Asia Cup: ಏಕದಿನ ಏಷ್ಯಾಕಪ್​ನಲ್ಲಿ ಪಾಕ್ ಎದುರು ಭಾರತದ್ದೇ ಪಾರುಪತ್ಯ..!

|

Updated on: Aug 24, 2023 | 7:46 AM

Asia Cup: 50 ಓವರ್‌ಗಳ ಮಾದರಿಯಲ್ಲಿ ನಾಲ್ಕು ವರ್ಷಗಳ ನಂತರ ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದಾರೆ. ಜೂನ್ 2019 ರಲ್ಲಿ ಈ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್‌ಗಳಿಂದ ಪಾಕ್ ತಂಡವನ್ನು ಮಣಿಸಿತ್ತು.

Asia Cup: ಏಕದಿನ ಏಷ್ಯಾಕಪ್​ನಲ್ಲಿ ಪಾಕ್ ಎದುರು ಭಾರತದ್ದೇ ಪಾರುಪತ್ಯ..!
ಭಾರತ- ಪಾಕಿಸ್ತಾನ
Image Credit source: insidesport
Follow us on

ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ (Pakistan and Sri Lanka) ನಡೆಯಲಿರುವ ಏಷ್ಯಾಕಪ್​ಗೆ ಟೀಂ ಇಂಡಿಯಾ (Team India) ಇಂದಿನಿಂದ ಬೆಂಗಳೂರಿನ ಎನ್​ಸಿಎನಲ್ಲಿ ತಯಾರಿ ಆರಂಭಿಸಿದೆ. ಬಹಳ ದಿನಗಳಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ತಂಡದ ಸ್ಟಾರ್ ಆಟಗಾರರು ಈ ಟೂರ್ನಿಗಾಗಿ ಫಿಟ್ನೆಸ್ ಟೆಸ್ಟ್​ಗೆ ಒಳಗಾಗಲಿದ್ದಾರೆ. ಇನ್ನು ಈ ಬಾರಿಯ ಏಷ್ಯಾಕಪ್​ನಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2 ರಂದು ಪಾಕಿಸ್ತಾನದ (India vs Pakistan) ವಿರುದ್ಧ ಆಡಲಿದೆ. ಈ ಹೈ ವೋಲ್ಟೇಜ್ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆದರೆ ಇದಕ್ಕೂ ಮುನ್ನ ಈ ಟೂರ್ನಿಯಲ್ಲಿ ಉಭಯ ತಂಡಗಳ ಮುಖಾಮುಖಿ ವರದಿಯನ್ನು ನೋಡುವುದಾದರೆ… ಇಲ್ಲಿ ಟೀಂ ಇಂಡಿಯಾ, ಪಾಕ್ ವಿರುದ್ಧ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ.

50 ಓವರ್‌ಗಳ ಮಾದರಿಯಲ್ಲಿ ನಾಲ್ಕು ವರ್ಷಗಳ ನಂತರ ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದಾರೆ. ಜೂನ್ 2019 ರಲ್ಲಿ ಈ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್‌ಗಳಿಂದ ಪಾಕ್ ತಂಡವನ್ನು ಮಣಿಸಿತ್ತು.

Asia Cup 2023: ಏಷ್ಯಾಕಪ್ ಟಿಕೆಟ್ ಮಾರಾಟ ಆರಂಭ; ಭಾರತ- ಪಾಕ್ ಪಂದ್ಯಕ್ಕೆ ನಿಯಮ ಬದಲಾವಣೆ..!

ಮೂರು ಬಾರಿ ಮುಖಾಮುಖಿ ಸಾಧ್ಯತೆ

ಈ ಬಾರಿಯ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಉಭಯ ತಂಡಗಳು ಮೊದಲು ಗುಂಪು ಹಂತದಲ್ಲಿ ಮುಖಾಮುಖಿಯಾಗಲಿವೆ. ಇದರ ನಂತರ ಸೂಪರ್ 4 ಹಂತದಲ್ಲಿ ಮತ್ತೊಮ್ಮೆ ಎದುರುಬದುರಾಗಿ ಅಖಾಡಕ್ಕಿಳಿಯಲ್ಲಿವೆ. ಒಂದು ವೇಳೆ ಎರಡೂ ತಂಡಗಳು ಫೈನಲ್​ಗೆ ಎಂಟ್ರಿ ಕೊಟ್ಟರೆ, ಅಲ್ಲಿ ಮೂರನೇ ಬಾರಿಗೆ ಪಂದ್ಯವನ್ನಾಡಲಿವೆ.

ಕಳೆದ 5 ಪಂದ್ಯಗಳಲ್ಲಿ 4 ಪಂದ್ಯ ಗೆದ್ದ ಭಾರತ

ಇನ್ನು ಏಕದಿನ ಮಾದರಿಯಲ್ಲಿ ಉಭಯ ತಂಡಗಳ ಮುಖಾಮುಖಿ ವರದಿಯನ್ನು ನೋಡುವುದಾದರೆ.. ಕಳೆದ 5 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಭರ್ಜರಿ ಮೇಲುಗೈ ಸಾಧಿಸಿದೆ. ಕಳೆದ 5 ಪಂದ್ಯಗಳಲ್ಲಿ ಭಾರತ 4 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಆದರೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟೀಂ ಇಂಡಿಯಾ ವಿರುದ್ಧ 180 ರನ್​ಗಳ ಜಯ ಸಾಧಿಸಿ, ಭಾರತಕ್ಕೆ ಮುಜುಗರದ ಸೋಲಿನ ಶಾಕ್ ನೀಡಿತ್ತು.

ಏಕದಿನ ಏಷ್ಯಾಕಪ್​ಗೆ ಭಾರತದ್ದೇ ಮೇಲುಗೈ

ಇನ್ನು ಏಕದಿನ ಏಷ್ಯಾಕಪ್‌ನಲ್ಲಿ ಉಭಯ ತಂಡಗಳ ಮುಖಾಮುಖಿ ವರದಿಯನ್ನು ನೋಡುವುದಾದರೆ ಇಲ್ಲಿ ಭಾರತ ಪಾಕ್ ಎದುರು 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ 5 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

ಏಕದಿನ ಮಾದರಿಯಲ್ಲಿ 2018 ರಲ್ಲಿ ನಡೆದ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾ ಗ್ರೂಪ್ ಸ್ಟೇಜ್ ಮತ್ತು ಸೂಪರ್ ಫೋರ್ ಹಂತ ಎರಡರಲ್ಲೂ ಪಾಕ್ ತಂಡವನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿತ್ತು. ಈ ಎರಡೂ ತಂಡಗಳು ಈವೆಂಟ್‌ನ 12 ಆವೃತ್ತಿಗಳನ್ನು ಆಡಿದ್ದು, ಪ್ರಶಸ್ತಿ ವಿಚಾರದಲ್ಲೂ ಭಾರತ, ಪಾಕಿಸ್ತಾನಕ್ಕಿಂತ ಮುಂದಿದೆ. ಈ ಲೀಗ್​ನಲ್ಲಿ ಭಾರತ 6 ಬಾರಿ ಚಾಂಪಿಯನ್ ಆಗಿದ್ದರೆ, ಪಾಕಿಸ್ತಾನ ಕೇವಲ 2 ಬಾರಿ ಮಾತ್ರ ಪ್ರಶಸ್ತಿ ಗೆದ್ದಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ