ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್ನಲ್ಲಿ ಭಾರತ (India vs Pakistan) ಶುಭಾರಂಭ ಮಾಡಿದೆ. ವಿರಾಟ್ ಕೊಹ್ಲಿಯ (Virat Kohli) ಅಬ್ಬರದ ಆಟಕ್ಕೆ ತಬ್ಬಿಬ್ಬಾದ ಪಾಕಿಸ್ತಾನಕ್ಕೆ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಹಿನ್ನಡೆಯಾಗಿದೆ. ಟೀಮ್ ಇಂಡಿಯಾ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದು ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya). ಇವರಿಬ್ಬರು ಕೊನೆಯ ಓವರೆಗೆ ಕ್ರೀಸ್ನಲ್ಲಿ ನಿಂತು ಆಡಿದ ಶತಕದ ಜೊತೆಯಾಟ ಪಂದ್ಯದ ಗತಿಯನ್ನೇ ಬದಲಾಯಿಸಿತು.
ದೊಡ್ಡ ಮೈದಾನದಲ್ಲಿ ಗೆಲ್ಲಲು 160 ರನ್‌ಗಳ ಕಠಿಣ ಗುರಿ ಪಡೆದುಕೊಂಡ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಕೆ.ಎಲ್ ರಾಹುಲ್ (4) ಮತ್ತು ರೋಹಿತ್ ಶರ್ಮಾ (4) ಬಹುಬೇಗನೆ ಪೆವಿಲಿಯನ್ ಸೇರಿದರು. ನಿರೀಕ್ಷೆ ಮೂಡಿಸಿದ್ದ ಸೂರ್ಯಕುಮಾರ್ ಯಾದವ್ 15 ರನ್ಗೆ ಸುಸ್ತಾದರು. ಅಕ್ಷರ್ ಪಟೇಲ್ ದುರದೃಷ್ಟಕರ ರೀತಿಯಲ್ಲಿ ರನ್‌ಔಟ್ ಆದರು. ಈ ಸಂದರ್ಭ ಭಾರತ 6.1 ಓವರ್‌ಗೆ 4 ವಿಕೆಟ್ ಕಳೆದುಕೊಂಡು 31 ರನ್ ಗಳಿಸಿ ಸೋಲಿನ ಸುಳಿಗೆ ಸಿಲುಕಿತು.
ನಂತರ ಶುರುವಾಗಿದ್ದು ಕೊಹ್ಲಿ–ಪಾಂಡ್ಯ ಎಚ್ಚರಿಕೆಯ ಆಟ. ಇವರಿಬ್ಬರೂ 113 ರನ್‌ಗಳ ಅಮೋಘ ಜೊತೆಯಾಟ ಆಡುವ ಮೂಲಕ ಕೊನೇ ಓವರ್‌ಗೆ ಪಂದ್ಯವನ್ನು ಕೊಂಡೊಯ್ದರು. ಅಂತಿಮ 6 ಎಸೆತದಲ್ಲಿ ಭಾರತಕ್ಕೆ ಗೆಲ್ಲಲು 16 ರನ್ಗಳು ಬೇಕಾಯಿತು. ಆದರೆ, ಮೊಹಮ್ಮದ್ ನವಾಝ್ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ (37 ಎಸೆತಗಳಲ್ಲಿ 40 ರನ್) ವಿಕೆಟ್ ಒಪ್ಪಿಸಿದರು. ಕೊನೆಯ 2 ಎಸೆತಗಳಲ್ಲಿ 2 ರನ್ ಬೇಕಾಯಿತು. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್‌ಔಟ್ ಆದರು. ಒಂದು ಎಸೆತದಲ್ಲಿ 2 ರನ್ ಬೇಕಿದ್ದಾಗ ಒಂದು ಬಾಲ್ ವೈಡ್ ಆದರೆ, ನಂತರ ಎಸೆತದಲ್ಲಿ ರ್. ಅಶ್ವಿನ್ ಭಾರತ ತಂಡದ ಪರ ವಿನ್ನಿಂಗ್ ಶಾಟ್ ಬಾರಿಸಿದರು.
ಹೀಗೆ ಭಾರತ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಅತ್ತ ಪಾಕಿಸ್ತಾನ ಸಖತ್ ಟ್ರೋಲ್ ಆಗಿದೆ. ಅನೇಕರು ಪಾಕಿಸ್ತಾನ ತಂಡದ ಈಗಿನ ಸ್ಥಿತಿ ಬಗ್ಗೆ ಮೀಮ್ಸ್ ಶೇರ್ ಮಾಡಿದ್ದಾರೆ.
Arshdeep Singh right now pic.twitter.com/j7o96hKcX2
— Sagar (@sagarcasm) October 23, 2022
Pakistani fielders watching Kohli’s shots today pic.twitter.com/KzKsh2SZq5
— Sagar (@sagarcasm) October 23, 2022
Pakistan batting coach after seeing iftikhar chacha batting ??? #INDvPAK #INDvsPAK #PakistanZindabad #T20WorldCup pic.twitter.com/l7VTr3zDuV
— Szr Khan (@SzrKhan1) October 23, 2022
#indvspak#T20WorldCup pic.twitter.com/AinxaXWKBa
— ÃRsH (@arshkhalifaa) October 23, 2022
ಟೀಮ್ ಇಂಡಿಯಾ ಅಕ್ಟೋಬರ್ 27 ರಂದು ನೆದರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಆಯೋಜಿಸಲಾಗಿದೆ. ಪಾಕಿಸ್ತಾನ ಅಕ್ಟೋಬರ್ 27 ರಂದು ಜಿಂಬಾಬ್ವೆ ವಿರುದ್ಧ ತನ್ನ ಎರಡನೇ ಪಂದ್ಯ ಆಡಲಿದ್ದು ಗೆಲುವು ಅನಿವಾರ್ಯವಾಗಿದೆ.
Published On - 10:13 am, Mon, 24 October 22