ಭಾರತ vs ಪಾಕಿಸ್ತಾನ್ ಮುಂದಿನ ಮುಖಾಮುಖಿ ಯಾವಾಗ? ಇಲ್ಲಿದೆ ಮಾಹಿತಿ

| Updated By: ಝಾಹಿರ್ ಯೂಸುಫ್

Updated on: Sep 03, 2023 | 3:58 PM

India vs Pakistan: ಈ ಒಂದು ಅಂಕದೊಂದಿಗೆ ಪಾಕಿಸ್ತಾನ್ ತಂಡ ಸೂಪರ್-4 ಹಂತಕ್ಕೇರಿದೆ. ಇದಕ್ಕೂ ಮುನ್ನ ನೇಪಾಳ ವಿರುದ್ಧ ಗೆದ್ದು 2 ಅಂಕ ಸಂಪಾದಿಸಿದ್ದ ಬಾಬರ್ ಆಝಂ ಪಡೆ, ಇದೀಗ ಒಟ್ಟು 3 ಅಂಕಗಳೊಂದಿಗೆ ಸೂಪರ್​-4 ಹಂತಕ್ಕೇರಿದ ಮೊದಲ ತಂಡ ಎನಿಸಿಕೊಂಡಿದೆ.

ಭಾರತ vs ಪಾಕಿಸ್ತಾನ್ ಮುಂದಿನ ಮುಖಾಮುಖಿ ಯಾವಾಗ? ಇಲ್ಲಿದೆ ಮಾಹಿತಿ
India vs Pakistan
Follow us on

India vs Pakistan: ಭಾರತ ಮತ್ತು ಪಾಕಿಸ್ತಾನ್ ನಡುವಣ ಏಷ್ಯಾಕಪ್​ನ ಮೊದಲ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಪಾಕ್ ವೇಗಿಗಳ ಕರಾರುವಾಕ್ ದಾಳಿ ಮುಂದೆ ಟೀಮ್ ಇಂಡಿಯಾ ಅಗ್ರ ಕ್ರಮಾಂಕದ ಬ್ಯಾಟರ್​ಗಳು ರನ್​ಗಳಿಸಲು ಪರದಾಡಿದರು. ಪರಿಣಾಮ 48.5 ಓವರ್​ಗಳಲ್ಲಿ 266 ರನ್​ಗಳಿಸಿ ಭಾರತ ತಂಡವು ಆಲೌಟ್ ಆಯಿತು.

267 ರನ್​ಗಳ ಸುಲಭ ಗುರಿ ಪಡೆದ ಪಾಕಿಸ್ತಾನ್ ಪಾಲಿಗೆ ಮಳೆಯು ನತದೃಷ್ಟವಾಗಿ ಪರಿಣಮಿಸಿತು. ಏಕೆಂದರೆ ದ್ವಿತೀಯ ಇನಿಂಗ್ಸ್ ಆರಂಭಕ್ಕೆ ವರುಣ ಅಡಚಣೆಯನ್ನುಂಟು ಮಾಡಿದ್ದರಿಂದ ಪಂದ್ಯವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ. ಅದರಂತೆ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.

ಸೂಪರ್​-4 ಗೆ ಪಾಕಿಸ್ತಾನ್:

ಈ ಒಂದು ಅಂಕದೊಂದಿಗೆ ಪಾಕಿಸ್ತಾನ್ ತಂಡ ಸೂಪರ್-4 ಹಂತಕ್ಕೇರಿದೆ. ಇದಕ್ಕೂ ಮುನ್ನ ನೇಪಾಳ ವಿರುದ್ಧ ಗೆದ್ದು 2 ಅಂಕ ಸಂಪಾದಿಸಿದ್ದ ಬಾಬರ್ ಆಝಂ ಪಡೆ, ಇದೀಗ ಒಟ್ಟು 3 ಅಂಕಗಳೊಂದಿಗೆ ಸೂಪರ್​-4 ಹಂತಕ್ಕೇರಿದ ಮೊದಲ ತಂಡ ಎನಿಸಿಕೊಂಡಿದೆ.

ಭಾರತ-ಪಾಕಿಸ್ತಾನ್ ಮುಂದಿನ ಪಂದ್ಯ ಯಾವಾಗ?

ಭಾರತ-ಪಾಕಿಸ್ತಾನ್ ಸೂಪರ್-4 ಹಂತದಲ್ಲಿ ಮುಖಾಮುಖಿಯಾಗಬಹುದು. ಇದಕ್ಕೂ ಮುನ್ನ ಟೀಮ್ ಇಂಡಿಯಾ ನೇಪಾಳ ವಿರುದ್ಧ ಜಯ ಸಾಧಿಸಬೇಕು. ನೇಪಾಳ ವಿರುದ್ದ ಭಾರತ ತಂಡ ಗೆದ್ದರೆ ಸೂಪರ್-4 ಹಂತಕ್ಕೇರಲಿದೆ.

ಸೂಪರ್​-4 ಹಂತದಲ್ಲಿ ಒಟ್ಟು 4 ತಂಡಗಳು ಪರಸ್ಪರ ಸೆಣಸಲಿದೆ. ಇಲ್ಲಿ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಗ್ರೂಪ್-A ನಿಂದ ಸೂಪರ್​ ಫೋರ್​ ಹಂತಕ್ಕೇರಲಿದೆ. ಹೀಗಾಗಿ ಸೆಪ್ಟೆಂಬರ್ 10 ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ.

ಸೂಪರ್​-4 ಹಂತದಲ್ಲಿನ ಭಾರತ-ಪಾಕಿಸ್ತಾನ್ ಮುಖಾಮುಖಿಗೆ ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅದರಂತೆ ಮುಂದಿನ ಭಾನುವಾರ ಇಂಡೊ-ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯವನ್ನು ಎದುರು ನೋಡಬಹುದು.

ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).