Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ 3rd ODI Match Highlights: ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

TV9 Web
| Updated By: ಪೃಥ್ವಿಶಂಕರ

Updated on:Jan 24, 2023 | 9:10 PM

IND vs NZ 3rd ODI Match Highlights: ಮೂರನೇ ಏಕದಿನ ಪಂದ್ಯವನ್ನು 90 ರನ್‌ಗಳಿಂದ ಗೆದ್ದುಕೊಂಡ ಭಾರತ ಈ ಗೆಲುವಿನೊಂದಿಗೆ ಸರಣಿಯಲ್ಲೂ ಕ್ಲೀನ್ ಸ್ವೀಪ್ ಮಾಡಿದೆ.

IND vs NZ 3rd ODI Match Highlights: ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ
IND vs NZ ODI

3 ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ವೈಟ್ ವಾಶ್ ಮಾಡಿರುವ ಟೀಂ ಇಂಡಿಯಾ ಏಕದಿನ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದೆ. ಹೈದರಾಬಾದ್, ರಾಯ್‌ಪುರ ನಂತರ ಇಂದೋರ್‌ನಲ್ಲೂ ರೋಹಿತ್ ಶರ್ಮಾ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಮೂರನೇ ಏಕದಿನ ಪಂದ್ಯವನ್ನು 90 ರನ್‌ಗಳಿಂದ ಗೆದ್ದುಕೊಂಡ ಭಾರತ ಈ ಗೆಲುವಿನೊಂದಿಗೆ ಸರಣಿಯಲ್ಲೂ ಕ್ಲೀನ್ ಸ್ವೀಪ್ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಅವರ ಅಬ್ಬರದ ಶತಕದ ನೆರವಿನಿಂದಾಗಿ 386 ರನ್‌ಗಳ ಬೃಹತ್ ಗುರಿ ಸೆಟ್ ಮಾಡಿತು. ಇದಕ್ಕುತ್ತರವಾಗಿ ಭಾರತದ ದಾಳಿಯ ಮುಂದೆ ತತ್ತರಿಸಿದ ಕಿವೀಸ್ ತಂಡ 41.2 ಓವರ್ ಗಳಲ್ಲಿ 295 ರನ್​ಗಳಿಗೆ ಆಲೌಟಾಯಿತು.

LIVE NEWS & UPDATES

The liveblog has ended.
  • 24 Jan 2023 09:09 PM (IST)

    ಟೀಂ ಇಂಡಿಯಾಗೆ ಜಯ

    ಚಾಹಲ್ 42ನೇ ಓವರ್‌ನ ಎರಡನೇ ಎಸೆತದಲ್ಲಿ ಸ್ಯಾಂಟ್ನರ್ ಅವರನ್ನು ಔಟ್ ಮಾಡುವ ಮೂಲಕ ನ್ಯೂಜಿಲೆಂಡ್‌ನ 10ನೇ ವಿಕೆಟ್‌ ಉರುಳಿಸಿದರು. ಇದರೊಂದಿಗೆ ಟೀಂ ಇಂಡಿಯಾ 90 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಈ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ.

  • 24 Jan 2023 08:58 PM (IST)

    ಸ್ಯಾಂಟ್ನರ್ ಸಿಕ್ಸರ್

    40ನೇ ಓವರ್ ಎಸೆದ ಕುಲದೀಪ್ ಯಾದವ್ ಅವರ ಮೊದಲ ಎಸೆತದಲ್ಲಿ ಸ್ಯಾಂಟ್ನರ್ ಸಿಕ್ಸರ್ ಬಾರಿಸಿದರು.

  • 24 Jan 2023 08:52 PM (IST)

    ಫರ್ಗುಸನ್ ಔಟ್

    ಲಾಕಿ ಫರ್ಗುಸನ್ ಔಟಾಗಿದ್ದು, ಇದರೊಂದಿಗೆ ನ್ಯೂಜಿಲೆಂಡ್​ನ ಎಂಟನೇ ವಿಕೆಟ್ ಪತನವಾಗಿದೆ. 39 ನೇ ಓವರ್ ಎಸೆದ ಕುಲದೀಪ್ ಅವರ ಐದನೇ ಎಸೆತದಲ್ಲಿ ಫರ್ಗುಸನ್ ಲಾಂಗ್ ಶಾಟ್ ಹೊಡೆಯಲು ಪ್ರಯತ್ನಿಸಿದರು, ಆದರೆ ಚೆಂಡು ಬ್ಯಾಟ್‌ಗೆ ಸರಿಯಾಗಿ ಸಿಗಲಿಲ್ಲ. ರೋಹಿತ್ ಶರ್ಮಾ ಒಂದು ಕೈಯಿಂದ ಕ್ಯಾಚ್ ಹಿಡಿಯುವ ಮೂಲಕ ಫರ್ಗುಸನ್ ಇನ್ನಿಂಗ್ಸ್ ಮುಗಿಸಿದರು.

  • 24 Jan 2023 08:46 PM (IST)

    ಬ್ರೇಸ್‌ವೆಲ್ ಔಟ್

    ಕುಲದೀಪ್ ಯಾದವ್ ಭಾರತಕ್ಕೆ ಬೇಕಿದ್ದ ಅಗತ್ಯ ವಿಕೆಟ್​ ಅನ್ನು ತಂದುಕೊಟ್ಟಿದ್ದಾರೆ. ಬ್ರೇಸ್‌ವೆಲ್ ಅವರನ್ನು ಔಟ್ ಮಾಡಿರುವ ಕುಲದೀಪ್ ಪಂದ್ಯವನ್ನು ಭಾರತದ ಕಡೆ ತಿರುಗಿಸಿದ್ದಾರೆ.

  • 24 Jan 2023 08:19 PM (IST)

    ಕಾನ್ವೇ ಔಟ್

    ಭಾರತಕ್ಕೆ ದೊಡ್ಡ ವಿಕೆಟ್ ಸಿಕ್ಕಿದ್ದು, ಕಾನ್ವೇ ಔಟಾಗಿದ್ದಾರೆ. ಕಾನ್ವೆ ಆಡಿದ 32ನೇ ಓವರ್‌ನ ನಾಲ್ಕನೇ ಎಸೆತ ನೇರವಾಗಿ ರೋಹಿತ್‌ ಶರ್ಮಾ ಅವರ ಕೈ ಸೇರಿತು.

  • 24 Jan 2023 08:11 PM (IST)

    ಕಾನ್ವೇ ಸಿಕ್ಸರ್

    ಸುಂದರ್ ಎಸೆದ 29ನೇ ಓವರ್‌ನ ಮೂರನೇ ಮತ್ತು ನಾಲ್ಕನೇ ಎಸೆತಗಳನ್ನು ಕಾನ್ವೇ ಬೌಂಡರಿ ಗೆರೆ ದಾಟಿಸಿದರು. ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅವರು ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.

  • 24 Jan 2023 07:56 PM (IST)

    ಫಿಲಿಪ್ಸ್ ಔಟ್

    ನ್ಯೂಜಿಲೆಂಡ್‌ಗೆ ಮತ್ತೊಂದು ಹೊಡೆತ ಬಿದ್ದಿದೆ. ಗ್ಲೆನ್ ಫಿಲಿಪ್ಸ್ ಔಟಾಗಿದ್ದಾರೆ. 28ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಠಾಕೂರ್ ಬೌನ್ಸರ್ ಎಸೆದರು, ಅದನ್ನು ಫಿಲಿಪ್ಸ್ ಎಳೆದರು. ಆದರೆ ಚೆಂಡು ಅವರ ಬ್ಯಾಟ್‌ನ ಮೇಲ್ಭಾಗವನ್ನು ತಾಗಿ ಗಾಳಿಯಲ್ಲಿ ಹೋಯಿತು. ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ ಹಿಡಿದರು.

  • 24 Jan 2023 07:55 PM (IST)

    ಕಾನ್ವೇ ಫೋರ್

    26ನೇ ಓವರ್‌ನ ಅಂತ್ಯದಲ್ಲಿ ಕಾನ್ವೆ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಐದನೇ ಮತ್ತು ಆರನೇ ಎಸೆತದಲ್ಲಿ ಕಾನ್ವೇ ಬೌಂಡರಿ ಬಾರಿಸಿದರು.

  • 24 Jan 2023 07:40 PM (IST)

    ಲ್ಯಾಥಮ್ ಔಟ್

    ಕಿವೀಸ್ ನಾಯಕ ಟಾಮ್ ಲಾಥಮ್ ಅವರನ್ನು ಠಾಕೂರ್ ಶೂನ್ಯಕ್ಕೆ ವಜಾಗೊಳಿಸಿದ್ದಾರೆ. ಠಾಕೂರ್ ಬೌಲ್ಡ್ ಮಾಡಿದ ಫುಲ್ ಟಾಸ್ ಬಾಲ್ ಅನ್ನು ನೇರವಾಗಿ ಆಡಿದ ಲಾಥಮ್ ಪಾಂಡ್ಯಗೆ ಕ್ಯಾಚ್ ನೀಡಿದರು.

  • 24 Jan 2023 07:39 PM (IST)

    ಮಿಚೆಲ್ ಔಟ್

    26ನೇ ಓವರ್‌ನಲ್ಲಿ ಬಂದ ಠಾಕೂರ್ ಮೊದಲ ಬಾಲ್ ಬೌನ್ಸರ್ ಬೌಲ್ ಮಾಡಿದರು, ಅದನ್ನು ಮಿಚೆಲ್ ಎಳೆಯಲು ಪ್ರಯತ್ನಿಸಿದರು ಆದರೆ ಸಾಧ್ಯವಾಗಲಿಲ್ಲ. ಚೆಂಡು ವಿಕೆಟ್ ಕೀಪರ್ ಇಶಾನ್ ಕಿಶನ್ ಕೈ ಸೇರಿತು. ಠಾಕೂರ್ ತುಂಬಾ ಆತ್ಮವಿಶ್ವಾಸದಿಂದ ಮನವಿ ಮಾಡಿದರೂ ಅಂಪೈರ್ ಔಟ್ ನೀಡಲಿಲ್ಲ. ಟೀಂ ಇಂಡಿಯಾ ಡಿಆರ್​ಎಸ್ ತೆಗೆದುಕೊಂಡಿತು. ಡಿಆರ್​ಎಸ್​ನಲ್ಲಿ ಚೆಂಡು ಅವರ ಗ್ಲೌಸ್‌ಗೆ ತಾಗಿ ಮಿಚೆಲ್ ಔಟಾಗಿರುವುದು ಸಾಭೀತಾಯಿತು.

  • 24 Jan 2023 07:31 PM (IST)

    ಕಾನ್ವೇ ಶತಕ

    23ನೇ ಓವರ್‌ನಲ್ಲಿ ಚಾಹಲ್ ಎಸೆತದ ಮೊದಲ ಎಸೆತವನ್ನು ಕಾನ್ವೆ ಸಿಕ್ಸರ್‌ಗೆ ಅಟ್ಟಿದರು. ಇದಾದ ನಂತರ ಕಾನ್ವೆ ಮುಂದಿನ ಎಸೆತದಲ್ಲೂ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು.

  • 24 Jan 2023 07:16 PM (IST)

    ಕಾನ್ವೇ ಸಿಕ್ಸರ್

    21ನೇ ಓವರ್ ಎಸೆದ ಕುಲದೀಪ್ ಯಾದವ್ ಅವರ ಓವರ್‌ನ ಎರಡನೇ ಎಸೆತವನ್ನು ಕಾನ್ವೇ ಲಾಂಗ್ ಆನ್‌ ಕಡೆ ಸಿಕ್ಸರ್ ಬಾರಿಸಿದರು.

  • 24 Jan 2023 07:10 PM (IST)

    ಕುಲದೀಪ್​ಗೆ ಬೌಂಡರಿ

    19ನೇ ಓವರ್ ಎಸೆದ ಕುಲದೀಪ್ ಯಾದವ್ ಅವರ ಮೊದಲ ಎಸೆತದಲ್ಲಿ ಕಾನ್ವೆ ಬೌಂಡರಿ ಬಾರಿಸಿದರು. ಕುಲದೀಪ್ ಅವರು ಚೆಂಡನ್ನು ಕಾನ್ವೇ ಫೈನ್ ಲೆಗ್‌ಗೆ ಸ್ವೀಪ್ ಮಾಡಿದರು.

  • 24 Jan 2023 07:07 PM (IST)

    ಕುಲದೀಪ್​ಗೆ ವಿಕೆಟ್

    15ನೇ ಓವರ್‌ನ ಐದನೇ ಎಸೆತದಲ್ಲಿ ಕುಲದೀಪ್, ನಿಕೋಲ್ಸ್ ಅವರನ್ನು ಎಲ್​​ಬಿಡ್ಬ್ಯೂ ಬಲೆಗೆ ಬೀಳಿಸಿದರು. ಇದರೊಂದಿಗೆ ಕುಲದೀಪ್ ಕಾನ್ವೇ ಮತ್ತು ನಿಕೋಲ್ಸ್ ನಡುವಿನ ಜೊತೆಯಾಟವನ್ನು ಮುರಿದರು. ಇಬ್ಬರೂ 106 ರನ್‌ಗಳ ಜೊತೆಯಾಟವಾಡಿದರು

  • 24 Jan 2023 06:49 PM (IST)

    ಕಾನ್ವೇ ಅರ್ಧಶತಕ

    ಕಾನ್ವೇ 14ನೇ ಓವರ್​ನ ನಾಲ್ಕನೇ ಎಸೆತವನ್ನು ಸಿಕ್ಸರ್ ಬಾರಿಸಿ ಅರ್ಧಶತಕ ಪೂರೈಸಿದರು.

  • 24 Jan 2023 06:42 PM (IST)

    ಸುಂದರ್ ಉತ್ತಮ ಬೌಲಿಂಗ್

    12ನೇ ಓವರ್ ಬೌಲ್ ಮಾಡಿದ ಸುಂದರ್ ಉತ್ತಮವಾಗಿ ಬೌಲಿಂಗ್ ಮಾಡಿ ನ್ಯೂಜಿಲೆಂಡ್ ಬ್ಯಾಟ್ಸ್​ಮನ್​ಗಳಿಗೆ ರನ್ ಗಳಿಸುವ ಅವಕಾಶ ನೀಡಲಿಲ್ಲ. ಸುಂದರ್ ಈ ಓವರ್‌ನಲ್ಲಿ ನೀಡಿದ್ದು ಆರು ರನ್ ಮಾತ್ರ.

  • 24 Jan 2023 06:28 PM (IST)

    ಕಾನ್ವೇ ಫೋರ್

    ಎಂಟನೇ ಓವರ್​ನ ನಾಲ್ಕನೇ ಎಸೆತದಲ್ಲಿ ಕಾನ್ವೇ ಬೌಂಡರಿ ಬಾರಿಸಿದರು. ಠಾಕೂರ್ ಎಸೆದ ಶಾರ್ಟ್ ಬಾಲನ್ನು ಕಾನ್ವೇ ಲೆಗ್ ಸೈಡ್​ನಲ್ಲಿ ಬೌಂಡರಿಗಟ್ಟಿದರು.

  • 24 Jan 2023 06:14 PM (IST)

    ನಿಕೋಲ್ಸ್ ಸಿಕ್ಸ್

    ಆರನೇ ಓವರ್​ನ ನಾಲ್ಕನೇ ಎಸೆತದಲ್ಲಿ ಹೆನ್ರಿ ನಿಕೋಲ್ಸ್ ಸಿಕ್ಸರ್ ಬಾರಿಸಿದರು. ಬಳಿಕ ಮುಂದಿನ ಎಸೆತದಲ್ಲಿ ಅವರು ಡೀಪ್ ಸ್ಕ್ವೇರ್ ಲೆಗ್‌ನ ಮೇಲೆ ಬೌಂಡರಿ ಕೂಡ ಬಾರಿಸಿದರು.

  • 24 Jan 2023 06:07 PM (IST)

    ಕಾನ್ವೇ ಫೋರ್

    ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ ಕಾನ್ವೆ ಬೌಂಡರಿ ಬಾರಿಸಿದರು. ಸುಂದರ್ ಎಸೆತವನ್ನು ಕಾನ್ವೇ, ಮಿಡ್ ಆನ್‌ನಲ್ಲಿ ಬೌಂಡರಿಗೆ ಕಳುಹಿಸಿದರು. ಇದಾದ ನಂತರ ನಾಲ್ಕನೇ ಎಸೆತದಲ್ಲಿಯೂ ಕಾನ್ವೇ ಬೌಂಡರಿ ಬಾರಿಸಿದರು.

  • 24 Jan 2023 06:00 PM (IST)

    ಪಾಂಡ್ಯಗೆ ಮೊದಲ ವಿಕೆಟ್

    ಹಾರ್ದಿಕ್ ಪಾಂಡ್ಯ ಈಗಾಗಲೇ ಓವರ್‌ನ ಎರಡನೇ ಎಸೆತದಲ್ಲಿ ಭಾರತಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ ಫಿನ್ ಅಲೆನ್ ಅವರನ್ನು ಬೌಲ್ಡ್ ಮಾಡಿದ ಪಾಂಡ್ಯ, ಶೂನ್ಯಕ್ಕೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

  • 24 Jan 2023 05:11 PM (IST)

    385 ರನ್ ಟಾರ್ಗೆಟ್

    ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಭಾರತ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 385 ರನ್ ಗಳಿಸಿದ್ದು, ಇದರೊಂದಿಗೆ ನ್ಯೂಜಿಲೆಂಡ್ ತಂಡಕ್ಕೆ 386 ರನ್ ಟಾರ್ಗೆಟ್ ನೀಡಿದೆ.

  • 24 Jan 2023 05:10 PM (IST)

    ಪಾಂಡ್ಯ ಔಟ್

    49 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ದೊಡ್ಡ ಹೊಡೆತವನ್ನು ಆಡಲು ಯತ್ನಿಸಿದ ಪಾಂಡ್ಯ, ಲಾಂಗ್ ಆನ್‌ನಲ್ಲಿ ನಿಂತಿದ್ದ ಫೀಲ್ಡರ್ ಕಾನ್ವೆಗೆ ಕ್ಯಾಚಿತ್ತು ಔಟಾಗಿದ್ದಾರೆ.

    ಪಾಂಡ್ಯ – 54 ರನ್, 38 ಎಸೆತಗಳು 3×4 3×6 )

  • 24 Jan 2023 05:06 PM (IST)

    ಪಾಂಡ್ಯ ಅರ್ಧಶತಕ

    49ನೇ ಓವರ್​ನ ಮೊದಲ ಎಸೆತದಲ್ಲಿ ಪಾಂಡ್ಯ ಸಿಕ್ಸರ್ ಬಾರಿಸಿದ ಪಾಂಡ್ಯ ಮುಂದಿನ ಎಸೆತದಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

  • 24 Jan 2023 04:57 PM (IST)

    ಠಾಕೂರ್ ಫೋರ್

    ಠಾಕೂರ್ 47ನೇ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಫರ್ಗುಸನ್ ಅವರ ಶಾರ್ಟ್ ಲೆಗ್ ಸ್ಟಂಪ್‌ ಎಸೆತವನ್ನ ಠಾಕೂರ್ ಫೈನಲ್ ಲೆಗ್‌ ಕಡೆ ಆಡಿ ಬೌಂಡರಿ ಬಾರಿಸಿದರು.

  • 24 Jan 2023 04:45 PM (IST)

    ಸುಂದರ್ ಔಟ್

    ಭಾರತಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ವಾಷಿಂಗ್ಟನ್ ಸುಂದರ್ ಔಟಾಗಿದ್ದಾರೆ. 43ನೇ ಓವರ್‌ನ ಎರಡನೇ ಎಸೆತದಲ್ಲಿ, ಸುಂದರ್ ಬ್ಲೇರ್ ಟಿಕ್ನರ್ ಎಸೆತದಲ್ಲಿ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಮೇಲ್ಭಾಗಕ್ಕೆ ತಾಗಿ ಗಾಳಿಯಲ್ಲಿ ಹೋಯಿತು, ಮಿಚೆಲ್ ಸ್ಯಾಂಟ್ನರ್ ಸುಲಭ ಕ್ಯಾಚ್ ತೆಗೆದುಕೊಂಡರು.

  • 24 Jan 2023 04:44 PM (IST)

    ಫರ್ಗುಸನ್ ಉತ್ತಮ ಓವರ್

    40ನೇ ಓವರ್‌ನಲ್ಲಿ ಫರ್ಗುಸನ್ ನಾಲ್ಕು ರನ್ ನೀಡಿದರು. ಮುಂದಿನ ಓವರ್‌ನಲ್ಲಿ ಸುಂದರ್ ಎರಡು ಬೌಂಡರಿ ಬಾರಿಸಿದರು. ಓವರ್‌ನ ಮೂರನೇ ಎಸೆತದಲ್ಲಿ ಸುಂದರ್ ಮಿಡ್ ಆಫ್‌ನಲ್ಲಿ ಬೌಂಡರಿ ಬಾರಿಸಿದರು.

  • 24 Jan 2023 04:32 PM (IST)

    ಸೂರ್ಯಕುಮಾರ್ ಯಾದವ್ ಔಟ್

    38ನೇ ಓವರ್‌ನಲ್ಲಿ ಫರ್ಗುಸನ್ ಒಂದು ರನ್ ನೀಡಿದರು. ಭಾರತ ಮುಂದಿನ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡಿತು.

  • 24 Jan 2023 04:18 PM (IST)

    ಕೊಹ್ಲಿ ಔಟ್

    ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಜಾಕೋಬ್ ಡಫಿ ತಮ್ಮ ತಂಡಕ್ಕೆ ನಾಲ್ಕನೇ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಕೊಹ್ಲಿ ತನ್ನ 27 ಎಸೆತಗಳಲ್ಲಿ 36 ರನ್ ಗಳಿಸಲಷ್ಟೇ ಶಕ್ತರಾದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಉತ್ತಮ ಪುನರಾಗಮನ ಮಾಡಿದೆ.

  • 24 Jan 2023 04:14 PM (IST)

    ಸೂರ್ಯಕುಮಾರ್ ಅದ್ಭುತ ಸಿಕ್ಸರ್

    36ನೇ ಓವರ್‌ನಲ್ಲಿ ಮೈಕಲ್ ಬ್ರೇಸ್‌ವೆಲ್ 11 ರನ್ ನೀಡಿದರು. ಓವರ್‌ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಮಿಡ್ ವಿಕೆಟ್ ಮೇಲೆ ಅದ್ಭುತ ಸಿಕ್ಸರ್ ಬಾರಿಸಿದರು. ಭಾರತದ ಸ್ಕೋರ್ 300ರ ಸಮೀಪದಲ್ಲಿದೆ.

  • 24 Jan 2023 04:07 PM (IST)

    ಕಿಶನ್ ರನೌಟ್

    ಭಾರತ 35ನೇ ಓವರ್​ನಲ್ಲಿ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತು. ಓವರ್‌ನ ಮೂರನೇ ಎಸೆತದಲ್ಲಿ ಯುವ ಬ್ಯಾಟ್ಸ್‌ಮನ್ ರನೌಟ್ ಆದರು.

  • 24 Jan 2023 04:03 PM (IST)

    ಇಶಾನ್ ಅದ್ಭುತ ಬ್ಯಾಟಿಂಗ್

    ಇಶಾನ್ ಕಿಶನ್ ತಮ್ಮ ಇನ್ನಿಂಗ್ಸ್ ನ ಮೊದಲ ಸಿಕ್ಸರ್ ಬಾರಿಸಿದರು. ಓವರ್‌ನ ಎರಡನೇ ಎಸೆತದಲ್ಲಿ ಇಶಾನ್ ಮಿಡ್ ವಿಕೆಟ್ ಮೇಲೆ 71 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು. ಬಳಿಕ ಐದನೇ ಎಸೆತದಲ್ಲಿ, ಬ್ಯಾಕ್‌ಫೂಟ್‌ನಲ್ಲಿ ಕಿಶನ್ ಬೌಂಡರಿ ಬಾರಿಸಿದರು.

  • 24 Jan 2023 03:55 PM (IST)

    ಕೊಹ್ಲಿ ಫೋರ್

    ವಿರಾಟ್ ಕೊಹ್ಲಿ ಬರುತ್ತಿದ್ದಂತೆಯೇ ದಾಳಿ ಆರಂಭಿಸಿದ್ದಾರೆ. ಟಿಕ್ನರ್‌ನ ಓವರ್‌ನಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದ ಕೊಹ್ಲಿ ಅಬ್ಬರಿಸುವ ಸಿಗ್ನಲ್ ನೀಡಿದ್ದಾರೆ.

  • 24 Jan 2023 03:45 PM (IST)

    ಗಿಲ್ ಶತಕ, ಔಟ್

    ಟಿಕ್ನರ್ 28ನೇ ಓವರ್​ನಲ್ಲಿ 8 ರನ್ ನೀಡಿದರು. ಓವರ್‌ನ ಐದನೇ ಎಸೆತದಲ್ಲಿ, ಗಿಲ್ ಚೆಂಡನ್ನು ಡೀಪ್ ಮಿಡ್-ವಿಕೆಟ್ ಮೇಲೆ ಆಡಿ ಸಿಕ್ಸರ್ ಬಾರಿಸಿದರು. ಆದಾಗ್ಯೂ, ಮುಂದಿನ ಎಸೆತದಲ್ಲಿ ಅವರು ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಡೆವೊನ್ ಕಾನ್ವೆಗೆ ಕ್ಯಾಚ್ ನೀಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 78 ಎಸೆತಗಳನ್ನು ಎದುರಿಸಿದ ಗಿಲ್, 13 ಬೌಂಡರಿ ಮತ್ತು ಐದು ಸಿಕ್ಸರ್‌ ಸಹಿತ 112 ರನ್ ಗಳಿಸಿದರು.

  • 24 Jan 2023 03:34 PM (IST)

    ರೋಹಿತ್ ಶತಕ, ಔಟ್

    ರೋಹಿತ್ ಶರ್ಮಾ 25ನೇ ಓವರ್​ನ ಮೂರನೇ ಎಸೆತದಲ್ಲಿ ಸಿಂಗಲ್ ರನ್ ಕದಿಯುವ ಮೂಲಕ ಶತಕ ಪೂರೈಸಿದರು. ಜನವರಿ 19ರ ನಂತರ ರೋಹಿತ್ ಸಿಡಿಸಿದ ಮೊದಲ ಏಕದಿನ ಶತಕವಿದು. ರೋಹಿತ್ 83 ಎಸೆತಗಳಲ್ಲಿ ಶತಕ ಪೂರೈಸಿದರು. ಬಳಿಕ ಬ್ರೆಸ್​ವೆಲ್​ ಓವರ್​ನಲ್ಲಿ ಔಟಾಗಿ ರೋಹಿತ್ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ.

  • 24 Jan 2023 03:21 PM (IST)

    ಭಾರತದ 200 ರನ್ ಪೂರ್ಣ

    24ನೇ ಓವರ್‌ನಲ್ಲಿ ಫರ್ಗುಸನ್ 6 ರನ್ ನೀಡಿದರು. ಶುಭಮನ್ ಗಿಲ್ ಓವರ್​ನ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಅದರ ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಗಿಲ್ ಒಂದು ರನ್ ಗಳಿಸುವ ಮೂಲಕ ಭಾರತದ ಸ್ಕೋರ್ ಅನ್ನು 200 ರ ಗಡಿ ದಾಟಿಸಿದರು.

  • 24 Jan 2023 03:09 PM (IST)

    ಶತಕದ ಸಮೀಪದಲ್ಲಿ ರೋಹಿತ್ ಶರ್ಮಾ

    21ನೇ ಓವರ್‌ನಲ್ಲಿ ಡೆರಿಲ್ ಮಿಚೆಲ್ 13 ರನ್ ನೀಡಿದರು. ಓವರ್‌ನ ಎರಡನೇ ಎಸೆತದಲ್ಲಿ ರೋಹಿತ್ ಲಾಂಗ್ ಆನ್‌ನಲ್ಲಿ ಸಿಕ್ಸರ್ ಸಿಡಿಸಿದರು. ರೋಹಿತ್ 91 ರನ್ ಗಳಿಸಿ ಶತಕದ ಸಮೀಪ ತಲುಪಿದ್ದಾರೆ.

  • 24 Jan 2023 03:02 PM (IST)

    ಡ್ಯಾರಿಲ್ ಮಿಚೆಲ್ ದುಬಾರಿ ಓವರ್

    ಓವರ್‌ನ ಮೊದಲ ಎಸೆತದಲ್ಲಿ ಗಿಲ್ ಡೀಪ್ ಮಿಡ್ ವಿಕೆಟ್ ಮೇಲೆ ಬೌಂಡರಿ ಬಾರಿಸಿದರೆ, ಮೂರನೇ ಎಸೆತದಲ್ಲಿ ಭಾರತಕ್ಕೆ ಬೈ ಮೂಲಕ ನಾಲ್ಕು ರನ್‌ಗಳು ಬಂದವು. ಬಳಿಕ ಸ್ಯಾಂಟ್ನರ್ ಇದರ ನಂತರ ಮೂರು ರನ್ ನೀಡಿದರು. 20 ಓವರ್‌ಗಳಲ್ಲಿ ಭಾರತದ ಸ್ಕೋರ್ 165 ದಾಟಿದೆ.

  • 24 Jan 2023 02:55 PM (IST)

    150ರ ಗಡಿ ದಾಟಿದ ಭಾರತ

    18ನೇ ಓವರ್‌ನಲ್ಲಿ ಮಿಚೆಲ್ ಸ್ಯಾಂಟ್ನರ್ ನಾಲ್ಕು ರನ್ ನೀಡಿದರು. ಈ ಓವರ್‌ನೊಂದಿಗೆ ಭಾರತದ ಸ್ಕೋರ್ ಕೂಡ 150 ದಾಟಿದೆ.

  • 24 Jan 2023 02:44 PM (IST)

    ಸ್ಯಾಂಟ್ನರ್ ದುಬಾರಿ

    ಸ್ಯಾಂಟ್ನರ್ ತಮ್ಮ ಮೂರನೇ ಓವರ್‌ನಲ್ಲಿ 12 ರನ್ ನೀಡಿದರು. ಓವರ್‌ನ ಆರಂಭದಲ್ಲಿ, ಗಿಲ್ ಬೌಂಡರಿ ಬಾರಿಸಿದರೆ, ಕೊನೆಯ ಎಸೆತದಲ್ಲಿ, ಡೀಪ್ ಎಕ್ಸ್‌ಟ್ರಾ ಕವರ್‌ನಲ್ಲಿ ಸಿಕ್ಸರ್ ಕೂಡ ಹೊಡೆದರು. ಇಲ್ಲಿಯವರೆಗೆ ಕೇವಲ 16 ಓವರ್‌ಗಳು ಮುಗಿದಿದ್ದು, ಭಾರತದ ಸ್ಕೋರ್ 140ರ ಗಡಿ ತಲುಪಿದೆ.

  • 24 Jan 2023 02:33 PM (IST)

    ರೋಹಿತ್ ಶರ್ಮಾ ಅರ್ಧಶತಕ

    14ನೇ ಓವರ್‌ನ ಮೊದಲ ಎಸೆತದಲ್ಲಿ ಬೌಲರ್‌ನ ತಲೆಯ ಮೇಲೆ ಸಿಕ್ಸರ್ ಬಾರಿಸುವ ಮೂಲಕ ರೋಹಿತ್, ತಮ್ಮ 49 ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು.

  • 24 Jan 2023 02:20 PM (IST)

    ರೋಹಿತ್ ಅಬ್ಬರ

    ಜೇಕಬ್ ಡಫಿ ಓವರ್‌ನ ಎರಡನೇ ಎಸೆತವನ್ನು ರೋಹಿತ್, ಮಿಡ್ ವಿಕೆಟ್‌ ಕಡೆಗೆ ಬೌಂಡರಿ ಬಾರಿಸಿದರೆ, ಮುಂದಿನ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್ ಹೊಡೆದರು. ಓವರ್‌ನ ಐದನೇ ಎಸೆತದಲ್ಲಿ ರೋಹಿತ್ ಎರಡನೇ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ 17 ರನ್‌ಗಳು ಬಂದವು.

  • 24 Jan 2023 02:05 PM (IST)

    ರೋಹಿತ್ ಫೋರ್

    ಏಳನೇ ಓವರ್‌ನಲ್ಲಿ ಟಿಕ್ನರ್ 11 ರನ್ ನೀಡಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಗಿಲ್ ಎಕ್ಸ್​ಟ್ರಾ ಕವರ್‌ ಕಡೆ ಬೌಂಡರಿ ಬಾರಿಸಿದರು. ಬಳಿಕ ರೋಹಿತ್ ಕೊನೆಯ ಎಸೆತವನ್ನು ಬೌಂಡರಿಗಟ್ಟಿದರು.

  • 24 Jan 2023 02:00 PM (IST)

    ಡಫ್ಫಿ ದುಬಾರಿ

    ರೋಹಿತ್ ನಂತರ, ಗಿಲ್ ಕೂಡ ಆಕ್ರಮಣಕಾರಿ ರೀತಿಯಲ್ಲಿ ಆಡುತ್ತಿದ್ದಾರೆ. ಓವರ್‌ನ ಎರಡನೇ ಎಸೆತದಲ್ಲಿ ಗಿಲ್ ಫೈನ್ ಲೆಗ್‌ನ ಮೇಲೆ ಸಿಕ್ಸರ್ ಬಾರಿಸಿದರು. ಅದೇ ಸಮಯದಲ್ಲಿ ಐದನೇ ಎಸೆತದಲ್ಲಿ ರೋಹಿತ್ ಮತ್ತೊಮ್ಮೆ ಅದ್ಭುತ ಶಾಟ್ ಬಾರಿಸಿ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಡಫಿ 14 ರನ್ ನೀಡಿದರು.

  • 24 Jan 2023 01:51 PM (IST)

    ರೋಹಿತ್ ಎರಡು ಬೌಂಡರಿ

    ಮೂರನೇ ಓವರ್‌ನಲ್ಲಿ ಜಾಕೋಬ್ ಡಫಿ 8 ರನ್ ನೀಡಿದರು. ಓವರ್‌ನ ಮೊದಲ ಎಸೆತದಲ್ಲಿ ರೋಹಿತ್ ಕವರ್ಸ್‌ ಕಡೆ ಬೌಂಡರಿ ಬಾರಿಸಿದರೆ, ಮೂರನೇ ಎಸೆತದಲ್ಲಿ ಮಿಡ್ ವಿಕೆಟ್‌ ಕಡೆ ಇನ್ನೊಂದು ಬೌಂಡರಿ ಬಾರಿಸಿದರು.

  • 24 Jan 2023 01:42 PM (IST)

    ಗಿಲ್ ಫೋರ್

    ಎರಡನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ರನ್ ಬರಲಿಲ್ಲ. ಇದರ ನಂತರ, ಗಿಲ್ ಮೂರನೇ ಎಸೆತದಲ್ಲಿ ಇನ್ನಿಂಗ್ಸ್‌ನ ಮೊದಲ ಫೋರ್‌ ಹೊಡೆದರು.

  • 24 Jan 2023 01:41 PM (IST)

    ಭಾರತದ ಬ್ಯಾಟಿಂಗ್ ಆರಂಭ

    ಭಾರತದ ಬ್ಯಾಟಿಂಗ್ ಶುರುವಾಗಿದೆ. ರೋಹಿತ್ ಶರ್ಮಾ ಸ್ಟ್ರೈಕ್‌ನಲ್ಲಿದ್ದಾರೆ ಮತ್ತು ಶುಭಮನ್ ಗಿಲ್ ನಾನ್‌ಸ್ಟ್ರೈಕರ್‌ನ ತುದಿಯಲ್ಲಿದ್ದಾರೆ. ನ್ಯೂಜಿಲೆಂಡ್ ಪರ ಜಾಕೋಬ್ ಡಫಿ ಬೌಲಿಂಗ್ ಆರಂಭಿಸಿದ್ದಾರೆ.

  • 24 Jan 2023 01:10 PM (IST)

    ನ್ಯೂಜಿಲೆಂಡ್ ತಂಡ

    ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ಕೀಪರ್/ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಜಾಕೋಬ್ ಡಫಿ, ಬ್ಲೇರ್ ಟಿಕ್ನರ್

  • 24 Jan 2023 01:09 PM (IST)

    ಭಾರತ ತಂಡ

    ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್

  • 24 Jan 2023 01:05 PM (IST)

    ಟಾಸ್ ಗೆದ್ದ ಕಿವೀಸ್

    ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ಇಂದೋರ್‌ನಲ್ಲಿ ನಡೆಯುತ್ತಿದೆ. ಈಗಾಗಲೇ ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಕಿವೀಸ್ ನಾಯಕ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.

Published On - Jan 24,2023 1:01 PM

Follow us
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ