ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯುತ್ತಿದೆ. ಗ್ರೀನ್ ಪಾರ್ಕ್‌ನಲ್ಲಿ ಭಾರತ ಎಲ್ಲಾ ತಂಡಗಳ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದೆ ಎಂಬುದು ಒಳ್ಳೆಯ ವಿಚಾರ. ಗ್ರೀನ್ ಪಾರ್ಕ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯ ಇತಿಹಾಸವು 45 ವರ್ಷಗಳಷ್ಟು ಹಳೆಯದು. ಈ 45 ವರ್ಷಗಳಲ್ಲಿ ಭಾರತದ ಗೆಲುವಿನ ದಾಖಲೆ ಶೇಕಡಾ 100 ಆಗಿದೆ. ಅದೇನೆಂದರೆ, ನ್ಯೂಜಿಲೆಂಡ್‌ನ ಕೈ ಯಾವಾಗಲೂ ಖಾಲಿಯಾಗಿರುತ್ತದೆ. ಅಲ್ಲದೇ ಈ ಬಾರಿ ಇತಿಹಾಸವನ್ನು ಬದಲಿಸುವ ಬಗ್ಗೆ ನ್ಯೂಜಿಲೆಂಡ್ ಮಾತನಾಡುತ್ತಿದೆ.
ನ್ಯೂಜಿಲೆಂಡ್ ತಂಡ ಈ ಬಾರಿ ಬದಲಾಗಿದೆಯಂತೆ ತಂಡ ಅದ್ಭುತ ಫಾರ್ಮ್‌ನಲ್ಲಿದೆ. ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಚಾಂಪಿಯನ್ ಆಗಿದೆ, ಅಲ್ಲಿ ಅದು ಭಾರತವನ್ನು ಸೋಲಿಸಿತು. ಇದಲ್ಲದೆ, ಈ ತಂಡದ ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನರ್ ಮತ್ತು ಇಶ್ ಸೋಧಿ ಕೂಡ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಮತ್ತೊಂದೆಡೆ, ಕಾನ್ಪುರದಲ್ಲಿ ಅವರು ನೋಂದಾಯಿಸಿದ ಕೊನೆಯ ಟೆಸ್ಟ್ ಗೆಲುವು ನ್ಯೂಜಿಲೆಂಡ್ ವಿರುದ್ಧವಾಗಿರುವುದು ಭಾರತಕ್ಕೆ ಒಳ್ಳೆಯ ವಿಚಾರವಾಗಿದೆ. 2016ರಲ್ಲಿ ಆಡಿದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಈ ಗೆಲುವನ್ನು ದಾಖಲಿಸಿತ್ತು.
ಕಾನ್ಪುರದಲ್ಲಿ ಭಾರತ vs ನ್ಯೂಜಿಲೆಂಡ್
ಈ ನಾಲ್ಕನೇ ಟೆಸ್ಟ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಗ್ರೀನ್ ಪಾರ್ಕ್ ಪಿಚ್‌ನಲ್ಲಿ ನಡೆದಿತ್ತು. ಈ ಮೊದಲು ಎರಡೂ ತಂಡಗಳು ಇದೇ ಮೈದಾನದಲ್ಲಿ 3 ಬಾರಿ ಮುಖಾಮುಖಿಯಾಗಿದ್ದವು. ಗ್ರೀನ್ ಪಾರ್ಕ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯವು 1976 ರಲ್ಲಿ ಡ್ರಾ ಆಗಿತ್ತು. ಇದಾದ ನಂತರ 1999ರ ಟೆಸ್ಟ್‌ನಲ್ಲಿ ಗ್ರೀನ್ ಪಾರ್ಕ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾದವು. ಈ ಪಂದ್ಯವನ್ನು ಭಾರತ 8 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದಾದ ಬಳಿಕ 2016ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 197 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಇದರೊಂದಿಗೆ, ಈ ಬಾರಿ ನ್ಯೂಜಿಲೆಂಡ್ ವಿರುದ್ಧದ ಭಾರತ ಗೆಲುವು ಹ್ಯಾಟ್ರಿಕ್ ಅನಿಸಬಹುದು.
ಗ್ರೀನ್ ಪಾರ್ಕ್‌ನ ಒಟ್ಟು ದಾಖಲೆ
ಈಗ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತದ ಒಟ್ಟಾರೆ ದಾಖಲೆಯನ್ನು ನೋಡುವುದಾದರೆ, ಈ ಮೈದಾನದಲ್ಲಿ ಇದುವರೆಗೆ ಆಡಿರುವ 22 ಟೆಸ್ಟ್ ಪಂದ್ಯಗಳಲ್ಲಿ ಭಾರತ 7ರಲ್ಲಿ ಗೆದ್ದು 3ರಲ್ಲಿ ಸೋತಿದ್ದರೆ, 12 ಟೆಸ್ಟ್‌ಗಳು ಡ್ರಾ ಕಂಡಿವೆ. ಕಾನ್ಪುರದಲ್ಲಿ ಟೀಂ ಇಂಡಿಯಾದ ಕೊನೆಯ ಸೋಲು 1983 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧವಾಗಿತ್ತು. ಅಲ್ಲಿಂದೀಚೆಗೆ, ಗ್ರೀನ್ ಪಾರ್ಕ್‌ನಲ್ಲಿ ಭಾರತ ತಂಡ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 5 ಗೆದ್ದು 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.