Gautam Gambhir ಐಸಿಸ್ನಿಂದ ಜೀವ ಬೆದರಿಕೆ ಕರೆ: ಪೊಲೀಸರಿಗೆ ದೂರು ನೀಡಿದ ಬಿಜೆಪಿ ಸಂಸದ ಗೌತಮ್ ಗಂಭೀರ್
Gautam Gambhir Death Threat 'ಐಸಿಸ್ ಕಾಶ್ಮೀರ'ದಿಂದ (ISIS Kashmir) ತನಗೆ ಜೀವ ಬೆದರಿಕೆ ಇದೆ ಎಂದುದೆಹಲಿಯ ಬಿಜೆಪಿ (BJP) ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ದೆಹಲಿ: ದೆಹಲಿಯ ಬಿಜೆಪಿ (BJP) ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ‘ಐಸಿಸ್ ಕಾಶ್ಮೀರ’ದಿಂದ (ISIS Kashmir) ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸಂಬಂಧ ಗಂಭೀರ್ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಡಿಸಿಪಿ ಸೆಂಟ್ರಲ್ ಶ್ವೇತಾ ಚೌಹಾಣ್ ಎಎನ್‌ಐಗೆ ತಿಳಿಸಿದ್ದಾರೆ. ಗೌತಮ್ ಗಂಭೀರ್‌ಗೆ ಇ-ಮೇಲ್ ಮೂಲಕ ಐಸಿಸ್ ಕಾಶ್ಮೀರದಿಂದ ಕೊಲೆ ಬೆದರಿಕೆಗಳು ಬಂದಿವೆ. ತನಿಖೆ ನಡೆಯುತ್ತಿದೆ. ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಶ್ವೇತಾ ಚೌಹಾಣ್ ಹೇಳಿದ್ದಾರೆ. ಪೂರ್ವ ದೆಹಲಿಯನ್ನು ಪ್ರತಿನಿಧಿಸುವ 40 ವರ್ಷದ ಕ್ರಿಕೆಟಿಗ-ರಾಜಕಾರಣಿ, ಅವರು ಮಂಗಳವಾರ ಇಮೇಲ್ ಲಭಿಸಿರುವುದಾಗಿ ಹೇಳಿದ್ದಾರೆ.
(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)
ಇದನ್ನೂ ಓದಿ: Gautam Gambhir: ಟೀಮ್ ಇಂಡಿಯಾದಲ್ಲಿ ಈತ ಇನ್ನೂ ಸ್ಥಾನ ಪಡೆದಿರುವುದು ಅದೃಷ್ಟವೇ ಸರಿ ಎಂದ ಗೌತಮ್ ಗಂಭೀರ್
Published On - 10:54 am, Wed, 24 November 21