India vs New Zealand: ಟೀಮ್ ಇಂಡಿಯಾ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ನ್ಯೂಜಿಲೆಂಡ್: ಟೆಸ್ಟ್ ಸರಣಿ ವಶಪಡಿಸಿಕೊಂಡ ಕೊಹ್ಲಿ ಪಡೆ
ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವ ಮೂಲಕ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ನ್ಯೂಜಿಲೆಂಡ್ ತನ್ನ ಹಳೇ ಕೆಟ್ಟ ದಾಖಲೆಯನ್ನು ಈ ಬಾರಿಯೂ ಮುಂದುವರೆಸಿದೆ. ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಅಂತಿಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ (India) ಬರೋಬ್ಬರಿ 372 ರನ್ಗಳ ಅಮೋಘ ಗೆಲುವು ಕಾಣುವ ಮೂಲಕ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಇದು ಭಾರತ ದಾಖಲಿಸಿದ ದೊಡ್ಡ ಮೊತ್ತದ ಗೆಲುವಾಗಿದೆ. ಟೀಮ್ ಇಂಡಿಯಾ (Team India) ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಕಿವೀಸ್ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದು ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 167 ರನ್ಗೆ ಆಲೌಟ್ ಆದರು. ಇದಕ್ಕೂ ಮೊದಲು ನ್ಯೂಜಿಲೆಂಡ್ (New Zealand) ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 62 ರನ್ಗೆ ಸರ್ವಪತನ ಕಂಡು ಕೆಟ್ಟ ದಾಖಲೆ ಬರೆದಿತ್ತು. ಈ ಗೆಲುವಿನೊಂದಿಗೆ ಭಾರತ 1-0 ಅಂತರದಿಂದ ಮುನ್ನಡೆ ಪಡೆದುಕೊಂಡು ಟೆಸ್ಟ್ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಿದೆ.
ಇಂದು ನಾಲ್ಕನೇ ದಿನ ಜಯಂತ್ ಯಾದವ್ ನ್ಯೂಜಿಲೆಂಡ್ಗೆ ಮಾರಕವಾಗಿ ಪರಿಣಮಿಸಿದರು. ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದ್ದ ನ್ಯೂಜಿಲೆಂಡ್ ಇಂದು ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಹೆನ್ರಿ ನಿಕೋಲ್ಸ್ ಮತ್ತು ರಚಿನ್ ರವೀಂದ್ರ ಇನ್ನಿಂಗ್ಸ್ ಆರಂಭಿಸಿದ ಕೆಲವೇ ಓವರ್ಗಳಲ್ಲಿ ಬೌಲಿಂಗ್ ಮಾಡಲು ಬಂದ ಜಯಂತ್ ನಾಲ್ಕನೇ ದಿನದ ಹೀರೋ ಆದರು.
8 ರನ್ ಗಳಿಸಿದ್ದ ರಚಿನ್ ರವೀಂದ್ರ ಮೊದಲಿಗೆ ಪೂಜಾರಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ ಬಂದ ಬೆನ್ನಲ್ಲೇ ಕೈಲ್ ಜೆಮಿಸನ್ ಹಾಗೂ ಟಿಮ್ ಸೌಥೀ ಖಾತೆ ತೆರೆಯದೆ ಜಯಂತ್ ಬೌಲಿಂಗ್ನಲ್ಲಿ ಪೆವಿಲಯನ್ ಸೇರಿಕೊಂಡರು. ನಂತರ ವಿಲಿಯಂ ಸೋಮರ್ವಿಲ್ಲೆ 1 ರನ್ಗೆ ಸುಸ್ತಾದರೆ, ಹೆನ್ರಿ ನಿಕೋಲ್ಸ್ 44 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ನ್ಯೂಜಿಲೆಂಡ್ 56.3 ಓವರ್ನಲ್ಲಿ 167 ರನ್ಗೆ ಆಲೌಟ್ ಆಯಿತು. ಭಾರತ ಪರ ಎರಡನೇ ಇನ್ನಿಂಗ್ಸ್ನಲ್ಲಿ ಜಯಂತ್ ಯಾದವ್ 4 ವಿಕೆಟ್ ಕಿತ್ತರೆ, ಆರ್. ಅಶ್ವಿನ್ 4 ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.
ಈ ಮೂಲಕ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ನ್ಯೂಜಿಲೆಂಡ್ ತನ್ನ ಹಳೇ ಕೆಟ್ಟ ದಾಖಲೆಯನ್ನು ಈ ಬಾರಿಯೂ ಮುಂದುವರೆಸಿದೆ. ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.
#TeamIndia win the 2nd Test by 372 runs to clinch the series 1-0.
Scorecard – https://t.co/KYV5Z1jAEM #INDvNZ @Paytm pic.twitter.com/uCdBEH4M6h
— BCCI (@BCCI) December 6, 2021
ಈ ಪಂದ್ಯದಲ್ಲಿ ಮೊದಲು ಮಳೆ ಕಾಟದ ನಡುವೆಗೂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ 325 ರನ್ ಗಳಿಸಿ, ಬಳಿಕ ಕಿವೀಸ್ ಪಡೆಯನ್ನು ಪ್ರಥಮ ಇನಿಂಗ್ಸ್ನಲ್ಲಿ 62 ರನ್ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಮಾಡಿತು. ಫಾಲೋ ಆನ್ ಹೇರದೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 69 ರನ್ಗಳಿಸಿತ್ತು.
ಮೂರನೇ ದಿನದಾಟ ಆರಂಭಿಸಿದ ಭಾರತ ಪರ ಮಯಾಂಕ್ ಅಗರ್ವಾಲ್ (62ರನ್, 108 ಎಸೆತ, 9ಬೌಂಡರಿ, 1 ಸಿಕ್ಸರ್) ಹಾಗೂ ಚೇತೇಶ್ವರ ಪೂಜಾರ (47 ರನ್, 97 ಎಸೆತ, 6 ಬೌಂಡರಿ, 1 ಸಿಕ್ಸರ್) ಜೋಡಿ ಉತ್ತಮ ಲಯ ಕಂಡುಕೊಂಡಿತು. ಇದರ ನಡುವೆಯೂ ಅಜಾಜ್ ಪಟೇಲ್ (106ಕ್ಕೆ 4) ಹಾಗೂ ರಚಿನ್ ರವೀಂದ್ರ (56ಕ್ಕೆ 3) ಮಾರಕ ದಾಳಿಯಿಂದ ಗಮನಸೆಳೆದರು. ಬಳಿಕ ಉತ್ತಮ ಟಾರ್ಗೆಟ್ ಪೇರಿಸಿದ ಹಿನ್ನೆಲೆಯಲ್ಲಿ ಭಾರತ ತಂಡ 7 ವಿಕೆಟ್ಗೆ 276 ರನ್ಗಳಿಸಿ ಎರಡನೇ ಇನಿಂಗ್ಸ್ಗೆ ಡಿಕ್ಲೇರ್ ಘೋಷಿಸಿತ್ತು.
Published On - 10:17 am, Mon, 6 December 21
