Dinesh Kartik: 2ನೇ ಟೆಸ್ಟ್‌ನಲ್ಲಿ ಶ್ರೇಯಸ್ ಅಯ್ಯರ್ ಆಡಬೇಕಾದರೆ ಈ ಆಟಗಾರ ಸ್ಥಾನ ಬಿಟ್ಟುಕೊಡಬೇಕು ಎಂದ ದಿನೇಶ್ ಕಾರ್ತಿಕ್
Shreyas Iyer and Ajinkya Rahane: ದಿನೇಶ್ ಕಾರ್ತಿಕ್ ಹೇಳುವ ಪ್ರಕಾರ, ಮುಂಬೈನಲ್ಲಿ ನಡೆಯಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯಕ್ಕೆ ಯುವ ಆಟಗಾರ ಶ್ರೇಯಸ್ ಅಯ್ಯರ್‌ಗಾಗಿ ಅಜಿಂಕ್ಯಾ ರಹಾನೆ ಅವಕಾಶ ಮಾಡಿಕೊಡುವುದು ಉತ್ತಮ ಎಂದಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುನೆ ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಕಂಡಿತು. ಸದ್ಯ ಉಭಯ ತಂಡಗಳು ಎರಡನೇ ಟೆಸ್ಟ್ ಪಂದ್ಯಕ್ಕಾಗಿ (IND vs NZ 2ns Test) ಮುಂಬೈಗೆ ಬಂದಳಿದಿದೆ. ಶುಕ್ರವಾರದಿಂದ ವಿರಾಟ್ ಕೊಹ್ಲಿ (Virat Kohli) ಸಾರಥ್ಯದಲ್ಲಿ ಭಾರತ ಎರಡನೇ ಕದನದಲ್ಲಿ ಕಣಕ್ಕಿಳಿಯಲಿದೆ. ತವರಿನಲ್ಲಿ ಟೀಮ್ ಇಂಡಿಯಾ (Team India) ಇದುವರೆಗೆ ಕಿವೀಸ್ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯ ಸೋತಿಲ್ಲ. ಹೀಗಾಗಿ ಇದೇ ದಾಖಲೆಯನ್ನು ಮುಂದುವರೆಸುವ ಯೋಜನೆಯಲ್ಲಿದೆ. ಆದರೆ, ಇತ್ತ ನ್ಯೂಜಿಲೆಂಡ್ ಐತಿಹಾಸಿಕ ಗೆಲುವಿಗೆ ಹೊಂಚು ಹಾಕುತ್ತಿದೆ. ಇದರ ನಡುವೆ ಎರಡನೇ ಟೆಸ್ಟ್ಗೆ ಭಾರತ ಆಡುವ ಬಳಗದ್ದೇ ದೊಡ್ಡ ಚರ್ಚೆಯಾಗುತ್ತಿದೆ. ಹೀಗಿರುವಾಗ ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹಾಗೂ ಕಾಮೆಂಟೇಟರ್ ಆಗಿರುವ ದಿನೇಶ್ ಕಾರ್ತಿಕ್ (Dinesh Karthik) ಈ ಕುರಿತು ಮಾತನಾಡಿದ್ದಾರೆ.
ದಿನೇಶ್ ಕಾರ್ತಿಕ್ ಹೇಳುವ ಪ್ರಕಾರ, ಯುವ ಆಟಗಾರ ಶ್ರೇಯಸ್ ಅಯ್ಯರ್‌ಗಾಗಿ ಅಜಿಂಕ್ಯಾ ರಹಾನೆ ಅವಕಾಶ ಮಾಡಿಕೊಡುವುದು ಉತ್ತಮ ಎಂದಿದ್ದಾರೆ. “ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಉಪನಾಯಕ ಅಜಿಂಕ್ಯಾ ರಹಾನೆ ವಿರಾಮ ತೆಗೆದುಕೊಳ್ಳುವುದು ಉತ್ತಮ. ಇದರಿಂದ ಆತನಿಗೂ ಸಹಾಯವಾಗಲಿದೆ. ರಹಾನೆ ಮೇಲಿರುವ ಒತ್ತಡ ಇದರಿಂದಾಗಿ ಕಡಿಮೆಯಾಗಲಿದೆ” ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
“ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಂಡು ಉತ್ತಮ ಪ್ರದರ್ಶನ ನೀಡಿರುವ ಕಾರಣದಿಂದಾಗಿ ಖಂಡಿತವಾಗಿಯೂ ರಹಾನೆ ಮೇಲೆ ಒತ್ತಡ ಹೆಚ್ಚಾಗಿರುತ್ತದೆ. ಹಾಗಾಗಿ ಅವರು ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಅವರನ್ನು ಒಂದು ಪಂದ್ಯದಿಂದ ಕೈಬಿಟ್ಟರೆ ನಂತರ ಅವರನ್ನು ಮತ್ತೆ ಸೇರಿಸಿಕೊಳ್ಳಬಹುದು. ಇದರಿಂದಾಗಿ ಯಾವುದೇ ಹಾನಿಯಾಗಲಾರದು”.
“ಜೈಪುರ ಟೆಸ್ಟ್‌ನಲ್ಲಿ ಶ್ರೇಯಸ್ ಅಯ್ಯರ್ ನೀಡಿದ ಪ್ರದರ್ಶನ ಅಮೋಘವಾಗಿತ್ತು. ಆತನಿಂದಾಗಿ ಭಾರತ ಸುರಕ್ಷಿತ ಸ್ಥಾನದಲ್ಲಿತ್ತು. ರಹಾನೆ ಒಂದೆರಡು ಟೆಸ್ಟ್ ಪಂದ್ಯಗಳಲ್ಲಿ ಮಾತ್ರವೇ ರನ್ ಗಳಿಸಿಲ್ಲ ಎಂಬುದಲ್ಲ. ಸುದೀರ್ಘ ಕಾಲದಿಂದ ಅವರಿಂದ ಇದೇ ರೀತಿಯ ಪ್ರದರ್ಶನ ಬರುತ್ತಿದೆ. ಆಡುವ ಬಳಗದಿಂದ ಹೊರಗಿಡುವುದರಿಂದಾಗಿ ಆತನಿಗೆ ಕೆಟ್ಟ ಪರಿಣಾಮ ಬೀರಲಿದೆ ಎಂದು ನನಗೆ ಅನಿಸುವುದಿಲ್ಲ” ಎಂಬುದು ಕಾರ್ತಿಕ್ ಅಭಿಪ್ರಾಯ.
ಮೊದಲ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ ಅವರು ಸ್ಥಾನ ಪಡೆದುಕೊಂಡಿದ್ದು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ. ಸದ್ಯ ಎರಡನೇ ಟೆಸ್ಟ್ಗೆ ಕೊಹ್ಲಿ ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ. ಹೀಗಾದಾಗ ಅಯ್ಯರ್ ಮುಂದಿನ ಟೆಸ್ಟ್‌ನಲ್ಲಿ ಸ್ಥಾನ ಪಡೆಯುತ್ತಾರಾ?, ಪಡೆದರೆ ಯಾರ ಜಾಗ ತುಂಬಲಿದ್ದಾರೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.
10 ಎಸೆತಗಳಲ್ಲಿ 5 ವಿಕೆಟ್ ಪಡೆದ ಮಾಜಿ RCB ಸ್ಪಿನ್ನರ್
(Dinesh Karthik has opined that Ajinkya Rahane could be axed to accommodate Shreyas Iyer for IND vs NZ 2nd Test)