
ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ಎರಡಕ್ಕೂ ನಿರ್ಣಾಯಕವಾಗಿದೆ. ಭಾರತಕ್ಕೆ ಒಳ್ಳೆಯ ಸುದ್ದಿ ಏನೆಂದರೆ, ಈ ಪಂದ್ಯದಲ್ಲಿ ಹರ್ಮನ್ ಪಡೆ (Harmanpreet Kaur) ಗೆಲುವು ಸಾಧಿಸಿದರೆ, ಸೆಮಿಫೈನಲ್ ತಲುಪುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇತ್ತ ನ್ಯೂಜಿಲೆಂಡ್ ಗೆದ್ದರೆ, ಭಾರತ ತಂಡ ಬಾಂಗ್ಲಾದೇಶ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಯಾವಾಗಲೂ ಭಾರತದ ಮೇಲೆ ಮೇಲುಗೈ ಸಾಧಿಸಿದೆ. ಆದ್ದರಿಂದ, ನವಿ ಮುಂಬೈನಲ್ಲಿ ಗೆಲುವು ಸಾಧಿಸಲು ಭಾರತ ತಂಡ ತುಂಬಾ ಶ್ರಮಿಸಬೇಕಾಗುತ್ತದೆ.
ಈ ನಿರ್ಣಾಯಕ ಪಂದ್ಯದಲ್ಲಿ ಮತ್ತೊಮ್ಮೆ ಟಾಸ್ ಸೋತಿರುವ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಾಗಿದೆ. ವಾಸ್ತವವಾಗಿ ಟೀಂ ಇಂಡಿಯಾ ಸತತ 8ನೇ ಪಂದ್ಯದಲ್ಲಿ ಟಾಸ್ ಸೋತಿದೆ. ನಡೆಯುತ್ತಿರುವ ವಿಶ್ವಕಪ್ನ ಸತತ 6 ಪಂದ್ಯಗಳಲ್ಲಿ ಟಾಸ್ ಸೋತಿರುವ ಭಾರತ, ಈ 6 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು, ಉಳಿದು ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ.
ಇನ್ನು ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತಿರುವ ಟೀಂ ಇಂಡಿಯಾ ಗೆಲುವು ಸಾಧಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ. ಈ ಪಂದ್ಯಕ್ಕಾಗಿ ಭಾರತೀಯ ಮಹಿಳಾ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಒಂದು ಬದಲಾವಣೆಯನ್ನು ಮಾಡಿದ್ದು, ಅಮನ್‌ಜೋತ್ ಕೌರ್ ಬದಲಿಗೆ ಜೆಮಿಮಾ ರೊಡ್ರಿಗಸ್ ತಂಡಕ್ಕೆ ಮರಳಿದ್ದಾರೆ.
Presenting #TeamIndia’s Playing XI for our 6⃣th match of #CWC25 👌
One change as Jemimah Rodrigues is back in the XI.
Updates ▶️ https://t.co/AuCzj0X11B#WomenInBlue | #INDvNZ pic.twitter.com/R5fLqiInxI
— BCCI Women (@BCCIWomen) October 23, 2025
ಭಾರತ ತಂಡ: ಪ್ರತಿಕಾ ರಾವಲ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್.
ನ್ಯೂಜಿಲೆಂಡ್ ತಂಡ: ಸುಜಿ ಬೇಟ್ಸ್, ಜಾರ್ಜಿಯಾ ಪ್ಲೈಮರ್, ಅಮೆಲಿಯಾ ಕೆರ್, ಸೋಫಿ ಡಿವೈನ್ (ನಾಯಕಿ), ಬ್ರೂಕ್ ಹ್ಯಾಲಿಡೇ, ಮ್ಯಾಡಿ ಗ್ರೀನ್, ಇಸಾಬೆಲ್ಲಾ ಗೇಜ್ (ವಿಕೆಟ್ ಕೀಪರ್), ಜೆಸ್ ಕೆರ್, ರೋಸ್ಮರಿ ಮೈರ್, ಲಿಯಾ ತಹುಹು, ಈಡನ್ ಕಾರ್ಸನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Thu, 23 October 25