IND vs NZ, 2nd Test, Day 4, Highlights: 4ನೇ ದಿನ ಮಿಂಚಿದ ಜಯಂತ್ ಯಾದವ್: ಟೆಸ್ಟ್ ಸರಣಿ ವಶಪಡಿಸಿಕೊಂಡ ಭಾರತ
India vs New Zealand 2nd Test Day 3 Live Score Updates: ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವ ಮೂಲಕ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ನ್ಯೂಜಿಲೆಂಡ್ ತನ್ನ ಹಳೇ ಕೆಟ್ಟ ದಾಖಲೆಯನ್ನು ಈ ಬಾರಿಯೂ ಮುಂದುವರೆಸಿದೆ.
LIVE Cricket Score & Updates
-
#TeamIndia win the 2nd Test by 372 runs to clinch the series 1-0.
Scorecard – https://t.co/KYV5Z1jAEM #INDvNZ @Paytm pic.twitter.com/uCdBEH4M6h
— BCCI (@BCCI) December 6, 2021
-
ಭಾರತಕ್ಕೆ ಭರ್ಜರಿ ಜಯ
ನ್ಯೂಜಿಲೆಂಡ್ 56.3 ಓವರ್ನಲ್ಲಿ 167 ರನ್ಗೆ ಆಲೌಟ್ ಆಗೂಲ ಮೂಲಕ ಭಾರತ 372 ರನ್ಗಳ ದೊಡ್ಡ ಮೊತ್ತದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ನ್ಯೂಜಿಲೆಂಡ್ ತನ್ನ ಹಳೇ ಕೆಟ್ಟ ದಾಖಲೆಯನ್ನು ಈ ಬಾರಿಯೂ ಮುಂದುವರೆಸಿದೆ.
-
7ನೇ ವಿಕೆಟ್ ಪತನ
ನಾಲ್ಕನೇ ದಿನದ ಆರಂಭದಲ್ಲೇ ನ್ಯೂಜಿಲೆಂಡ್ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಳ್ಳುತ್ತಿದೆ. ರವೀಂದ್ರ ಬೆನ್ನಲ್ಲೇ ಇದೀಗ ಜಯಂತ್ ಯಾದವ್ ಬೌಲಿಂಗ್ನಲ್ಲಿ ಕೈಲ್ ಜೆಮಿಸನ್ ಖಾತೆ ತೆರೆಯದೆ ಪೆವಿಲಯನ್ ಸೇರಿಕೊಂಡಿದ್ದಾರೆ.
ನ್ಯೂಜಿಲೆಂಡ್ ಸ್ಕೋರ್: 165/7 (53.2 ಓವರ್)
6ನೇ ವಿಕೆಟ್ ಪತನ
ನ್ಯೂಜಿಲೆಂಡ್ನ 6ನೇ ವಿಕೆಟ್ ಪತನಗೊಂಡಿದೆ. ಜಯಂತ್ ಯಾದವ್ ಬೌಲಿಂಗ್ನಲ್ಲಿ 18 ರನ್ ಗಳಿಸಿದ್ದ ರಚಿನ್ ರವೀಂದ್ರ ಅವರು ಪೂಜಾರಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಭಾರತ ಗೆಲುವಿಗೆ ಮತ್ತಷ್ಟು ಸನಿಹವಾಗಿದೆ.
ನ್ಯೂಜಿಲೆಂಡ್ ಸ್ಕೋರ್: 162/6 (52 ಓವರ್)
ಹೆನ್ರಿ ಭರ್ಜರಿ ಆಟ
ನ್ಯೂಜಿಲೆಂಡ್ ಪರ ಹೆನ್ರಿ ನಿಕೋಲ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಬಿರುಸಿನ ಆಟವಾಡುತ್ತಿರುವ ಇವರು 51ನೇ ಓವರ್ನ ಅಶ್ವಿನ್ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್ ಮೂಲಕ ಬೊಂಬಾಟ್ ಬೌಂಡಿರಿಯೊಂದನ್ನು ಬಾರಿಸಿದರು.
ನ್ಯೂಜಿಲೆಂಡ್: 154/5 (51 ಓವರ್)
4ನೇ ದಿನದಾಟ ಆರಂಭ
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ನ 4ನೇ ದಿನದಾಟ ಆರಂಭವಾಗಿದೆ. ಕಿವೀಸ್ ಪರ ರಚಿನ್ ರವೀಂದ್ರ ಮತ್ತು ಹೆನ್ರಿ ನಿಕೋಲ್ಸ್ ಕ್ರೀಸ್ನಲ್ಲಿದ್ದಾರೆ.
ನ್ಯೂಜಿಲೆಂಡ್ ಸ್ಕೋರ್: 144/5 (47.4 ಓವರ್)
ಡ್ಯಾರಿಲ್ ಮಿಚೆಲ್ ಅದ್ಭುತ ಹೋರಾಟ
ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್ನಲ್ಲೂ ಮತ್ತೊಮ್ಮೆ ಟೀಮ್ ಇಂಡಿಯಾ ಬೌಲರ್ಗಳ ದಾಳಿಗೆ ಸಿಲುಕಿ ಪರದಾಡುತ್ತಿದೆ. ಆದರೆ, ಕೇನ್ ವಿಲಿಯಮ್ಸನ್ ಸ್ಥಾನದಲ್ಲಿ ಆಡುವ ಅವಕಾಶ ಪಡೆದಿರುವ ಡ್ಯಾರಿಲ್ ಮಿಚೆಲ್ ಅದ್ಭುತ ಹೋರಾಟ ಪ್ರದರ್ಶಿಸಿದರು. 92 ಎಸೆತಗಳನ್ನು ಎದುರಿಸಿದ ಮಿಚೆಲ್ 7 ಫೋರ್ ಮತ್ತು 2 ಸಿಕ್ಸರ್ ಒಳಗೊಂಡ 60 ರನ್ ಗಳಿಸಿ ಔಟಾದರು.
Hello & good morning from Mumbai for Day 4 of the 2nd @Paytm #INDvNZ Test ?#TeamIndia pic.twitter.com/TUXico0HbY
— BCCI (@BCCI) December 6, 2021
ಭಾರತಕ್ಕೆ ಬೇಕು 5 ವಿಕೆಟ್
ಮೊದಲ ಟೆಸ್ಟ್ನಲ್ಲಿ ಕೊನೇ ವಿಕೆಟ್ ಪಡೆಯಲಾಗದೇ ಡ್ರಾ ಫಲಿತಾಂಶಕ್ಕೆ ತೃಪ್ತಿ ಪಟ್ಟಿದ್ದ ಭಾರತ ತಂಡ ಈಗ ದ್ವಿತೀಯ ಟೆಸ್ಟ್ನಲ್ಲಿ ಪಂದ್ಯ ಮತ್ತು ಸರಣಿ ಎರಡನೂ ಗೆಲ್ಲುವ ಸನಿಹದಲ್ಲಿದೆ. ಕಿವೀಸ್ ಪಡೆಯ ಉಳಿದಿರುವ ಐದು ವಿಕೆಟ್ ಕಿತ್ತರೆ ಟೆಸ್ಟ್ ಸರಣಿ ವಶಪಡಿಸಕೊಂಡ ಸಾಧನೆ ಭಾರತ ಮಾಡಲಿದೆ.
3ನೇ ದಿನದಾಟದ ಅಂತ್ಯಕ್ಕೆ
ಭಾರತ ಮೊದಲ ಇನ್ನಿಂಗ್ಸ್: 109.5 ಓವರ್ಗಳಲ್ಲಿ 325 ರನ್ಗೆ ಆಲ್ಔಟ್
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್: : 28.1 ಓವರ್ಗಳಲ್ಲಿ 62 ರನ್ಗಳಿಗೆ ಆಲ್ಔಟ್
ಭಾರತ 2ನೇ ಇನಿಂಗ್ಸ್: 70 ಓವರ್ಗಳಲ್ಲಿ 7 ವಿಕೆಟ್ಗೆ 276 ರನ್ ಡಿ. (ಮಯಾಂಕ್ 62, ಎಜಾಜ್ ಪಟೇಲ್ 106ಕ್ಕೆ 4).
ನ್ಯೂಜಿಲೆಂಡ್ 2ನೇ ಇನಿಂಗ್ಸ್: 45 ಓವರ್ಗಳಲ್ಲಿ 5 ವಿಕೆಟ್ಗೆ 140 ರನ್ (ಡ್ಯಾರಿಲ್ ಮಿಚೆಲ್ 60, ಹೆನ್ರಿ ನಿಕೋಲ್ಸ್ 36*, ಆರ್ ಅಶ್ವಿನ್ 27ಕ್ಕೆ 3).
IND vs NZ 2nd Test, Day 3 LIVE Score: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು ಬರೋಬ್ಬರಿ 372 ರನ್ಗಳ ಅಮೋಘ ಗೆಲುವು ಕಾಣುವ ಮೂಲಕ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಇದು ಭಾರತ ದಾಖಲಿಸಿದ ಮತ್ತೊಂದು ದೊಡ್ಡ ಮೊತ್ತದ ಗೆಲುವಾಗಿದೆ. ಟೀಮ್ ಇಂಡಿಯಾ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಕಿವೀಸ್ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದು ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 171 ರನ್ಗೆ ಆಲೌಟ್ ಆದರು. ಇದಕ್ಕೂ ಮೊದಲು ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 62 ರನ್ಗೆ ಸರ್ವಪತನ ಕಂಡು ಕೆಟ್ಟ ದಾಖಲೆ ಬರೆದಿತ್ತು. ಈ ಗೆಲುವಿನೊಂದಿಗೆ ಭಾರತ 1-0 ಅಂತರದಿಂದ ಟೆಸ್ಟ್ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಿದೆ.
ಮೂರನೇ ದಿನದಾಟದ ಅಂತ್ಯಕ್ಕೆ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್: 109.5 ಓವರ್ಗಳಲ್ಲಿ 325 ರನ್ಗೆ ಆಲ್ಔಟ್
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್: : 28.1 ಓವರ್ಗಳಲ್ಲಿ 62 ರನ್ಗಳಿಗೆ ಆಲ್ಔಟ್
ಭಾರತ 2ನೇ ಇನಿಂಗ್ಸ್: 70 ಓವರ್ಗಳಲ್ಲಿ 7 ವಿಕೆಟ್ಗೆ 276 ರನ್ ಡಿ. (ಮಯಾಂಕ್ 62, ಎಜಾಜ್ ಪಟೇಲ್ 106ಕ್ಕೆ 4).
ನ್ಯೂಜಿಲೆಂಡ್ 2ನೇ ಇನಿಂಗ್ಸ್: 45 ಓವರ್ಗಳಲ್ಲಿ 5 ವಿಕೆಟ್ಗೆ 140 ರನ್ (ಡ್ಯಾರಿಲ್ ಮಿಚೆಲ್ 60, ಹೆನ್ರಿ ನಿಕೋಲ್ಸ್ 36*, ಆರ್ ಅಶ್ವಿನ್ 27ಕ್ಕೆ 3).
Published On - Dec 06,2021 9:17 AM