Asia Cup 2023: ಏಷ್ಯಾಕಪ್ ಟಿಕೆಟ್ ಮಾರಾಟ ಆರಂಭ; ಭಾರತ- ಪಾಕ್ ಪಂದ್ಯಕ್ಕೆ ನಿಯಮ ಬದಲಾವಣೆ..!

Asia Cup 2023: ಕಳೆದ ವಾರವಷ್ಟೇ, ಪಾಕಿಸ್ತಾನದಲ್ಲಿ ನಡೆಯಲ್ಲಿರುವ ನಾಲ್ಕು ಪಂದ್ಯಗಳ ಟಿಕೆಟ್‌ ಮಾರಾಟ ಆರಂಭಿಸಲಾಗಿತ್ತು. ಇದೀಗ ಅಂದರೆ ಆಗಸ್ಟ್ 17 ರಿಂದ ಶ್ರೀಲಂಕಾದಲ್ಲಿ ನಡೆಯುತ್ತಿರುವ ಪಂದ್ಯಗಳಿಗಾಗಿ ಅಭಿಮಾನಿಗಳು ಟಿಕೆಟ್​ಗಳನ್ನು ಖರೀದಿಸಲು ಪ್ರಾರಂಭಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದೆ.

Asia Cup 2023: ಏಷ್ಯಾಕಪ್ ಟಿಕೆಟ್ ಮಾರಾಟ ಆರಂಭ; ಭಾರತ- ಪಾಕ್ ಪಂದ್ಯಕ್ಕೆ ನಿಯಮ ಬದಲಾವಣೆ..!
ಏಷ್ಯಾಕಪ್ ಟಿಕೆಟ್ ಮಾಹಿತಿImage Credit source: insidesport
Follow us
ಪೃಥ್ವಿಶಂಕರ
|

Updated on:Aug 17, 2023 | 11:51 AM

ಏಷ್ಯಾಕಪ್ (Asia Cup 2023) ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಸ್ಟ್ 30 ರಿಂದ ಆರಂಭವಾಗಲಿರುವ ಟೂರ್ನಿಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ (Pakistan and Sri Lanka) ಜಂಟಿ ಆತಿಥ್ಯವಹಿಸುತ್ತಿವೆ. ಇದೀಗ ಈ ಪಂದ್ಯಾವಳಿಯ ಕ್ರಿಕೆಟ್ ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಅಪ್​ಡೇಟ್ ಹೊರಬಿದ್ದಿದೆ. ಕಳೆದ ವಾರವಷ್ಟೇ, ಪಾಕಿಸ್ತಾನದಲ್ಲಿ ನಡೆಯಲ್ಲಿರುವ ನಾಲ್ಕು ಪಂದ್ಯಗಳ ಟಿಕೆಟ್‌ ಮಾರಾಟ ಆರಂಭಿಸಲಾಗಿತ್ತು. ಇದೀಗ ಅಂದರೆ ಆಗಸ್ಟ್ 17 ರಿಂದ ಶ್ರೀಲಂಕಾದಲ್ಲಿ ನಡೆಯುತ್ತಿರುವ ಪಂದ್ಯಗಳಿಗಾಗಿ ಅಭಿಮಾನಿಗಳು ಟಿಕೆಟ್​ಗಳನ್ನು ಖರೀದಿಸಲು ಪ್ರಾರಂಭಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಹೇಳಿಕೆ ನೀಡಿದೆ.

ಪಾಕ್ ಮಂಡಳಿಯ ಪ್ರಕಟಣೆಯ ಪ್ರಕಾರ, ಆಗಸ್ಟ್ 17ರ ಮಧ್ಯಾಹ್ನ 12:30 ರಿಂದ ಶ್ರೀಲಂಕಾದಲ್ಲಿ ನಡೆಯಲ್ಲಿರುವ ಆರಂಭಿಕ ಪಂದ್ಯಗಳ ಟಿಕೆಟ್​ಗಳನ್ನು ಅಭಿಮಾನಿಗಳು ಖರೀದಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಕಟಿಸಿದೆ. ಇದಲ್ಲದೆ, ಶ್ರೀಲಂಕಾದಲ್ಲಿ ನಡೆಯಲ್ಲಿರುವ ಎರಡನೇ ಹಂತದ ಪಂದ್ಯಗಳ ಟಿಕೆಟ್ ಮಾರಾಟವು ಇದೇ ದಿನ ರಾತ್ರಿ 7:00 ಗಂಟೆಗೆ ಪ್ರಾರಂಭವಾಗಲಿದೆ ಎಂದು ಪಿಸಿಬಿ ಹೇಳಿದೆ. pcb.bookme.pk ಮೂಲಕ ಟಿಕೆಟ್​ಗಳನ್ನು ಖರೀದಿಸಲು ಅವಕಾಶವಿದೆ ಎಂದು ಪಾಕ್ ಮಂಡಳಿ ತಿಳಿಸಿದೆ.

Asia Cup 2023: ಸ್ಟಾರ್ ಆಟಗಾರನ ರೀ ಎಂಟ್ರಿ; ಏಷ್ಯಾಕಪ್ ತಂಡದಿಂದ ಸಂಜು ಸ್ಯಾಮ್ಸನ್​ಗೆ ಗೇಟ್​ಪಾಸ್..!

  • ಇನ್ನು ಈ ಟೂರ್ನಮೆಂಟ್‌ನ ಟಿಕೆಟಿಂಗ್ ಹೈಲೈಟ್ ಆಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಸೆಪ್ಟೆಂಬರ್ 2 ರಂದು ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಲಿದ್ದು, ಈ ಉಭಯ ತಂಡಗಳ ಕದನವನ್ನು ವೀಕ್ಷಿಸಲು ಎಲ್ಲರು ಕಾತುರರಾಗಿದ್ದಾರೆ.
  • ಟಿಕೆಟ್​ಗಳ ಖರೀದಿಗಿರುವ ನಿಯಮಗಳ ಬಗ್ಗೆ ಹೇಳುವುದಾದರೆ, ಪ್ರತಿ ಐಡಿಗೆ ನಾಲ್ಕು ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಕದನಕ್ಕೆ ಒಂದು ಐಡಿಗೆ ಎರಡು ಟಿಕೆಟ್​ಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ.
  • ಪಿಸಿಬಿ ಹೇಳಿಕೆಯ ಪ್ರಕಾರ ಶ್ರೀಲಂಕಾದಲ್ಲಿ ನಡೆಯಲ್ಲಿರುವ ಆರಂಭಿಕ ಪಂದ್ಯಗಳ ಟಿಕೆಟ್ ಮಾರಾಟವು ಇಂದು (ಆಗಸ್ಟ್ 17) ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗುತ್ತದೆ.
  • ಎರಡನೇ ಹಂತದ ಪಂದ್ಯಗಳ ಟಿಕೆಟ್ ಮಾರಾಟ ಇಂದು (ಆಗಸ್ಟ್ 17) ರಾತ್ರಿ 7 ಗಂಟೆಗೆ ಪ್ರಾರಂಭವಾಗುತ್ತದೆ. ಅಭಿಮಾನಿಗಳು pcb.bookme.pk ಮೂಲಕ ಟಿಕೆಟ್​ಗಳನ್ನು ಖರೀದಿಸಬಹುದಾಗಿದೆ. ಐಡಿ ಅಥವಾ ಪಾಸ್‌ಪೋರ್ಟ್‌ ದಾಖಲೆ ಒದಗಿಸುವವರಿಗೆ ಇತರ ಪಂದ್ಯಗಳ ನಾಲ್ಕು ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.
  • ಭಾರತ ಮತ್ತು ಪಾಕಿಸ್ತಾನ ನಡುವಿನ ಕದನಕ್ಕೆ ಪ್ರತಿ ಐಡಿಗೆ ಎರಡು ಟಿಕೆಟ್‌ಗಳನ್ನು ನೀಡಲು ಪಿಸಿಬಿ ಮಾರ್ಗಸೂಚಿ ಹೊರಡಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:49 am, Thu, 17 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ