ಐಸಿಸಿ ವಿಶ್ವಕಪ್ (T20 World Cup 2021) ಟೂರ್ನಿಯ ಇತಿಹಾಸದಲ್ಲಿ ಒಮ್ಮೆಯೂ ಭಾರತ, ಬದ್ಧ ವೈರಿ ಪಾಕಿಸ್ತಾನ (India vs Pakistan) ವಿರುದ್ಧ ತಲೆ ಬಾಗಿರಲಿಲ್ಲ. ಪಾಕಿಸ್ತಾನ ವಿರುದ್ಧದ ಹೈವೊಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಹೀನಾಯವಾಗಿ ಸೋಲುತ್ತೆ ಅಂತಾ, ಯಾರೋಬ್ಬರು ನಿರೀಕ್ಷಿಸಿರಲಿಲ್ಲ. ಸ್ವತಃ ಪಾಕ್ ಕ್ರಿಕೆಟಿಗರೇ ಇಂತಹದ್ದೊಂದು ಅದ್ದೂರಿ ವಿಜಯೋತ್ಸವ ಆಚರಿಸುತ್ತೇವೆ ಎಂಬ ಕನಸು ಕಂಡಿರಲಿಲ್ಲವೇನೊ. ಎದುರಾಳಿಯ ಒಂದು ವಿಕೆಟ್ ಕೂಡ ಕೀಳಲು ಸಾಧ್ಯವಾಗದ ಕೊಹ್ಲಿ ಪಡೆ (Virat Kohli) ಅಷ್ಟರ ಮಟ್ಟಿಗೆ ನೀರಸ ಪ್ರದರ್ಶನ ತೋರಿದೆ. ಇದರಿಂದ ಭಾರತದ ಮುಂದಿನ ಹಾದಿ ಮತ್ತಷ್ಟು ಕಠಿಣವಾಗಿದೆ. ವಿರಾಟ್ ಕೊಹ್ಲಿ ಪಡೆಯು ಮಾಡಿದ ಈ ಐದು ತಪ್ಪುಗಳು, ಪಾಕ್ ಆಟಗಾರರಿಗೆ ಇತಿಹಾಸ ಬದಲಿಸಲು ಅವಕಾಶ ಮಾಡಿಕೊಟ್ಟಿದೆ.
ಟಾಸ್ ಸೋತ ಭಾರತ: ಹೌದು, ದುಬೈ ಮೈದಾನದಲ್ಲಿ ಟಾಸ್ ಸೋತಿದ್ದೇ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣವಾಯಿತು. ದುಬೈ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಬಹುತೇಕ ಸೋಲು ಕಟ್ಟಿಟ್ಟ ಬುತ್ತಿ. ದುಬೈನಲ್ಲಿ ನಡೆದ ಕಳೆದ ಎರಡು ಐಪಿಎಲ್ ಸೀಸನ್ಗಳಲ್ಲಿ ಆಡಿದ 20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಮುಗ್ಗರಿಸಿದೆ. ಹೀಗಾಗಿ ಟಾಸ್ ಕೂಡ ಭಾರತದ ಸೋಲಿಗೆ ಮೊದಲ ಮುನ್ನುಡಿ ಬರೆದಿತ್ತು.
ಡ್ಯೂ ಪ್ಯಾಕ್ಟರ್ ಮತ್ತು ಪಿಚ್: ದುಬೈನ ಪಿಚ್ ಮತ್ತು ಡ್ಯೂ ಫ್ಯಾಕ್ಟರ್ ಭಾರತದ ಅರ್ಧ ಅದೃಷ್ಟವನ್ನ ಕಸಿದುಕೊಂಡಿತ್ತು. ದುಬೈನ ಸ್ಲೋ ಪಿಚ್ನಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದವರಿಗೆ, ಎದುರಾಳಿ ತಂಡದ ಬೌಲರ್ಗಳಿಂದ ಕರಾರುವಾಕ್ ಬೌಲಿಂಗ್ ಮಾಡಲು ಸಾಧ್ಯ. ಅದೇ ನಂತರ ಬೌಲಿಂಗ್ ಮಾಡುವವರಿಗೆ ದುಬೈನಲ್ಲಿ ಚೆಂಡಿನ ಮೇಲಿನ ಹಿಡಿತ ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ.
ಆರಂಭಿಕರ ವೈಫಲ್ಯ: ಎಲ್ಲಕ್ಕಿಂತ ಹೆಚ್ಚಾಗಿ ಟೀಮ್ ಇಂಡಿಯಾದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ. ಎಲ್ ರಾಹುಲ್, ಮೊದಲ ಮೂರು ಓವರ್ನಲ್ಲೇ ವಿಕೆಟ್ ಒಪ್ಪಿಸಿದ್ದು, ಭಾರತಕ್ಕೆ ಭಾರಿ ಆಘಾತ ನೀಡಿತ್ತು. ಈ ಆರಂಭಿಕ ಆಘಾತದಿಂದ ಕೊಹ್ಲಿ ಪಡೆಗೆ ಕೊನೆವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಗಾಯಾಳು ಹಾರ್ದಿಕ್ ಪಾಂಡ್ಯಾ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಫಿಟ್ನೆಸ್ ವಿಚಾರದಲ್ಲಿ ಅನುಮಾನಗಳಿದ್ದವು. ಈ ಅನುಮಾನ ಪಾಂಡ್ಯಾ ಬ್ಯಾಟಿಂಗ್ ಮಾಡಲು ಕಣಕ್ಕಿಳಿದಾಗ ನಿಜವಾಗಿತ್ತು. ಬ್ಯಾಟಿಂಗ್ ಮಾಡುವಾಗ ಪಾಂಡ್ಯಾ ಬಲಭುಜಕ್ಕೆ ನೋವಾಗಿದೆ. 11 ರನ್ಗಳಿಸಿ ಔಟಾದ ಪಾಂಡ್ಯಾ ಫೀಲ್ಡಿಂಗ್ ಮಾಡಲು ಬರಲಿಲ್ಲ. ಪಾಂಡ್ಯಾ ಬದಲು ಫಾರ್ಮ್ನಲ್ಲಿದ್ದ ಶಾರ್ದೂಲ್ ಠಾಕೂರ್ಗೆ ಅವಕಾಶ ನೀಡಿದರೆ, ಕತೆಯೇ ಬೇರೆಯಾಗುತ್ತಿತ್ತು.
ಬೌಲರ್ಗಳ ನೀರಸ ಪ್ರದರ್ಶನ: ಯುಎಇನಲ್ಲಿ ನಡೆದ ಐಪಿಎಲ್ನಲ್ಲಿ ವಿಕೆಟ್ಗಳ ಸುರಿಮಳೆಗೈಯುತ್ತಿದ್ದ ಭಾರತೀಯ ಬೌಲರ್ಗಳ ಆರ್ಭಟ, ಪಾಕ್ ಬ್ಯಾಟರ್ಗಳ ಮುಂದೆ ನಡೆಯಲೇ ಇಲ್ಲ. ರಿಝ್ವಾನ್ ಮತ್ತು ಬಾಬರ್ ಜುಗಲ್ಬಂಧಿಗೆ ಕೊಹ್ಲಿ ಬೌಲರ್ಗಳು ಸುಸ್ತಾದರು. ಯಾವ ಸ್ಪಿನ್ನರ್ ಕೈಚಳಕವೂ ನಡೆಯಲಿಲ್ಲ.
ವರದಿ: ಸಂಜಯ್.
KL Rahul: ನೋಬಾಲ್ಗೆ ಔಟಾದ ಕೆ.ಎಲ್. ರಾಹುಲ್; ಅಂಪೈರ್ ತಪ್ಪಿನಿಂದ ಭಾರತಕ್ಕೆ ದೊಡ್ಡ ಮೋಸ
(India vs Pakistan Here is the Five Reasons Why Virat Kohli Team India Lost Match to Pakistan)