By: Vinay Bhat

Updated on: Aug 14, 2021 | 7:14 AM

ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ. ಎಲ್ ರಾಹುಲ್ 126 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದ್ದು ಬಿಟ್ಟರೆ ಮತ್ಯಾವ ಬ್ಯಾಟ್ಸ್​ಮನ್​ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರಲೇಯಿಲ್ಲ. ಟೆಸ್ಟ್​ ಸ್ಪೆಷಲಿಸ್ಟ್​ ಎಂದೇ ಖ್ಯಾತಿ ಪಡೆದಿರುವ ಚೇತೇಶ್ವರ್ ಪೂಜಾರ ಅವರ ನೈಜ್ಯ ಆಟವನ್ನ ಕಂಡು ಸಮಯವೇ ಕಳೆದಿದೆ.

India vs England: 88 ರನ್​ಗೆ 7 ವಿಕೆಟ್: ಭಾರತದ ಮಧ್ಯಮ ಕ್ರಮಾಂಕದಿಂದ ತೀರಾ ಕಳಪೆ ಪ್ರದರ್ಶನ!
Team India
Follow us on

ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಮಾಡಿದ್ದ ತಪ್ಪನ್ನೇ ಟೀಮ್ ಇಂಡಿಯಾ (Team India) ಲಾರ್ಡ್ಸ್​ನಲ್ಲಿ ಸಾಗುತ್ತಿರುವ ಎರಡನೇ ಟೆಸ್ಟ್​ನಲ್ಲೂ ಮುಂದುವರೆಸುತ್ತಿದೆ. 276 ರನ್​ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ 364 ರನ್​ಗೆ ಸರ್ವಪತನ ಕಂಡಿತು. ಅದರಲ್ಲೂ ಕೊನೆಯ 7 ವಿಕೆಟ್ ಕಳೆದುಕೊಂಡಿದ್ದು ಕೇವಲ 88 ರನ್​ಗೆ ಎಂಬುದು ನಾಚಿಕೆಗೇಡಿನ ಸಂಗತಿ. ಎರಡನೇ ದಿನದ ಎರಡನೇ ಎಸೆತದಲ್ಲೇ ಶತಕ ವೀರ ಕೆ. ಎಲ್ ರಾಹುಲ್ (KL Rahul) ಪೆವಿಲಿಯನ್​ಗೆ ಹೆಜ್ಜೆ ಹಾಕಿದರೆ, ಉಪ ನಾಯಕ ಅಜಿಂಕ್ಯಾ ರಹಾನೆ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡಿ ವಿಕೆಟ್ ಒಪ್ಪಿಸಿದರು.

ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ. ಎಲ್ ರಾಹುಲ್ 126 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದ್ದು ಬಿಟ್ಟರೆ ಮತ್ಯಾವ ಬ್ಯಾಟ್ಸ್​ಮನ್​ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರಲೇಯಿಲ್ಲ. ಟೆಸ್ಟ್​ ಸ್ಪೆಷಲಿಸ್ಟ್​ ಎಂದೇ ಖ್ಯಾತಿ ಪಡೆದಿರುವ ಚೇತೇಶ್ವರ್ ಪೂಜಾರ ಅವರ ನೈಜ್ಯ ಆಟವನ್ನ ಕಂಡು ಸಮಯವೇ ಕಳೆದಿದೆ.

ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಕಳಪೆ ಆಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಭಾರೀ ಚರ್ಚೆಗಳು ನಡೆಯುತ್ತಿದೆ.

 

ಶುಕ್ರವಾರದ ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಭರವಸೆ ಮೂಡಿಸಿದ್ದ ಕೆ. ಎಲ್ ರಾಹುಲ್ 250 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಮೂಲಕ 129 ರನ್​ಗೆ ಇನ್ನಿಂಗ್ಸ್ ಅಂತ್ಯಗೊಳಿಸಿದರೆ, ರಹಾನೆ ಆಟ 1 ರನ್​ಗೆ ಸೀಮಿತವಾಯಿತು. ರವೀಂದ್ರ ಜಡೇಜಾ 40 ರನ್ ಹಾಗೂ ರಿಷಭ್ ಪಂತ್ 37 ರನ್ ಗಳಿಸಿ ತಂಡಕ್ಕೆ ಕೆಲ ಸಮಯ ಆಸರೆಯಾದರು.

ಇಶಾಂತ್ ಶರ್ಮಾ 8, ಮೊಹಮ್ಮದ್ ಶಮಿ ಮತ್ತು ಜಸ್​ಪ್ರೀತ್ ಬುಮ್ರಾ ಸೊನ್ನೆ ಸುತ್ತುವ ಮೂಲಕ ಭಾರತ 364 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 5 ವಿಕೆಟ್ ಕಿತ್ತು ಮಿಂಚಿದರು.

ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ. ರಾರೊ ಬರ್ನ್ಸ್ 49 ರನ್​ಗೆ, ಹಸೀಬ್ ಹಮೀದ್ 0 ಮತ್ತು ಡೊಮಿನಿಕ್ ಸಿಬ್ಲೆ 11 ರನ್​ಗೆ ಔಟ್ ಆದರು. ಆದರೆ, ಇಂಗ್ಲೆಂಡ್​ಗೆ 48 ರನ್ ಗಳಿಸಿ ನಾಯಕ ಜೋ ರೂಟ್ ಆಸರೆಯಾಗಿ ನಿಂತಿದ್ದಾರೆ. ಜಾನಿ ಬೈರ್​ಸ್ಟೋ ಕೂಡ ಕ್ರೀಸ್​ನಲ್ಲಿದ್ದಾರೆ.

ವಿಶ್ವ ಎಡಚರ ದಿನ ಗಾಲ್ಫ್ ಕೋರ್ಸ್​ನಲ್ಲಿ ಸಚಿನ್ ತೆಂಡೂಲ್ಕರ್ ಅವರು ಯುವರಾಜ ಸಿಂಗ್​ರಿಂದ ಸಲಹೆ ಪಡೆದ ಪ್ರಸಂಗ

T20 World Cup: ಇಂತಿಷ್ಟೇ ಆಟಗಾರರಿಗೆ ನಾವು ಹೊಣೆ! ಸೆಪ್ಟೆಂಬರ್ 10 ರೊಳಗೆ ತಂಡ ಪ್ರಕಟಿಸುವಂತೆ ಐಸಿಸಿ ಸೂಚನೆ

(India vs England Twitter flooded with hilarious memes after Team India middle-order failure at second test)