Virat Kohli: ವಿರಾಟ್ ಕೊಹ್ಲಿ ಏಕದಿನ ನಾಯಕತ್ವ: ಕೆಲವೇ ದಿನಗಳಲ್ಲಿ ಹೊರಬೀಳಲಿದೆಯಂತೆ ಶಾಕಿಂಗ್ ಸುದ್ದಿ

Virat Kohli: ವಿರಾಟ್ ಕೊಹ್ಲಿ ಏಕದಿನ ನಾಯಕತ್ವ: ಕೆಲವೇ ದಿನಗಳಲ್ಲಿ ಹೊರಬೀಳಲಿದೆಯಂತೆ ಶಾಕಿಂಗ್ ಸುದ್ದಿ
Virat Kohli India vs South Africa

India vs South Africa: ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಏಕದಿನ ನಾಯಕತ್ವದಲ್ಲಿ ಮುಂದುವರೆಯುತ್ತಾರ ಅಥವಾ ಇಲ್ಲವೇ? ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಈ ವಾರದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಿಸಿಸಿಐ ಭಾರತ ತಂಡ ಪ್ರಕಟ ಮಾಡಲಿದೆ. ಈ ಸಂದರ್ಭ ಕೊಹ್ಲಿ ನಾಯಕತ್ವದ ಭವಿಷ್ಯ ನಿರ್ಧಾರವಾಗಲಿದೆ.

TV9kannada Web Team

| Edited By: Vinay Bhat

Dec 02, 2021 | 8:30 AM

ವಿರಾಟ್ ಕೊಹ್ಲಿ (Virat Kohli) ಏಕದಿನ ನಾಯಕತ್ವದ ಬಗ್ಗೆ ಹುಟ್ಟಿಕೊಂಡಿರುವ ಸಾಕಷ್ಟು ಪ್ರಶ್ನೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ. ಚೇತನ್ ಶರ್ಮಾ (Chetan Sharma) ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಈ ವಾರದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು (India vs South Africa) ಪ್ರಕಟಮಾಡಲಿದೆ. ಈ ಸಂದರ್ಭ ಕೊಹ್ಲಿ ಏಕದಿನ ನಾಯಕತ್ವದ ಸ್ಥಾನದಲ್ಲೇ ಮುಂದುವರೆಯುತ್ತಾರ ಅಥವಾ ನೂತನ ನಾಯಕನ ಹೆಸರು ಘೋಷಣೆಯಾಗುತ್ತಾ ಎಂಬುದು ತಿಳಿದುಬರಲಿದೆ. ಇದಕ್ಕೆ ಬಲವಾದ ಕಾರಣ ಕೂಡ ಇದೆ. ದಕ್ಷಿಣ ಆಫ್ರಿಕಾದಲ್ಲಿ ಏಕೈಕ ಬಯೊಬಬಲ್ ಇರುವುದರಿಂದ 20ರಿಂದ 23 ಮಂದಿಯ ಭಾರತ ತಂಡವನ್ನು (Team India) ಕಳುಹಿಸುವ ಸಾಧ್ಯತೆ ಇದೆ. ಆದ್ದರಿಂದ ಟಿ20 ತಂಡದ ನಾಯಕನಿಗೇ ಏಕದಿನ ತಂಡವನ್ನೂ ಮುನ್ನಡೆಸುವ ಹೊಣೆ ನೀಡುವ ಚಿಂತನೆ ಇದೆ. ಹೀಗಾಗಿ ಕೊಹ್ಲಿ ಅವರನ್ನು ನಾಯಕತ್ವದಿಂದ (Kohli Captaincy) ಬಿಡಬೇಕೇ ಅಥವಾ ಉಳಿಸಿಕೊಳ್ಳಬೇಕೇ ಎಂಬುದರ ಬಗ್ಗೆ ಚರ್ಚೆಗಳು ನಡೆದಿದ್ದು, ಅಂತಿಮ ನಿರ್ಧಾರ ಹೊರಬೀಳಬೇಕಷ್ಟೆ.

“ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ. ನಮ್ಮ ಕಡೆಯಿಂದ ಎಲ್ಲ ತಯಾರಿ ಮಾಡಿಕೊಂಡಿದ್ದು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೆ ನಾವು ಮುಂದುವರೆಯುತ್ತೇವೆ. ಆದರೆ, ಇದಕ್ಕೂ ಮುನ್ನವೇ ನಾವೆಲ್ಲ ತಯಾರಿ ಕೊಂಡಿದ್ದೇವೆ” ಎಂದು ಬಿಸಿಸಿಐ ಮೂಲಗಳ ಪಿಟಿಐಗೆ ತಿಳಿಸಿವೆ.

ಅಲ್ಲದೆ ಮುಂದಿನ ವರ್ಷ ಟಿ20 ವಿಶ್ವಕಪ್ ಟೂರ್ನಿ ನಡೆಯಲಿರುವುದರಿಂದ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಚುಟುಕು ಕ್ರಿಕೆಟ್ ಮೇಲೆ ಹೆಚ್ಚು ಗಮನ ಹರಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಆಡುವ ಒಟ್ಟು ಆರು ಪಂದ್ಯ ಸೇರಿದಂತೆ ಮುಂದಿನ ಏಳು ತಿಂಗಳಲ್ಲಿ ಟೀಮ್ ಇಂಡಿಯಾ ಒಂಬತ್ತು ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ.

ನಿಗದಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸ:

ಭಾರತದ ಆಟಗಾರರು ನಿಗದಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಸ್ಪಷ್ಟಪಡಿಸಿದ್ದಾರೆ. ಒಮಿಕ್ರೋನ್‌ ಭೀತಿಯಿಂದಾಗಿ ಭಾರತ ತಂಡ ಪ್ರವಾಸ ರದ್ದು ಮಾಡಲಿದೆ ಎಂದು ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಸರಣಿ ನಡೆಯಲು ನಮ್ಮಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಆದರೆ ಆಟಗಾರರ ಆರೋಗ್ಯ, ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್‌ ತಂಡಕ್ಕೆ ಕಠಿಣ ಬಯೋಬಬಲ್‌ ವ್ಯವಸ್ಥೆ ಮಾಡುವುದಾಗಿ ದ.ಆಫ್ರಿಕಾ ವಿದೇಶಾಂಗ ಸಚಿವಾಲಯ ಮಂಗಳವಾರ ಭರವಸೆ ನೀಡಿದೆ. ಸದ್ಯದ ಮಾಹಿತಿಯ ಪ್ರಕಾರ ಡಿ.9 ರಂದು ಭಾರತ ತಂಡ ದ. ಆಫ್ರಿಕಾಕ್ಕೆ ತೆರಳಲಿದ್ದು, 7 ವಾರಗಳ ಅವಧಿಯಲ್ಲಿ 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಲಿದೆ.

ಟೀಮ್ ಇಂಡಿಯಾ ಸದ್ಯ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಮೊದಲ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಕಂಡಿದ್ದು, ಶುಕ್ರವಾರದಿಂದ ಮುಂಬೈನಲ್ಲಿ ಎರಡನೇ ಟೆಸ್ಟ್ ಆರಂಭವಾಗಲಿದೆ. ವಿಶ್ರಾಂತಿಯಿಂದ ಹೊರಗುಳಿದಿದ್ದ ನಾಯಕ ವಿರಾಟ್ ಕೊಹ್ಲಿ ತಂಡ ಸೇರಿಕೊಂಡಿದ್ದಾರೆ.

Dinesh Kartik: 2ನೇ ಟೆಸ್ಟ್​ನಲ್ಲಿ ಶ್ರೇಯಸ್ ಅಯ್ಯರ್ ಆಡಬೇಕಾದರೆ ಈ ಆಟಗಾರ ಸ್ಥಾನ ಬಿಟ್ಟುಕೊಡಬೇಕು ಎಂದ ದಿನೇಶ್ ಕಾರ್ತಿಕ್

(Virat Kohli future India ODI captain decided this week as selects the squad for tour of South Africa)

Follow us on

Related Stories

Most Read Stories

Click on your DTH Provider to Add TV9 Kannada