IND vs NZ: ವೆಲ್ಲಿಂಗ್ಟನ್‌ನಲ್ಲಿ ಕ್ರೊಕೊಡೈಲ್ ಬೈಕ್ ಸವಾರಿ ಮಾಡಿದ ಹಾರ್ದಿಕ್- ವಿಲಿಯಮ್ಸನ್; ವಿಡಿಯೋ

| Updated By: ಪೃಥ್ವಿಶಂಕರ

Updated on: Nov 16, 2022 | 12:49 PM

IND vs NZ: ವಾಸ್ತವವಾಗಿ, ಪಾಂಡ್ಯ ಮತ್ತು ವಿಲಿಯಮ್ಸನ್ ಕುಳಿತುಕೊಂಡಿದ್ದ ರಿಕ್ಷಾವನ್ನು ವೆಲ್ಲಿಂಗ್ಟನ್‌ನಲ್ಲಿ ಮೊಸಳೆ ಬೈಕ್ ಎಂದು ಕರೆಯಲಾಗುತ್ತದೆ.

IND vs NZ: ವೆಲ್ಲಿಂಗ್ಟನ್‌ನಲ್ಲಿ ಕ್ರೊಕೊಡೈಲ್ ಬೈಕ್ ಸವಾರಿ ಮಾಡಿದ ಹಾರ್ದಿಕ್- ವಿಲಿಯಮ್ಸನ್; ವಿಡಿಯೋ
Hardik Pandya, Kane Williamson
Follow us on

ಆಸ್ಟ್ರೇಲಿಯಾದಿಂದ ಬರಿಗೈಯಲ್ಲಿ ತವರಿಗೆ ಮರಳಿದ ಟೀಂ ಇಂಡಿಯಾ (Team India) ಇದೀಗ ಏಕದಿನ ಹಾಗೂ ಟಿ20 ಸರಣಿಗಾಗಿ ನ್ಯೂಜಿಲೆಂಡ್​ಗೆ ಕಾಲಿಟ್ಟಿದೆ. ಭಾರತ ಮತ್ತು ನ್ಯೂಜಿಲೆಂಡ್ ( India and New Zealand) ನಡುವಿನ ಟಿ20 ಸರಣಿ ಶುಕ್ರವಾರದಿಂದ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ. ನವೆಂಬರ್ 18 ರಂದು ಟಿ20 ಸರಣಿ ಆರಂಭವಾಗಲಿದ್ದು, ಅಷ್ಟೇ ಸಂಖ್ಯೆಯ ಏಕದಿನ ಸರಣಿಯನ್ನು ಉಭಯ ದೇಶಗಳು ಆಡಲಿವೆ. ಈ ಸರಣಿ ಆರಂಭಕ್ಕೂ ಮುನ್ನ ಎರಡೂ ದೇಶಗಳ ನಾಯಕರು ಟ್ರೋಫಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆದರೆ ಈ ಫೋಟೋಶೂಟ್​ಗೂ ಮುನ್ನ ಈ ಉಭಯ ದೇಶಗಳ ನಾಯಕರು ಕ್ರೊಕೊಡೈಲ್ ಬೈಕ್ ಏರಿ ರಸ್ತೆಗಿಳಿದಿದ್ದು ಎಲ್ಲರನ್ನು ಅಚ್ಚರಿಗೊಳಿಸಿತು.

ವಾಸ್ತವವಾಗಿ, ಪಾಂಡ್ಯ ಮತ್ತು ವಿಲಿಯಮ್ಸನ್ ಕುಳಿತುಕೊಂಡಿದ್ದ ರಿಕ್ಷಾವನ್ನು ವೆಲ್ಲಿಂಗ್ಟನ್‌ನಲ್ಲಿ ಮೊಸಳೆ ಬೈಕ್ (Crocodile Bike) ಎಂದು ಕರೆಯಲಾಗುತ್ತದೆ. ಓರಿಯಂಟಲ್ ಕೊಲ್ಲಿಯಿಂದ ಕುಮುಟುಟೊ ವಾಟರ್‌ಫ್ರಂಟ್‌ಗೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪ್ರಯಾಣಿಸಲು ಈ ಬೈಕ್ ಅನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ನ್ಯೂಜಿಲೆಂಡ್- ಬಾಂಗ್ಲಾದೇಶ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಪಾಂಡ್ಯಗೆ ಟಿ20 ನಾಯಕತ್ವ

ಅನುಭವಿಗಳಿಗೆ ವಿಶ್ರಾಂತಿ

ಈ ಪ್ರವಾಸದಲ್ಲಿ ವಿಶ್ರಾಂತಿ ಪಡೆದಿರುವ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಹೊರತಾಗಿ ಉಪನಾಯಕ ಕೆಎಲ್ ರಾಹುಲ್ ಮತ್ತು ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿಗೂ ವಿಶ್ರಾಂತಿ ನೀಡಲಾಗಿದೆ. ಅಲ್ಲದೆ ಟಿ20 ವಿಶ್ವಕಪ್ ಆಡಿದ ಹಲವು ಆಟಗಾರರಿಗೆ ಈ ಸರಣಿಯಿಂದ ಕೋಕ್ ನೀಡಲಾಗಿದ್ದು, ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಮೊದಲ ಟಿ20 ಪಂದ್ಯಕ್ಕೂ ಮುನ್ನ ಹಾರ್ದಿಕ್ ಮತ್ತು ವಿಲಿಯಮ್ಸನ್ ಇಬ್ಬರೂ ಬುಧವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಹಾರ್ದಿಕ್, ಅನೇಕ ಹಿರಿಯ ಆಟಗಾರರು ಪ್ರವಾಸದಲ್ಲಿ ವಿಶ್ರಾಂತಿ ಪಡೆದಿದ್ದು, ತಂಡದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಯುವ ಆಟಗಾರರಿಗೆ ಸರಣಿ ಉತ್ತಮ ಅವಕಾಶವಾಗಿದೆ ಎಂದರು.

ಯುವಕರಿಗೆ ಉತ್ತಮ ಅವಕಾಶ

“ಖಂಡಿತವಾಗಿಯೂ, ನೀವು ಹೇಳಿದಂತೆ, ಬಹಳಷ್ಟು ಪ್ರಮುಖ ಆಟಗಾರರು ಈ ಪ್ರವಾಸದಲ್ಲಿಲ್ಲ. ಆದರೆ ಇಲ್ಲಿರುವ ಕೆಲವು ಆಟಗಾರರು ಸಹ ಸುಮಾರು ಒಂದೂವರೆ ವರ್ಷಗಳಿಂದ ಟೀಂ ಇಂಡಿಯಾ ಪರ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಹೀಗಾಗಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಸಾಭೀತುಪಡಿಸಲು ಮತ್ತು ತಮ್ಮಲ್ಲಿರುವ ಸಾಮರ್ಥ್ಯವನ್ನು ಪ್ರದರ್ಶಿಸಲು ಇದು ಒಳ್ಳೇಯ ಸಮಯವಾಗಿದೆ ಎಂದಿದ್ದಾರೆ.

ನ್ಯೂಜಿಲೆಂಡ್ ಟಿ20 ಸರಣಿಗೆ ತಂಡ- ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ಉಪನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್ ಮತ್ತು ಉಮ್ರಾನ್ ಮಲಿಕ್.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Wed, 16 November 22