AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ರಣ ಜಾಹೀರಾತಿನಲ್ಲಿ ವಿಡಿಯೊ ಕ್ಯುಆರ್ ಕೋಡ್ ಬಳಸಲಿದೆ ಮೋದಿ ಸರ್ಕಾರ

ಕ್ಯುಆರ್ ಕೋಡ್‌ನಲ್ಲಿ ಎಂಬೆಡ್ ಮಾಡಲಾದ ಕಿರು ವಿಡಿಯೊದೊಂದಿಗೆ ಸರ್ಕಾರದ ಮುದ್ರಣ ಜಾಹೀರಾತುಗಳು ಮತ್ತು ಜಾಹೀರಾತಿನ ವಿಷಯಕ್ಕೆ ಸಂಬಂಧಿಸಿದಂತೆ ಸಂದೇಶಕ್ಕೆ ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ಅದರ ಪ್ರಭಾವವನ್ನು ಹೆಚ್ಚಿಸುತ್ತದೆ.

ಮುದ್ರಣ ಜಾಹೀರಾತಿನಲ್ಲಿ ವಿಡಿಯೊ ಕ್ಯುಆರ್ ಕೋಡ್ ಬಳಸಲಿದೆ ಮೋದಿ ಸರ್ಕಾರ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 24, 2021 | 12:51 PM

Share

ದೆಹಲಿ: ಪತ್ರಿಕೆಗಳು ಅಥವಾ ನಿಯತಕಾಲಿಕೆಗಳಿಗಾಗಿ ಕೇಂದ್ರ ಸಚಿವಾಲಯಗಳು ಅಥವಾ ಸಾರ್ವಜನಿಕ ವಲಯದ ಉದ್ಯಮಗಳು (PSUs) ನೀಡಿದ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಸರ್ಕಾರಿ ಜಾಹೀರಾತುಗಳ ಜತೆ ಕ್ಯುಆರ್ ಕೋಡ್‌ (QR Code) ಇರಲಿದ್ದು, ಅದನ್ನು ಸ್ಕ್ಯಾನ್ ಮಾಡುವ ಕಿರು ವಿಡಿಯೊ ನೋಡಬಹುದು ಎಂದು ನ್ಯೂಸ್ 18 ವರದಿ ಮಾಡಿದೆ. ಅಂತಹ ವಿಡಿಯೊಗಳು ಸಂಬಂಧಿತ ಯೋಜನೆಗಳು, ಸಾಧನೆಗಳು, ಕಲ್ಯಾಣ ಕಾರ್ಯಕ್ರಮಗಳು ಅಥವಾ ಮುದ್ರಣ ಜಾಹೀರಾತುಗಳಲ್ಲಿ ಪ್ರಚಾರ ಮಾಡುತ್ತಿರುವ ಉಪಕ್ರಮಗಳ ಕುರಿತು ಇನ್ನಷ್ಟು ಆಕರ್ಷಕವಾಗಿ ವಿವರಿಸುತ್ತದೆ. ಈ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಸಚಿವಾಲಯಗಳು ಅವುಗಳನ್ನು ಸಿದ್ಧಪಡಿಸುತ್ತವೆ. ಸರ್ಕಾರದ ಸಂದೇಶಗಳ ಉತ್ತಮ ಗೋಚರತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅದು ಜಾಹೀರಾತಿನ ವರ್ಧಿತ ಮರುಸ್ಥಾಪನೆ ಮೌಲ್ಯವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಬರೆದ ಪತ್ರ ನ್ಯೂಸ್ 18ಗೆಲಭಿಸಿದೆ., ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ(Apurva Chandra) ಅವರು, ಡಿಜಿಟಲ್ ಮಾಧ್ಯಮವು ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಬಲ ಸಾಧನವಾಗಿದೆ ಮತ್ತು ಸಂವಹನ ಕ್ಷೇತ್ರದಲ್ಲಿ ಅದು ಹೆಚ್ಚು ಪ್ರಭಾವಿ ಎಂದು ಹೇಳಿದ್ದಾರೆ.

ಡಿಜಿಟಲ್ ಮಾಧ್ಯಮದೊಂದಿಗೆ ಮುದ್ರಣ, ಟಿವಿ ಮತ್ತು ರೇಡಿಯೊ ಮುಂತಾದ ವಿವಿಧ ಮಾಧ್ಯಮ ವೇದಿಕೆಗಳ ಒಗ್ಗೂಡಿಕೆಯು  ಪರಿಣಾಮಕಾರಿ ಸಂವಹನಕ್ಕೆ ಅನಿವಾರ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ವರ್ಷ ಆಗಸ್ಟ್ 15 ರಂದು ಭಾರತ ಸರ್ಕಾರವು ನೀಡಿದ ಮುದ್ರಣ ಜಾಹೀರಾತಿನ ಉದಾಹರಣೆಯನ್ನು ಉಲ್ಲೇಖಿಸಿದ ಅವರು ಅದರಲ್ಲಿ ಕ್ಯುಆರ್ ಕೋಡ್‌ನಲ್ಲಿ ವಿಡಿಯೊವನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು. ಮುದ್ರಣ ಮಾಧ್ಯಮಕ್ಕಾಗಿ ಹೊರಡಿಸಲಾದ ಎಲ್ಲಾ ಸರ್ಕಾರಿ ಜಾಹೀರಾತುಗಳು ಇದೇ ರೀತಿಯ ಕೋಡ್ ಅನ್ನು ಹೊಂದಿರಬೇಕು ಎಂದು ಅವರು ಹೇಳಿದರು.

“ಮುದ್ರಣವು ಸಾಂಪ್ರದಾಯಿಕ ರೀತಿಯಲ್ಲಿ ಸಂದೇಶವನ್ನು ಸೃಜನಾತ್ಮಕವಾಗಿ ತಿಳಿಸಿದರೆ, ಕ್ಯುಆರ್ ಕೋಡ್‌ನೊಂದಿಗೆ ಲಿಂಕ್ ಮಾಡಲಾದ ವಿಡಿಯೊ ಸಂದೇಶವನ್ನು ವರ್ಧಿಸಲು ಸಹಾಯ ಮಾಡಿದೆ” ಎಂದು ಅವರು ಹೇಳಿದರು.

ಚಂದ್ರ ಅವರ ಪತ್ರವು ಈ ವರ್ಷದ ಆಗಸ್ಟ್ 15 ರಂದು ಪತ್ರಿಕೆಗಳಲ್ಲಿ ನೀಡಲಾದ ಅರ್ಧ ಪುಟದ ಜಾಹೀರಾತನ್ನು ಉಲ್ಲೇಖಿಸುತ್ತದೆ. ಅದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ಸರ್ಕಾರದ ಶುಭಾಶಯಗಳನ್ನು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಂದೇಶವನ್ನು ಹೊಂದಿದೆ. ದೇಶದ ಸ್ವಾತಂತ್ರ್ಯದ 75 ನೇ ವರ್ಷದ ಸ್ಮರಣಾರ್ಥ ಸರ್ಕಾರವು ಒಂದು ವರ್ಷದಿಂದ ನಡೆಸುತ್ತಿರುವ ಅಭಿಯಾನವಾದ ‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ಓದುಗರು ಭಾಗವಹಿಸುವುದಕ್ಕಾಗಿ ಸ್ಕ್ಯಾನ್ ಮಾಡಲು ಕೇಳುವ ಕ್ಯುಆರ್ ಕೋಡ್ ಅನ್ನು ಸಹ ಇದು ಹೊಂದಿತ್ತು.

ಕ್ಯುಆರ್ ಕೋಡ್‌ನಲ್ಲಿ ಎಂಬೆಡ್ ಮಾಡಲಾದ ಕಿರು ವಿಡಿಯೊದೊಂದಿಗೆ ಸರ್ಕಾರದ ಮುದ್ರಣ ಜಾಹೀರಾತುಗಳು ಮತ್ತು ಜಾಹೀರಾತಿನ ವಿಷಯಕ್ಕೆ ಸಂಬಂಧಿಸಿದಂತೆ ಸಂದೇಶಕ್ಕೆ ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ಅದರ ಪ್ರಭಾವವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

“ಆದ್ದರಿಂದ ಎಲ್ಲಾ ಪ್ರದರ್ಶನ ಜಾಹೀರಾತುಗಳು ಮುದ್ರಣ ಜಾಹೀರಾತಿನ ವಿಷಯದ ಮೇಲೆ ಕ್ಯುಆರ್ ಕೋಡ್ ಎಂಬೆಡೆಡ್ ವೀಡಿಯೊವನ್ನು ಹೊಂದಿರುವುದು ಅಪೇಕ್ಷಣೀಯವೆಂದು ಪರಿಗಣಿಸಲಾಗಿದೆ” ಎಂದು ಚಂದ್ರ ಹೇಳಿದರು.

ಸಚಿವಾಲಯಗಳು ತಮ್ಮ ನಿರೀಕ್ಷಿತ ಮುದ್ರಣ ಜಾಹೀರಾತುಗಳೊಂದಿಗೆ ಕ್ಯುಆರ್ ಕೋಡ್ ಅನ್ನು ಅಳವಡಿಸಿರುವುದನ್ನು ಪರಿಗಣಿಸಲು ವಿನಂತಿಸಿದ ಅವರು, ಪ್ರಿಂಟ್ ಕ್ರಿಯೇಟಿವ್ ಮತ್ತು ಅದರೊಂದಿಗೆ ಲಿಂಕ್ ಮಾಡಲಾದ ಕ್ಯುಆರ್ ಕೋಡ್‌ಗಾಗಿ ರಚಿಸಲಾದ ವಿಡಿಯೊ ವಿಷಯವನ್ನು ಸರಿಯಾದ ಅನುಮೋದನೆಗಳ ನಂತರ ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯದ ಅಡಿಯಲ್ಲಿ ಬ್ಯೂರೋ ಆಫ್ ಔಟ್ರೀಚ್ ಮತ್ತು ಕಮ್ಯುನಿಕೇಷನ್‌ಗೆ ಕಳುಹಿಸಬೇಕು ಎಂದು ಹೇಳಿದರು.

ಕಳೆದ ತಿಂಗಳು ಸಚಿವಾಲಯಗಳಿಗೆ ನಂತರದ ಸಂವಹನದಲ್ಲಿ ಚಂದ್ರ ಅವರು ಈ ಕ್ರಮವು ಓದುಗರಿಗೆ “ಮೌಲ್ಯವರ್ಧನೆ” ಮತ್ತು “ಸಮಗ್ರ ಸಂವಹನ” ವನ್ನು ಒದಗಿಸುತ್ತದೆ ಎಂದು ಪುನರುಚ್ಚರಿಸಿದರು. ಮುದ್ರಣ ಜಾಹೀರಾತಿಗಾಗಿ ಕ್ಯುಆರ್ ಕೋಡ್ ಮೂಲಕ ಲಿಂಕ್ ಮಾಡಲು ವಿಡಿಯೊವನ್ನು ಅಭಿವೃದ್ಧಿಪಡಿಸುವಾಗ ಸೂಕ್ತವಾದ ವಿಷಯವನ್ನು ಚೆನ್ನಾಗಿ ತೋರಿಸಬೇಕು ಎಂದು ಅವರು ಹೇಳಿದರು.

“ಓದುಗರಿಂದ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವಾಗ ಅದು ವಿಡಿಯೊ ಲಿಂಕ್ ಅಥವಾ ಉದ್ದೇಶಕ್ಕಾಗಿ ರಚಿಸಲಾದ ಮಾಹಿತಿ-ಗ್ರಾಫಿಕ್ಸ್ ಇತ್ಯಾದಿಗಳಲ್ಲಿ ಸೂಕ್ತವಾಗಿ ಇಳಿಯಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು,” ಅವರು ವಿನ್ಯಾಸಗೊಳಿಸಿದ ವಿಷಯ ಅಥವಾ ಕ್ಯುಆರ್ ಕೋಡ್ ಸಂದೇಶವನ್ನು ವ್ಯಾಪಕವಾಗಿ ಪ್ರಸಾರ ಮಾಡುವ ಸೂಕ್ತ ವೇದಿಕೆಯ ಮೇಲೆ ಬರಬೇಕು ಎಂದು ಅವರು ಹೇಳಿದರು.

ಸರ್ಕಾರದ ಮೂಲಗಳ ಪ್ರಕಾರ ಕಳೆದ ಕೆಲವು ತಿಂಗಳುಗಳಲ್ಲಿ ಕೇಂದ್ರ ಸರ್ಕಾರವು ಕೆಲವೇ ಕೆಲವು ಜಾಹೀರಾತುಗಳನ್ನು ಬಿಡುಗಡೆ ಮಾಡಿದೆ. ಪ್ರತಿ ನಿರೀಕ್ಷಿತ ಜಾಹೀರಾತನ್ನು ಪ್ರಧಾನ ಮಂತ್ರಿ ಕಚೇರಿಯಿಂದಲೇ ಅನುಮೋದನೆ ಸಿಗಬೇಕು. ಜಾಹೀರಾತಿನ ಮೂಲಕ ಸಂದೇಶ ಕಳುಹಿಸುವುದಕ್ಕೆ ಹೋಲಿಸಿದರೆ ಸರ್ಕಾರವು ನೇರ ಸಂದೇಶ ರವಾನೆಯಲ್ಲಿ ಹೆಚ್ಚು ನಂಬಿಕೆಯಿರುವುದೇ ಇದಕ್ಕೆ ಕಾರಣ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಪಿಎಂ ಮೋದಿ ಟೀಂನಿಂದ ರಾಜಕೀಯಕ್ಕೆ ಬರುವಂತೆ ಪುನೀತ್​ಗೆ ಬಂದಿತ್ತು ಆಹ್ವಾನ; ನಕ್ಕು ಎದ್ದು ಹೋಗಿದ್ದ ಅಪ್ಪು

ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು