‘ಶಾಲಾ ಮಕ್ಕಳೊಂದಿಗೆ ಆಟವಾಡುತ್ತಿರುವಂತೆ ಅನಿಸುತ್ತಿದೆ’: ಸರಣಿ ಟ್ವೀಟ್ ಮೂಲಕ ಪಾಕ್ ತಂಡದ ಕಾಲೆಳೆದ ಸೆಹ್ವಾಗ್

India vs Pakistan, ICC World Cup 2023: ‘ಪಾಕಿಸ್ತಾನದ ಈ ಪ್ರದರ್ಶನ ನೋಡಿದರೆ ದೊಡ್ಡ ಮಕ್ಕಳು, ಶಾಲಾ ಮಕ್ಕಳೊಂದಿಗೆ ಆಟವಾಡುತ್ತಿರುವಂತೆ ಅನಿಸುತ್ತಿದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಈ ಪಂದ್ಯದ ಬಗ್ಗೆ ಸೆಹ್ವಾಗ್ ಹಲವು ಟ್ವೀಟ್‌ಗಳನ್ನು ಮಾಡಿದ್ದಾರೆ. ಮತ್ತೊಂದು ಟ್ವೀಟ್​ನಲ್ಲಿ ಭಾರತದ ಆತಿಥ್ಯವೇ ಬೇರೆ. ಪಾಕಿಸ್ತಾನಿ ತಂಡದ ಎಲ್ಲಾ ಆಟಗಾರರಿಗೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು ಎಂದು ಬರೆದುಕೊಂಡಿದ್ದಾರೆ.

‘ಶಾಲಾ ಮಕ್ಕಳೊಂದಿಗೆ ಆಟವಾಡುತ್ತಿರುವಂತೆ ಅನಿಸುತ್ತಿದೆ’: ಸರಣಿ ಟ್ವೀಟ್ ಮೂಲಕ ಪಾಕ್ ತಂಡದ ಕಾಲೆಳೆದ ಸೆಹ್ವಾಗ್
ವೀರೇಂದ್ರ ಸೆಹ್ವಾಗ್
Follow us
ಪೃಥ್ವಿಶಂಕರ
|

Updated on: Oct 15, 2023 | 6:05 AM

ಶನಿವಾರ ನಡೆದ ವಿಶ್ವಕಪ್-2023 (ICC World Cup 2023) ಪಂದ್ಯದಲ್ಲಿ ಭಾರತ ತಂಡ, ಪಾಕಿಸ್ತಾನವನ್ನು (India vs Pakistan) ಏಳು ವಿಕೆಟ್‌ಗಳಿಂದ ಸೋಲಿಸಿತು. ಇಡೀ ವಿಶ್ವವೇ ಕಣ್ಣಿಟ್ಟಿದ್ದ ಈ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಟೀಂ ಇಂಡಿಯಾ ಏಕಪಕ್ಷೀಯ ಆಟವಾಡುವ ಮೂಲಕ ಪಾಕಿಸ್ತಾನವನ್ನು ಮಣಿಸಿತು. ಈ ಪಂದ್ಯದಲ್ಲಿ ಭಾರತದ ಬೌಲರ್​ಗಳ ದಾಳಿಗೆ ನಲುಗಿದ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ ಪಾಕಿಸ್ತಾನ ತಂಡ ಕೇವಲ 191 ರನ್‌ಗಳಿಗೆ ಆಲೌಟ್ ಆಯಿತು. ನಂತರ ಈ ಗುರಿ ಬೆನ್ನಟ್ಟಿದ ಭಾರತ ರೋಹಿತ್ ಅವರ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ ಕೇವಲ 31ನೇ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಈ ವೇಳೆ ಟೀಂ ಇಂಡಿಯಾದ  (Team India) ಈ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬರುತ್ತಿದ್ದು, ಇನ್ನೊಂದೆಡೆ ಪಾಕ್ ಆಟಗಾರರ ಕಳಪೆ ಆಟವನ್ನು ಎಲ್ಲರೂ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತಹವರ ಸಾಲಿಗೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಸೇರಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ಧದ ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಏಕದಿನ ವಿಶ್ವಕಪ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಇದು ಏಕದಿನ ವಿಶ್ವಕಪ್‌ನಲ್ಲಿ ಇವರಿಬ್ಬರ ನಡುವಿನ ಎಂಟನೇ ಮುಖಾಮುಖಿಯಾಗಿದ್ದು, ಭಾರತ ಎಂಟು ಬಾರಿ ಪಾಕಿಸ್ತಾನವನ್ನು ಸೋಲಿಸಿದೆ. ಭಾರತದಲ್ಲಿ ಈ ಎರಡು ತಂಡಗಳ ಏಕದಿನ ವಿಶ್ವಕಪ್‌ನ ಮೂರನೇ ಪಂದ್ಯ ಇದಾಗಿದೆ.

IND vs PAK, ICC World Cup: ಕೊಹ್ಲಿ ಬಳಿ ಓಡಿ ಬಂದು ಸಹಿ ಮಾಡಿದ ಜೆರ್ಸಿ ಕೇಳಿದ ಬಾಬರ್ ಅಝಂ: ವಿಡಿಯೋ ನೋಡಿ

ಪಾಕಿಸ್ತಾನ ಮಕ್ಕಳ ತಂಡ

ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಉತ್ತಮ ಕ್ರಿಕೆಟ್ ಆಡುವ ನಿರೀಕ್ಷೆ ಇತ್ತು. ಆದರೆ ಟೀಂ ಇಂಡಿಯಾದ ಅಮೋಘ ಆಟದ ಎದುರು ಪಾಕಿಸ್ತಾನಕ್ಕೆ ನಿಲ್ಲಲು ಸಾಧ್ಯವಾಗಲಿಲ್ಲ. ಪ್ರಸ್ತುತ ಕ್ರಿಕೆಟ್​ನಲ್ಲಿ ಪಾಕಿಸ್ತಾನ ತಂಡದ ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ ಎಂದು ಹೇಳಲಾಗುತ್ತದೆ. ಆದರೆ ಈ ಪಂದ್ಯದಲ್ಲಿ ಶಾಹೀನ್ ಶಾ ಆಫ್ರಿದಿ ಅವರ ಸ್ವಿಂಗ್ ಆಗಲಿ, ಹ್ಯಾರಿಸ್ ರೌಫ್ ಅವರ ವೇಗವಾಗಲಿ ಕೆಲಸ ಮಾಡಲಿಲ್ಲ. ‘ಪಾಕಿಸ್ತಾನದ ಈ ಪ್ರದರ್ಶನ ನೋಡಿದರೆ ದೊಡ್ಡ ಮಕ್ಕಳು, ಶಾಲಾ ಮಕ್ಕಳೊಂದಿಗೆ ಆಟವಾಡುತ್ತಿರುವಂತೆ ಅನಿಸುತ್ತಿದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಈ ಪಂದ್ಯದ ಬಗ್ಗೆ ಸೆಹ್ವಾಗ್ ಹಲವು ಟ್ವೀಟ್‌ಗಳನ್ನು ಮಾಡಿದ್ದಾರೆ. ಮತ್ತೊಂದು ಟ್ವೀಟ್​ನಲ್ಲಿ ಭಾರತದ ಆತಿಥ್ಯವೇ ಬೇರೆ. ಪಾಕಿಸ್ತಾನಿ ತಂಡದ ಎಲ್ಲಾ ಆಟಗಾರರಿಗೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು ಎಂದು ಬರೆದುಕೊಂಡಿದ್ದಾರೆ.

ಪಂದ್ಯ ಹೀಗಿತ್ತು

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 42.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 191 ರನ್‌ ಕಲೆಹಾಕಿತು. ನಾಯಕ ಬಾಬರ್ ಆಝಂ 58 ಎಸೆತಗಳನ್ನು ಎದುರಿಸಿ ಏಳು ಬೌಂಡರಿಗಳ ಸಹಾಯದಿಂದ 50 ರನ್ ಗಳಿಸಿದರು. ಬಾಬರ್​ಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ರಿಜ್ವಾನ್ ಕೂಡ ಒಂದು ರನ್​ನಿಂದ ಅರ್ಧಶತಕ ವಂಚಿತರಾದರು. ತಮ್ಮ ಇನ್ನಿಂಗ್ಸ್​ನಲ್ಲಿ 69 ಎಸೆತಗಳನ್ನು ಎದುರಿಸಿದ ರಿಜ್ವಾನ್ ಏಳು ಬೌಂಡರಿಗಳ ನೆರವಿನಿಂದ 49 ರನ್ ಕಲೆಹಾಕಿದರು. ಇನ್ನು ಈ ಗುರಿ ಬೆನ್ನಟ್ಟಿದ ಭಾರತದ ಪರ ರೋಹಿತ್ ಶರ್ಮಾ 63 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ನೆರವಿನಿಂದ 86 ರನ್ ಸಿಡಿಸಿದರು. ನಾಯಕನಿಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 62 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ ಅಜೇಯ 53 ರನ್ ಬಾರಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ