ಇಂದು ವೆಲ್ಲಿಂಗ್‌ಟನ್‌ನಲ್ಲಿ ನಡೆಯಬೇಕಾಗಿದ್ದ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಭಾರೀ ಮಳೆಯಿಂದಾಗಿ ಈ ಪಂದ್ಯದ ಟಾಸ್ ಕೂಡ ನಡೆಯಲಿಲ್ಲ. ಸುದೀರ್ಘ ಕಾಯುವಿಕೆಯ ನಂತರ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಕ್ಕೆ ಬಂದಿದ್ದಾರೆ. ಇದೀಗ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯ ನವೆಂಬರ್ 20 ರಂದು ನಡೆಯಲಿದೆ.
ಇಂದು ವೆಲ್ಲಿಂಗ್‌ಟನ್‌ನಲ್ಲಿ ನಡೆಯಬೇಕಾಗಿದ್ದ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ.
ವೆಲ್ಲಿಂಗ್ಟನ್ನಲ್ಲಿ ಮಳೆ ಇನ್ನೂ ನಿಂತಿಲ್ಲ. ಭಾರತದ ಸಮಯದ ಪ್ರಕಾರ, ಪಂದ್ಯದ ಕಟ್-ಆಫ್ ಸಮಯ ಮಧ್ಯಾಹ್ನ 2:16 ಆಗಿದೆ. ಅಂದರೆ ಇಲ್ಲಿಯವರೆಗೆ ಪಂದ್ಯಕ್ಕಾಗಿ ಕಾಯಲಾಗುವುದು
ವೆಲ್ಲಿಂಗ್ಟನ್ನಲ್ಲಿ ಮತ್ತೊಮ್ಮೆ ಮಳೆ ಆರಂಭವಾಗಿದೆ. ಸದ್ಯ ಜೋರು ಮಳೆಯಾಗುತ್ತಿದ್ದು, ಈ ಕಾರಣದಿಂದ ಪಂದ್ಯ ಆರಂಭಕ್ಕೆ ವಿಳಂಬವಾಗುವುದು ಖಚಿತ.
ವೆಲ್ಲಿಂಗ್ಟನ್‌ನಲ್ಲಿ ಮಳೆ ನಿಂತಿದೆ. ಅಂಪೈರ್‌ಗಳು ಮತ್ತೊಮ್ಮೆ ಪಿಚ್ ಪರಿಶೀಲಿಸುತ್ತಾರೆ ಆದರೆ ಟಾಸ್‌ನಲ್ಲಿ ವಿಳಂಬವಾಗುವುದು ಖಚಿತ.
Published On - 11:35 am, Fri, 18 November 22