IND vs NZ T20 Live Streaming: ಭಾರತ- ಕಿವೀಸ್ ಮುಖಾಮುಖಿ; ನೇರ ಪ್ರಸಾರ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ

| Updated By: ಪೃಥ್ವಿಶಂಕರ

Updated on: Nov 17, 2022 | 3:39 PM

IND vs NZ T20 Live Streaming: ಮುಂದಿನ ಟಿ20 ವಿಶ್ವಕಪ್‌ಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಹೊಸ ಪ್ರತಿಭೆಗಳನ್ನು ಹುಡುಕಲು ನಮಗೆ ಸಮಯವಿದೆ. ಬಹಳಷ್ಟು ಕ್ರಿಕೆಟ್ ಆಡಲಾಗುತ್ತದೆ ಮತ್ತು ಅನೇಕ ಆಟಗಾರರಿಗೆ ಅವಕಾಶಗಳು ಸಿಗುತ್ತವೆ ಎಂದು ಪಾಂಡ್ಯ ಹೇಳಿದ್ದಾರೆ.

IND vs NZ T20 Live Streaming: ಭಾರತ- ಕಿವೀಸ್ ಮುಖಾಮುಖಿ; ನೇರ ಪ್ರಸಾರ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ
ಟೀಂ ಇಂಡಿಯಾ
Follow us on

ಟಿ20 ವಿಶ್ವಕಪ್‌ನ (T20 World Cup 2022) ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಎದುರು ಸೋತು ಟೂರ್ನಿಯಿಂದ ಹೊರಬಿದ್ದಿದ್ದ ಭಾರತ ತಂಡ ಇದೀಗ ನ್ಯೂಜಿಲೆಂಡ್ (New Zealand and India) ಪ್ರವಾಸವನ್ನು ಪ್ರಾರಂಭಿಸಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಶುಕ್ರವಾರ ಮೂರು ಟಿ20 ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಈ ಸರಣಿಯಲ್ಲಿ ತಂಡದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಅದೇ ಸಮಯದಲ್ಲಿ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಬದಲಿಗೆ ವಿವಿಎಸ್ ಲಕ್ಷ್ಮಣ್ (VVS Laxman) ಈ ಪ್ರವಾಸದಲ್ಲಿ ಆಟಗಾರರೊಂದಿಗೆ ಇದ್ದಾರೆ. ಮೂರು ಟಿ20 ಸರಣಿಯ ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

ಪಂದ್ಯಕ್ಕೂ ಮುನ್ನ ಮಾತನಾಡಿದ ಮುಖ್ಯ ಕೋಚ್ ಲಕ್ಷ್ಮಣ್, ಇಂಗ್ಲೆಂಡ್‌ನಂತಹ ತಂಡವನ್ನು ಆಯ್ಕೆ ಮಾಡುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ. ಇದು ಇಂದಿನ ಅಗತ್ಯವಾಗಿದೆ ಮತ್ತು ಹೆಚ್ಚು ಹೆಚ್ಚು ತಂಡಗಳು ಇದನ್ನು ತಮ್ಮ ಆಯ್ಕೆ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುತ್ತವೆ ಮತ್ತು ಬಹುಮುಖಿ ಆಟಗಾರರನ್ನು ಗುರುತಿಸುತ್ತವೆ. ನಮ್ಮಲ್ಲಿ ಬ್ಯಾಟಿಂಗ್ ಮಾಡುವ ಬೌಲರ್‌ಗಳು ಮತ್ತು ಬೌಲಿಂಗ್ ಮಾಡುವ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಆಲ್​ರೌಂಡರ್​ಗಳು ತಂಡದಲ್ಲಿದ್ದರೆ ತಂಡಕ್ಕೆ ಹೆಚ್ಚಿನ ಡೆಪ್ತ್ ನೀಡುತ್ತದೆ. ಈ ರೀತಿಯ ಆಯ್ಕೆ, ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಮುಕ್ತವಾಗಿ ಆಡಲು ಅನುಕೂಲ ಮಾಡಿಕೊಡುತ್ತದೆ ಎಂದಿದ್ದಾರೆ.

ತಂಡದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ- ಹಾರ್ದಿಕ್

ತಂಡದ ಬಗ್ಗೆ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ಮುಂದಿನ ಟಿ20 ವಿಶ್ವಕಪ್‌ಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಹೊಸ ಪ್ರತಿಭೆಗಳನ್ನು ಹುಡುಕಲು ನಮಗೆ ಸಮಯವಿದೆ. ಬಹಳಷ್ಟು ಕ್ರಿಕೆಟ್ ಆಡಲಾಗುತ್ತದೆ ಮತ್ತು ಅನೇಕ ಆಟಗಾರರಿಗೆ ಅವಕಾಶಗಳು ಸಿಗುತ್ತವೆ. ಹಿರಿಯ ಆಟಗಾರರು ಈ ಪ್ರವಾಸದಲ್ಲಿಲ್ಲ ಆದರೆ ಆಯ್ಕೆಯಾದವರೂ ಸುಮಾರು ಎರಡು ವರ್ಷಗಳಿಂದ ಆಡುತ್ತಿದ್ದಾರೆ. ಅವರಿಗೆ ಈ ಮುಂಚೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಸಿಕ್ಕಿರುವ ಅವಕಾಶದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.

ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಶುಕ್ರವಾರ, ನವೆಂಬರ್ 18 ರಂದು ನಡೆಯಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಟಿ20 ಸರಣಿಯ ಮೊದಲ ಪಂದ್ಯವು ವೆಲ್ಲಿಂಗ್ಟನ್‌ನ ಸ್ಕೈಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಯಾವಾಗ ಆರಂಭವಾಗಲಿದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಟಾಸ್ ನಡೆಯಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ನೇರ ಪ್ರಸಾರ ಎಲ್ಲಿ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ನೇರ ಪ್ರಸಾರ ದೂರದರ್ಶನದಲ್ಲಿ ಇರಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ಲೈವ್ ಸ್ಟ್ರೀಮಿಂಗ್ ಅಮೆಜಾನ್ ಪ್ರೈಮ್‌ನಲ್ಲಿ ಇರಲಿದೆ.

Published On - 3:37 pm, Thu, 17 November 22