India vs New Zealand T20: ರಾಂಚಿ ಪಿಚ್ ಹೇಗಿದೆ?: ಟಾಸ್ ಗೆದ್ದ ತಂಡ ಏನು ಆಯ್ಕೆ ಮಾಡಿಕೊಳ್ಳಬೇಕು?

| Updated By: Vinay Bhat

Updated on: Nov 19, 2021 | 10:53 AM

ndia vs New Zealand 2nd T20I: ಭಾರತ- ನ್ಯೂಜಿಲೆಂಡ್ ನಡುವಣ ಎರಡನೇ ಟಿ20 ಪಂದ್ಯ ನಡೆಯಲಿರುವ ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ರನ್‌ಪ್ರವಾಹ ಹರಿಯುವ ನಿರೀಕ್ಷೆ ಇದೆ. ಜೊತೆಗೆ ಭಾರಿ ಇಬ್ಬನಿಯ ಸಮಸ್ಯೆಯಿಂದಾಗಿ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ.

India vs New Zealand T20: ರಾಂಚಿ ಪಿಚ್ ಹೇಗಿದೆ?: ಟಾಸ್ ಗೆದ್ದ ತಂಡ ಏನು ಆಯ್ಕೆ ಮಾಡಿಕೊಳ್ಳಬೇಕು?
India vs New Zealand T20
Follow us on

ರೋಹಿತ್ ಶರ್ಮಾ (Rohit Sharma) ಹಾಗೂ ರಾಹುಲ್ ದ್ರಾವಿಡ್ (Rahul Dravid) ಅವರ ಕ್ಯಾಪ್ಟನ್ಸಿ ಮತ್ತು ಕೋಚ್ ಕಾಂಬಿನೇಷನ್​ ನ್ಯೂಜಿಲೆಂಡ್ (India vs New Zealand) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ (T20 Series) ಸಖತ್ ಆಗಿ ವರ್ಕೌಟ್ ಆಗಿದೆ. ಕೊನೇ ಹಂತದಲ್ಲಿ ರೋಚಕ ಗೆಲುವು ಸಾಧಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ (Team India) 1-0 ಮುನ್ನಡೆ ಸಾಧಿಸಿದೆ. ಸದ್ಯ ಉಭಯ ತಂಡಗಳು ಎರಡನೇ ಕಾಳಗಕ್ಕೆ ಸಜ್ಜಾಗುತ್ತಿದೆ. ಇಂದು ರಾಂಚಿಯ (Ranchi) ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ದ್ವಿತೀಯ ಟಿ20 ಪಂದ್ಯ ನಡೆಯಲಿದೆ. ಟಿ20 ವಿಶ್ವಕಪ್‌ (T20 World Cup) ರನ್ನರ್ ಅಪ್‌ ತಂಡಕ್ಕೆ ಶಾಕ್ ನೀಡಿ ಸರಣಿ ವಶಪಡಿಸಿಕೊಳ್ಳುವ ಪ್ಲಾನ್​ನಲ್ಲಿ ಭಾರತವಿದ್ದರೆ, ಇತ್ತ ಬ್ಲ್ಯಾಕ್‌ಕ್ಯಾಪ್ಸ್‌ ಕಿವೀಸ್‌ ಸರಣಿ ಸಮಬಲದ ತೀವ್ರ ಒತ್ತಡದಲ್ಲಿದೆ. ಹೀಗಾಗಿ ಇಂದಿನ ಮ್ಯಾಚ್ ಹೈವೋಲ್ಟೇಜ್ ಪಂದ್ಯವಾಗುವುದು ಖಚಿತ.

ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೊನೇ ಓವರ್‌ವರೆಗೂ ಆಟಗಾರರು ಕಷ್ಟಪಡಬೇಕಾಗಿ ಬಂದಿದ್ದು ಕಡೆಗಣಿಸುವಂತಿಲ್ಲ. ಸುಲಭವಾಗಿ ಗೆಲ್ಲಬಹುದಾದ ಪಂದ್ಯದಲ್ಲಿ ಕೊನೇ ಓವರ್‌ನಲ್ಲಿ ಕೆಲ ಆತಂಕದ ಕ್ಷಣಗಳೂ ಎದುರಾದವು. ಹೀಗಾಗಿ ಭಾರತದ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ವಿರಾಟ್ ಕೊಹ್ಲಿ ಗೈರು ಕಾಡದಂತೆ ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ತಂಡಕ್ಕೆ ಭರ್ಜರಿ ಆಗಿ ಆಸರೆಯಾಗಿದ್ದಾರೆ.

ಟೀಮ್ ಇಂಡಿಯಾದ ಬೌಲಿಂಗ್​ನಲ್ಲೂ ಕೆಲವು ತಪ್ಪುಗಳಾಗಿದ್ದು ಸರಿಪಡಿಸಬೇಕಿದೆ. ಪ್ರಮುಖವಾಗಿ ಮೊಹಮ್ಮದ್ ಸಿರಾಜ್ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದು ಮಾತ್ರವಲ್ಲದೆ ಇಂಜುರಿಗೆ ಕೂಡ ತುತ್ತಾದರು. ಹೀಗಾಗಿ ಆವೇಶ್ ಖಾನ್ ಪದಾರ್ಪಣೆ ಮಾಡುವ ಸಂಭವವಿದೆ. ಯುಜ್ವೇಂದ್ರ ಚಹಾಲ್​ಗೆ ಸ್ಥಾನ ಸಿಗುತ್ತಾ ಎಂಬುದು ಕುತೂಹಲ.

ಧೋನಿ ತವರಾದ ರಾಂಚಿಯಲ್ಲಿ ಭಾರತ ಈವರೆಗೆ 2 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಎರಡನ್ನೂ ಗೆದ್ದಿದೆ. 2016ರಲ್ಲಿ ಶ್ರೀಲಂಕಾ ವಿರುದ್ಧ 69 ರನ್‌ ಗೆಲುವು ಸಾಧಿಸಿದರೆ, 2017ರಲ್ಲಿ ಆಸ್ಟ್ರೇಲಿಯವನ್ನು 9 ವಿಕೆಟ್‌ಗಳಿಂದ ಮಣಿಸಿತ್ತು. ಎರಡರಲ್ಲೂ ಧೋನಿಯೇ ಭಾರತದ ಕ್ಯಾಪ್ಟನ್‌ ಆಗಿದ್ದರು. ಈ ಬಾರಿ ಧೋನಿ ಇಲ್ಲದ ಟೀಮ್‌ ಇಂಡಿಯಾ ಅವರ ಊರಲ್ಲಿ ಕಣಕ್ಕಿಳಿಯಲಿದೆ.

ಇನ್ನು ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ರನ್‌ಪ್ರವಾಹ ಹರಿಯುವ ನಿರೀಕ್ಷೆ ಇದೆ. ಜೊತೆಗೆ ಭಾರಿ ಇಬ್ಬನಿಯ ಸಮಸ್ಯೆಯಿಂದಾಗಿ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಟಾಸ್ ಗೆದ್ದ ತಂಡ ಎಂದಿನಂತೆ ಫೀಲ್ಡಿಂಗ್ ಆಯ್ದುಕೊಂಡರೆ ಅರ್ಧ ಪಂದ್ಯ ಗೆದ್ದಂತೆ. ಪಿಚ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡಕ್ಕೂ ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳಿಂದ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. 152 ರನ್‌ ಈ ಅಂಗಣದಲ್ಲಿ ಸರಾಸರಿ ಮೊತ್ತವಾಗಿದೆ.

ಪಂದ್ಯಕ್ಕೆ ಶೇ. 100 ಪ್ರೇಕ್ಷಕರು ಹಾಜರಾಗಲು ಜಾರ್ಖಂಡ್ ಸರ್ಕಾರ ಅನುಮತಿ ನೀಡಿದೆ. ಇದರಿಂದ, 39 ಸಾವಿರ ಪ್ರೇಕ್ಷಕ ಸಾಮರ್ಥ್ಯದ ಜೆಎಸ್‌ಸಿಎ ಸ್ಟೇಡಿಯಂ ಭರ್ತಿಯಾಗುವ ನಿರೀಕ್ಷೆ ಇದೆ. ಆದರೆ ಪಂದ್ಯ ವೀಕ್ಷಿಸಲು ಕೋವಿಡ್ ಲಸಿಕೆಯ ಡೋಸ್ ಅಥವಾ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ.

ಭಾರತ ಸಂಭಾವ್ಯ ಪ್ಲೇಯಿಂಗ್ XI:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ- ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್/ಯುಜ್ವೇಂದ್ರ ಚಹಾಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್.

India Probable Playing XI: 2ನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಮೂರು ಬದಲಾವಣೆ: ಇಲ್ಲಿದೆ ಭಾರತದ ಪ್ಲೇಯಿಂಗ್ XI

India vs New Zealand T20: ಇಂದು ಭಾರತ-ನ್ಯೂಜಿಲೆಂಡ್ 2ನೇ ಟಿ20: ಗೆದ್ದು ಸರಣಿ ವಶಪಡಿಸಿಕೊಳ್ಳುತ್ತ ರೋಹಿತ್ ಪಡೆ?

(India vs New Zealand 2nd T20I Pitch Report of JSCA International Stadium Playing XI)