2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಐರ್ಲೆಂಡ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 16 ಓವರ್‌ಗಳಲ್ಲಿ 96 ರನ್‌ಗಳಿಗೆ ಆಲೌಟ್ ಆಯಿತು. ಉತ್ತರವಾಗಿ ಟೀಂ ಇಂಡಿಯಾ 12.2 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರಿಷಭ್ ಪಂತ್ 13ನೇ ಓವರ್‌ನಲ್ಲಿ ಬ್ಯಾರಿ ಮೆಕಾರ್ಥಿ ಎಸೆತದಲ್ಲಿ ರಿವರ್ಸ್ ಸ್ಕೂಪ್‌ನೊಂದಿಗೆ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು. ಭಾರತ ಪರ ನಾಯಕ ರೋಹಿತ್ ಶರ್ಮಾ 52 ರನ್ ಗಳಿಸಿದರೆ, ನಾಯಕನಿಗೆ ಉತ್ತಮ ಸಾಥ್ ನೀಡಿದ ರಿಷಬ್ ಪಂತ್ 36 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು.ಇದೀಗ ಭಾರತ ತಂಡ ಎ ಗುಂಪಿನಲ್ಲಿ ಎರಡು ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದು, ರೋಹಿತ್ ಪಡೆ ತನ್ನ ಮುಂದಿನ ಪಂದ್ಯವನ್ನು ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ.
ಐರ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳಿಂದ ಗೆದ್ದಿದೆ. ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು ಗೆಲುವಿನ ಅರ್ಧಶತಕ ಬಾರಿಸಿದರು.
10 ಓವರ್‌ಗಳಲ್ಲಿ ಭಾರತ ಒಂದು ವಿಕೆಟ್ ಕಳೆದುಕೊಂಡು 76 ರನ್ ಗಳಿಸಿದೆ. ರೋಹಿತ್ ಶರ್ಮಾ 36 ಎಸೆತಗಳಲ್ಲಿ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ 30ನೇ ಅರ್ಧಶತಕ ಪೂರೈಸಿದರು. ಆದರೆ, ಓವರ್ ಮುಗಿದ ತಕ್ಷಣ ಫಿಸಿಯೋ ಜೊತೆ ಮೈದಾನದಿಂದ ಹೊರನಡೆದರು. ಕೆಲವು ಓವರ್‌ಗಳ ಹಿಂದೆ ಅವರ ಕೈಗೆ ಚೆಂಡು ಬಡಿದಿತ್ತು. ಬಹುಶಃ ಈ ಕಾರಣದಿಂದಾಗಿ ಅವರು ನಿವೃತ್ತರಾಗಲು ನಿರ್ಧರಿಸಿದರು. ರೋಹಿತ್ ಬದಲಿಗೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗೆ ಬಂದಿದ್ದಾರೆ.
ಎಂಟು ಓವರ್‌ಗಳಲ್ಲಿ ಭಾರತ ಒಂದು ವಿಕೆಟ್ ಕಳೆದುಕೊಂಡು 52 ರನ್ ಗಳಿಸಿದೆ. ಸದ್ಯ ನಾಯಕ ರೋಹಿತ್ ಶರ್ಮಾ 27 ಎಸೆತಗಳಲ್ಲಿ 30 ರನ್ ಹಾಗೂ ರಿಷಬ್ ಪಂತ್ 16 ಎಸೆತಗಳಲ್ಲಿ 17 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಭಾರತಕ್ಕೆ ಈಗ 72 ಎಸೆತಗಳಲ್ಲಿ 45 ರನ್ ಅಗತ್ಯವಿದೆ.
ಐದು ಓವರ್‌ಗಳಲ್ಲಿ ಭಾರತ ಒಂದು ವಿಕೆಟ್ ಕಳೆದುಕೊಂಡು 33 ರನ್ ಗಳಿಸಿದೆ. ಸದ್ಯ ರೋಹಿತ್ ಶರ್ಮಾ 17 ಎಸೆತಗಳಲ್ಲಿ 22 ರನ್ ಹಾಗೂ ರಿಷಬ್ ಪಂತ್ ಎಂಟು ಎಸೆತಗಳಲ್ಲಿ ಆರು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಪಂದ್ಯದ ಮೂರನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ರೂಪದಲ್ಲಿ ಟೀಂ ಇಂಡಿಯಾಗೆ ಐರ್ಲೆಂಡ್ ಮೊದಲ ಹೊಡೆತ ನೀಡಿದೆ. ಈ ಪಂದ್ಯದಲ್ಲಿ ಕೊಹ್ಲಿ ಗಳಿಸಿದ್ದು ಒಂದೇ ಒಂದು ರನ್. ಟೀಂ ಇಂಡಿಯಾ ಸ್ಕೋರ್ 22/1
ಐರ್ಲೆಂಡ್ ತಂಡವನ್ನು 16 ಓವರ್‌ಗಳಲ್ಲಿ 96 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡದ ಪರ ಗರೆಥ್ ಡೆಲಾನಿ ಗರಿಷ್ಠ 26 ರನ್ ಗಳಿಸಿದರು. ಅದೇ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಭಾರತದ ಪರ ಗರಿಷ್ಠ ಮೂರು ವಿಕೆಟ್ ಪಡೆದರು.
12ನೇ ಓವರ್‌ನಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಲು ಬಂದ ಅಕ್ಷರ್ ಪಟೇಲ್ ಎರಡನೇ ಎಸೆತದಲ್ಲಿಯೇ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಐರ್ಲೆಂಡ್ ತಂಡದ ಎಂಟನೇ ವಿಕೆಟ್ ಉರುಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಮೂರನೇ ವಿಕೆಟ್ ಪಡೆಯುವ ಮೂಲಕ ಐರ್ಲೆಂಡ್ ತಂಡವನ್ನು ತತ್ತರಿಸುವಂತೆ ಮಾಡಿದ್ದಾರೆ. ತಂಡ ಕೇವಲ 49 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು.
ಐರ್ಲೆಂಡ್ ಕೇವಲ 46 ರನ್‌ಗಳಿಗೆ ಆರನೇ ವಿಕೆಟ್ ಕಳೆದುಕೊಂಡಿದೆ. ಈ ಬಾರಿ ಮೊಹಮ್ಮದ್ ಸಿರಾಜ್ ಜಾರ್ಜ್ ಡಾಕ್ರೆಲ್ ಅವರನ್ನು ಔಟ್ ಮಾಡಿದರು.
ಹಾರ್ದಿಕ್ ಪಾಂಡ್ಯಗೆ 2ನೇ ವಿಕೆಟ್. ಕರ್ಟಿಸ್ ಕ್ಯಾಂಫರ್ (12) ವಿಕೆಟ್ ಪತನದೊಂದಿಗೆ ಐರ್ಲೆಂಡ್ 5 ನೇ ವಿಕೆಟ್ ಕಳೆದುಕೊಂಡಿತು.
ಜಸ್ಪ್ರೀತ್ ಬುಮ್ರಾಗೆ ವಿಕೆಟ್. ಹ್ಯಾರಿ ಟೆಕ್ಟರ್ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಐರ್ಲೆಂಡ್ ನ ಮೂರನೇ ವಿಕೆಟ್ ಕೂಡ ಪತನವಾಗಿದ್ದು, ಈ ಬಾರಿ ಹಾರ್ದಿಕ್ ಪಾಂಡ್ಯ, ಲೋರ್ಕನ್ ಟಕರ್ (10) ಅವರನ್ನು ಬೌಲ್ಡ್ ಮಾಡುವ ಮೂಲಕ ಯಶಸ್ಸು ಸಾಧಿಸಿದ್ದಾರೆ.
ಪವರ್‌ಪ್ಲೇ ಮುಗಿದಿದೆ. ಆರು ಓವರ್‌ಗಳ ನಂತರ ಐರ್ಲೆಂಡ್ 4.33 ರನ್ ರೇಟ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡು 26 ರನ್ ಗಳಿಸಿದೆ. ಸದ್ಯ ಲೋರ್ಕನ್ ಟಕರ್ ಮತ್ತು ಹ್ಯಾರಿ ಟೆಕ್ಟರ್ ಕ್ರೀಸ್‌ನಲ್ಲಿದ್ದಾರೆ. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಅರ್ಷದೀಪ್ ಎರಡು ವಿಕೆಟ್ ಪಡೆದರು.
ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಎರಡನೇ ವಿಕೆಟ್ ಪತನವಾಗಿದೆ. ಓವರ್‌ನ ಮೊದಲ ಎಸೆತದಲ್ಲಿ ಅರ್ಷದೀಪ್, ನಾಯಕ ಪಾಲ್ ಸ್ಟಿರ್ಲಿಂಗ್ ವಿಕೆಟ್ ಪಡೆದರೆ, ಆಂಡ್ರ್ಯೂ ಬಲ್ಬಿರ್ನಿ ಓವರ್‌ನ ಕೊನೆಯ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಸದ್ಯ ಲೋರ್ಕನ್ ಟಕರ್ ಮತ್ತು ಹ್ಯಾರಿ ಟೆಕ್ಟರ್ ಕ್ರೀಸ್‌ನಲ್ಲಿದ್ದಾರೆ.
ಐರ್ಲೆಂಡ್ ಮೂರನೇ ಓವರ್‌ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ನಾಯಕ ಪಾಲ್ ಸ್ಟಿರ್ಲಿಂಗ್‌ಗೆ ವಿಕೆಟ್‌ಕೀಪರ್ ರಿಷಬ್ ಪಂತ್ಗೆ ಕ್ಯಾಚಿತ್ತು ಔಟಾದರು.
ಐರ್ಲೆಂಡ್ ಬ್ಯಾಟಿಂಗ್ ಆರಂಭಿಸಿದ್ದು, ಆಂಡ್ರ್ಯೂ ಬಲ್ಬಿರ್ನಿ-ಪಾಲ್ ಸ್ಟಿರ್ಲಿಂಗ್ ಜೋಡಿ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್, ಬೆಂಜಮಿನ್ ವೈಟ್.
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:43 pm, Wed, 5 June 24