AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs IRE: ಟೀಂ ಇಂಡಿಯಾ ಮಾರಕ ದಾಳಿ; ಐರ್ಲೆಂಡ್ 97 ರನ್​ಗಳಿಗೆ ಆಲೌಟ್..!

IND vs IRE, T20 World Cup 2024: ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ವಿಶ್ವಕಪ್ 8ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ, ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ನಲುಗಿ ಕೇವಲ 97 ರನ್​ಗಳಿಗೆ ಆಲೌಟ್ ಆಗಿದೆ.

IND vs IRE: ಟೀಂ ಇಂಡಿಯಾ ಮಾರಕ ದಾಳಿ; ಐರ್ಲೆಂಡ್ 97 ರನ್​ಗಳಿಗೆ ಆಲೌಟ್..!
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Jun 05, 2024 | 9:44 PM

Share

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಐರ್ಲೆಂಡ್ (India vs Ireland) ನಡುವಿನ ಟಿ20 ವಿಶ್ವಕಪ್ (T20 World Cup 2024) 8ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ, ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ನಲುಗಿ ಕೇವಲ 96 ರನ್​ಗಳಿಗೆ ಆಲೌಟ್ ಆಗಿದೆ. ಭಾರತ ವೇಗಿಗಳ ಪರಾಕ್ರಮ ಹೇಗಿತ್ತೆಂದರೆ ಐರ್ಲೆಂಡ್ ತಂಡಕ್ಕೆ ಫೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 16 ಓವರ್‌ಗಳಿಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡ ಐರ್ಲೆಂಡ್ 96 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಉಪನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಟೀಂ ಇಂಡಿಯಾ ಪರ ಅತಿ ಹೆಚ್ಚು 3 ವಿಕೆಟ್ ಕಬಳಿಸಿದರು.

ಒಂದೇ ಓವರ್​ನಲ್ಲಿ 2 ವಿಕೆಟ್

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಐರ್ಲೆಂಡ್​ಗೆ ವೇಗದ ಆರಂಭ ಸಿಗಲಿಲ್ಲ. ಎರಡು ಓವರ್‌ಗಳು ಮುಗಿದಾಗ ಐರ್ಲೆಂಡ್‌ ಸ್ಕೋರ್‌ ವಿಕೆಟ್‌ ನಷ್ಟವಿಲ್ಲದೆ ಏಳು ರನ್‌ ಆಗಿತ್ತು. ಅರ್ಷದೀಪ್ ಸಿಂಗ್ ಎಸೆದ ಮೂರನೇ ಓವರ್‌ನಲ್ಲಿ 2 ವಿಕೆಟ್ ಉರುಳಿದವು. ಮೊದಲ ಎಸೆತದಲ್ಲಿ ಐರ್ಲೆಂಡ್ ನಾಯಕ ಪಾಲ್ ಸ್ಟಿರ್ಲಿಂಗ್,  ವಿಕೆಟ್‌ಕೀಪರ್ ರಿಷಬ್ ಪಂತ್​ಗೆ ಕ್ಯಾಚ್ ನೀಡಿದರೆ, ಓವರ್​ನ ಕೊನೆಯ ಎಸೆತದಲ್ಲಿ ಮಾಜಿ ನಾಯಕ ಆಂಡ್ರ್ಯೂ ಬಲ್ಬಿರ್ನಿ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

ನಂತರ ದಾಳಿಗಿಳಿದ ಉಪನಾಯಕ ಹಾರ್ದಿಕ್ ಪಾಂಡ್ಯ, 10 ರನ್​ಗಳಿಸಿದ್ದ ಲೋರ್ಕನ್ ಟಕರ್​ಗೆ ಪೆವಿಲಿಯನ್ ಹಾದಿ ತೋರಿಸಿದರೆ, ಬುಮ್ರಾ ಎಸೆತದಲ್ಲಿ ಹ್ಯಾರಿ ಟೆಕ್ಟರ್ ಔಟಾದರು.  ತಂಡ ಕೇವಲ 50 ರನ್​ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯಲ್ಲಿ ಹೋರಾಟ ನೀಡಿದ ಗರೆಥ್ ಡೆಲಾನಿ 26 ರನ್ ಬಾರಿಸಿದರೆ, ಜೋಶುವಾ ಲಿಟಲ್ 14 ರನ್​ಗಳ ಕಾಣಿಕೆ ನೀಡಿದರು.

IND vs IRE Playing XI: ಟಾಸ್ ಗೆದ್ದ ಭಾರತ; ತಂಡದಲ್ಲಿ ನಾಲ್ಕು ಬದಲಾವಣೆ..!

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್, ಬೆಂಜಮಿನ್ ವೈಟ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 pm, Wed, 5 June 24

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!