India vs New Zealand Test: 2ನೇ ಟೆಸ್ಟ್​ಗೆ ಟೀಮ್ ಇಂಡಿಯಾದಲ್ಲಿ ಎರಡು ಮಹತ್ವದ ಬದಲಾವಣೆ: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

| Updated By: Vinay Bhat

Updated on: Dec 02, 2021 | 10:58 AM

India’s Predicted Playing XI For 2nd Test vs New Zealand: ಭಾರತಕ್ಕೆ ಸದ್ಯ ದೊಡ್ಡ ಸಮಸ್ಯೆ ಉಂಟಾಗಿರುವುದು ವಿರಾಟ್ ಕೊಹ್ಲಿಗೆ ಸ್ಥಾನ ಕೊಟ್ಟು ಯಾರನ್ನು ಕೈಬಿಡುವುದು ಎಂಬುದು. ಹಾಗಾದ್ರೆ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಭಾರತ ತಂಡ ಹೇಗಿರಲಿದೆ?, ಇಲ್ಲಿದೆ ನೋಡಿ ಸಂಭಾವ್ಯ ಪ್ಲೇಯಿಂಗ್ ಇಲೆವೆನ್.

India vs New Zealand Test: 2ನೇ ಟೆಸ್ಟ್​ಗೆ ಟೀಮ್ ಇಂಡಿಯಾದಲ್ಲಿ ಎರಡು ಮಹತ್ವದ ಬದಲಾವಣೆ: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ
India Playing XI vs New Zealand
Follow us on

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೂದಲೆಳೆಯ ಅಂತರದಲ್ಲಿ ಗೆಲುವು ಕಾಣಲು ವಿಫಲವಾದ ಭಾರತ (India vs New Zealand 2nd Test) ಸದ್ಯ ಎರಡನೇ ಕದನಕ್ಕೆ ಸಜ್ಜಾಗಿದೆ. ವಿರಾಟ್ ಕೊಹ್ಲಿ (Virat Kohli) ತಂಡಕ್ಕೆ ಕಮ್​ಬ್ಯಾಕ್ ಮಾಡಿರುವುದರಿಂದ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣ (Wankhede Stadium, Mumbai) ಈ ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ. ಕೊಹ್ಲಿ ತಂಡಕ್ಕೆ ಹಿಂತಿರುಗಿರುವುದರಿಂದ ಪ್ಲೇಯಿಂಗ್ ಇಲೆವೆನ್ ಬಗ್ಗೆಯೇ ಟೀಮ್ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿದೆ. ಕೊಹ್ಲಿಯನ್ನು ಆಡಿಸಬೇಕಾದರೆ ಯಾರನ್ನು ಕೈಬಿಡಬೇಕು ಎಂಬ ಯೋಚನೆಯಲ್ಲಿ ಮ್ಯಾನೇಜ್ಮೆಂಟ್ ಇದೆ. ಹಾಗಂತ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕಳಪೆ ಫಾರ್ಮ್​ನಲ್ಲಿರುವ ಅಜಿಂಕ್ಯಾ ರಹಾನೆ (Ajinkya Rahane) ಮತ್ತು ಚೇತೇಶ್ವರ್ ಪೂಜಾರ (Cheteshwar Pujara) ಅವರನ್ನೂ ಕೈಬಿಡಲು ಆಗುವುದಿಲ್ಲ. ಹಿರಿಯ ಆಟಗಾರರ ಅನುಭವ ತಂಡಕ್ಕೆ ಬೇಕೇ ಬೇಕು. ಹಾಗಾದ್ರೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ನಲ್ಲಿ ಭಾರತ ತಂಡ ಹೇಗಿರಲಿದೆ?, ಇಲ್ಲಿದೆ ನೋಡಿ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ (India Predicted Playing XI).

ಭಾರತಕ್ಕೆ ಸದ್ಯ ದೊಡ್ಡ ಸಮಸ್ಯೆ ಉಂಟಾಗಿರುವುದು ಕೊಹ್ಲಿಗೆ ಸ್ಥಾನ ಕೊಟ್ಟು ಯಾರನ್ನು ಕೈಬಿಡುವುದು ಎಂಬುದು. ಕಳೆದ ಟೆಸ್ಟ್​ನಲ್ಲಿ ಕೊಹ್ಲಿ ಸ್ಥಾನಕ್ಕೆ ಶ್ರೇಯಸ್ ಅಯ್ಯರ್​ರನ್ನು ಕರೆತಂದು ಆಡಿಸಲಾಗಿತ್ತು. ಇವರು ಪದಾರ್ಪಣೆ ಪಂದ್ಯದಲ್ಲೇ ಶತಕ ಮತ್ತು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಹೀಗಾಗಿ ಫಾರ್ಮ್​ನಲ್ಲಿರುವ ಇವರನ್ನು ಆಡಿಸುವುದು ಖಚಿತ. ಇವರ ಬದಲು ಮಯಾಂಕ್ ಅಗರ್ವಾಲ್ ಅವರನ್ನು ಕೈಬಿಡುವ ಸಾಧ್ಯತೆ ಇದೆ.

ಹೀಗಾದಾಗ ಓಪನರ್ ಯಾರು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕಾಗಿ ತಂಡದಲ್ಲಿ ಮತ್ತೊಂದು ಬದಲಾವಣೆ ಮಾಡಬಹುದು. ಕುತ್ತಿಗೆ ನೋವಿನಿಂದ ಬಳಲುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ ಅವರಿಗೆ ವಿಶ್ರಾಂತಿ ನೀಡಿ ಕೆಎಸ್ ಭರತ್​ಗೆ ಅವಕಾಶ ನೀಡುವ ಚಾನ್ಸ್ ಇದೆ. ಆಗ ಶುಭ್ಮನ್ ಗಿಲ್ ಜೊತೆ ಭರತ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲು ಬರಲಿದ್ದಾರೆ.

5ನೇ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಆಡಿದರೆ, ಆರನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಲಿದ್ದಾರೆ. ಇನ್ನು ಆಲ್ರೌಂಡರ್​ಗಳಾಗಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಸ್ಥಾನ ಖಚಿತವಾಗಿದೆ. ವೇಗಿಗಳಾಗಿ ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಇದ್ದಾರೆ. ಈ ಪೈಕಿ ಇಶಾಂತ್ ಬದಲು ಮೊಹಮ್ಮದ್ ಸಿರಾಜ್​ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಯಾಕಂದ್ರೆ ಕಳೆದ ಪಂದ್ಯದಲ್ಲಿ ಇಶಾಂತ್ ಅಷ್ಟೊಂದು ಕಮಾಲ್ ಮಾಡಲಿಲ್ಲ.

ಭಾರತ ಸಂಭಾವ್ಯ ಪ್ಲೇಯಿಂಗ್ XI: ಕೆಎಸ್ ಭರತ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಅಜಿಂಕ್ಯಾ ರಹಾನೆ, ಶ್ರೇಯಸ್‌ ಅಯ್ಯರ್‌, ರವೀಂದ್ರ ಜಡೇಜಾ, ಆರ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, ಉಮೇಶ್‌ ಯಾದವ್, ಇಶಾಂತ್ ಶರ್ಮಾ/ ಮೊಹಮ್ಮದ್‌ ಸಿರಾಜ್‌.

ಪಿಚ್ ಹೇಗಿದೆ?:

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿರ್ಣಾಯಕ ಅಂತಿಮ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣವಾಗಿ ಸ್ಪಿನ್ ಸ್ನೇಹಿಯಾದ ಪಿಚ್ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ. ಆದರೆ ಪಿಚ್ ಹಸಿರಾಗಿರಲಿದೆ ಎಂದು ಕೆಲ ವರದಿಗಳು ತಿಳಿಸಿವೆ. ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್ ಸಿದ್ಧಗೊಳಿಸಿದ್ದೇವೆ. ಆತಿಥೇಯ ತಂಡದ ಬಲಕ್ಕೆ ತಕ್ಕ ಪಿಚ್ ನಿರ್ಮಿಸಿದ್ದೇವೆ ಎಂದು ಆತಿಥೇಯ ಮುಂಬೈ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ. ಇದರಿಂದಾಗಿ ಈ ಬಾರಿ ಕಿವೀಸ್‌ಗೆ ಹೆಚ್ಚಿನ ಸ್ಪಿನ್ ಸವಾಲು ಎದುರಾಗುವ ನಿರೀಕ್ಷೆ ಇದೆ.

Virat Kohli: ವಿರಾಟ್ ಕೊಹ್ಲಿ ಸ್ಥಾನಕ್ಕಾಗಿ 2ನೇ ಟೆಸ್ಟ್​ನಿಂದ ಹೊರಗುಳಿಯಲಿದ್ದಾರೆ ಈ ಸ್ಟಾರ್ ಬ್ಯಾಟರ್: ಯಾರು ಗೊತ್ತಾ?

Virat Kohli: ವಿರಾಟ್ ಕೊಹ್ಲಿ ಏಕದಿನ ನಾಯಕತ್ವ: ಕೆಲವೇ ದಿನಗಳಲ್ಲಿ ಹೊರಬೀಳಲಿದೆಯಂತೆ ಶಾಕಿಂಗ್ ಸುದ್ದಿ

(India vs New Zealand 2nd test predicted playing xi with 2 major changes details in kannada)