IND vs PAK: ಕೊಹ್ಲಿ ಸಿಡಿಸಿದ ಆ 2 ಸಿಕ್ಸ್ಗಳಿಗೆ ಬೆಚ್ಚಿಬಿದ್ದ ಜಗತ್ತು: ಚುಮು ಚುಮು ಚಳಿಯಲ್ಲೂ ಬೆವತ ಪಾಕ್ ತಂಡ..!
T20 World Cup 2022: ರೌಫ್ ಅವರ ಓವರ್‌ನ ಐದನೇ ಎಸೆತ ಬ್ಯಾಕ್ ಆಫ್ ಲೆಂತ್ ಆಗಿದ್ದು, ಕೊಹ್ಲಿ ಸೊಂಟಕ್ಕಿಂತ ಎತ್ತರಕ್ಕೆ ಎದ್ದು ಬರುತ್ತಿತ್ತು. ಆದರೆ ಬ್ಯಾಲೆನ್ಸ್ ಕಳೆದುಕೊಳ್ಳದೆ ಬ್ಯಾಕ್‌ಫೂಟ್ ಪಂಚ್ ಆಡಿದ ವಿರಾಟ್, ಲಾಂಗ್ ಆನ್ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು.
ದೀಪಾವಳಿಗೆ ಒಂದು ದಿನ ಮುಂಚೆಯೇ ದೇಶಾದ್ಯಂತ ಹಬ್ಬದ ಸಂಬ್ರಮ ಮುಗಿಲು ಮುಟ್ಟಿದೆ. ಅದಕ್ಕೆ ಕಾರಣವಾಗಿದ್ದು ಆಸ್ಟ್ರೇಲಿಯಾದಲ್ಲಿ ನಡೆದ ಇಂಡಿಯಾ- ಪಾಕಿಸ್ತಾನ (India vs Pakistan) ಟಿ-20 ಮ್ಯಾಚ್. ಮ್ಯಾಚ್ನ ಕೊನೆಯ ಓವರ್ ವರೆಗೂ ರಣರೋಚಕ ತಿರುವುಗಳನ್ನ ಕಂಡ ಪಂದ್ಯದಲ್ಲಿ ಟೀಂ ಇಂಡಿಯಾದ ವಿರಾಟ್ ರೂಪಕ್ಕೆ ಎದುರಾಳಿ ಪಾಕಿಸ್ತಾನ ಮಂಡಿಯೂರಲೇ ಬೇಕಾಯ್ತು. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಕಿಂಗ್ ಕೊಹ್ಲಿಯದ್ದೇ ಸಿಂಹಪಾಲು. ಪಾಕ್ ವಿರುದ್ಧ ಸದಾ ಅಬ್ಬರದ ಇನ್ನಿಂಗ್ಸ್ ಆಡುವ ಕೊಹ್ಲಿ, ಈ ಪಂದ್ಯದಲ್ಲೂ ಅದನ್ನೇ ಮುಂದುವರೆಸಿದರು. ಇತಿಹಾಸದ ಪುಟ ತೆರೆದರೆ ಇದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. 10 ವರ್ಷಗಳ ಹಿಂದೆ, ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧ ಆಡಿದ್ದ ವಿರಾಟ್ ಕೊಹ್ಲಿ (Virat Kohli), ಆ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದರು. ಈಗ ಮತ್ತೊಮ್ಮೆ ವಿರಾಟ್ ಕೊಹ್ಲಿಯ ಬ್ಯಾಟ್ನಿಂದ ಅದ್ಭುತ ಇನ್ನಿಂಗ್ಸ್ ಹೊರಬಂದಿದ್ದು, ಈ ಬಾರಿಯೂ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಭಾರತಕ್ಕೆ ಸ್ಮರಣೀಯ ಜಯವನ್ನು ನೀಡಿದೆ.
ಆದರೆ ಒಂದು ಹಂತದಲ್ಲಿ ಈ ಗೆಲುವು ಟೀಂ ಇಂಡಿಯಾಕ್ಕೆ ಕಷ್ಟಕರವಾಗಿತ್ತು. ಆದರೆ ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ 19ನೇ ಓವರ್‌ನಲ್ಲಿ ಸಿಡಿಸಿದ ಆ 2 ಸಿಕ್ಸರ್‌ಗಳು ಇಡೀ ಪಂದ್ಯದ ದಿಕ್ಕನೇ ಬದಲಾಯಿಸಿದವು. ಕೊಹ್ಲಿಯ ಈ ಎರಡು ಬೆಸ್ಟ್ ಶಾಟ್ಕ್ಕೆ ಅಭಿಮಾನಿಗಳು ಶಹಬ್ಬಾಸ್ಗಿರಿ ಹೇಳುತ್ತಿರುವುದಲ್ಲದೆ ಇಡೀ ಕ್ರಿಕೆಟ್ ಜಗತ್ತೆ ಇದಕ್ಕೆ ತಲೆಬಾಗಿದೆ. ಕೊಹ್ಲಿಯ ಈ ಎರಡು ಹೊಡೆತಗಳಿಗೆ ಮನಸೋತವರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಕೂಡ ಸೇರಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮೊದಲು ಬೌಲಿಂಗ್ ಮಾಡಿದ ಟೀಂ ಇಂಡಿಯಾ ಪಾಕ್ ತಂಡವನ್ನು ಕೇವಲ 159 ರನ್‌ಗಳಿಗೆ ಕಟ್ಟಿಹಾಕಿತು. ಆದರೆ, ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭ ಕಳೆದ ವರ್ಷದಂತೆ ಮತ್ತೊಮ್ಮೆ ಕಳಪೆಯಾಗಿತ್ತು. ಈ ಬಾರಿಯೂ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಬಹುಬೇಗನೇ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಭಾರತದ 4 ವಿಕೆಟ್ಗಳು ಕೇವಲ 31 ರನ್‌ಗಳಿಗೆ ಪತನಗೊಂಡವು. ಇಲ್ಲಿಂದ ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಇನಿಂಗ್ಸ್ ಕೈಗೆತ್ತಿಕೊಂಡು ತಂಡಕ್ಕೆ ಜಯ ತಂದುಕೊಟ್ಟರು.
ಕೊಹ್ಲಿ ಸಿಡಿಸಿದ ಸಿಕ್ಸ್ಗೆ ಬೆಚ್ಚಿಬಿದ್ದ ಜಗತ್ತು
ಆದರೆ, ಟೀಂ ಇಂಡಿಯಾದ ಈ ಗೆಲುವಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಕೊನೆಯ ಎರಡು ಓವರ್‌ಗಳಲ್ಲಿ ಭಾರತಕ್ಕೆ 31 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ವೇಗಿ ಹ್ಯಾರಿಸ್ ರೌಫ್ ಅದಕ್ಕೂ ಮುನ್ನ 3 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಅಲ್ಲದೆ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ 3 ರನ್‌ಗಳು ಬಂದವು. ಇದರಿಂದ ಟೀಂ ಇಂಡಿಯಾ ಪಾಳಯದಲ್ಲಿ ಒತ್ತಡ ಹೆಚ್ಚಾಗ ತೊಡಗಿತ್ತು. ಆದರೆ ಈ ವೇಳೆ ತಮ್ಮ ಲಯಕ್ಕೆ ಬಂದ ಕೊಹ್ಲಿ, ಬಾರಿಸಿದ ಆ ಎರಡು ಅದ್ಭುತ ಶಾಟ್ಗಳಿಗೆ ಇಡೀ ಕ್ರಿಕೆಟ್ ಜಗತ್ತೇ ತಲೆಬಾಗಿದೆ.
19ನೇ ಓವರ್ ಎಸೆದ ರೌಫ್ ಅವರ ಓವರ್‌ನ ಐದನೇ ಎಸೆತ ಬ್ಯಾಕ್ ಆಫ್ ಲೆಂತ್ ಆಗಿದ್ದು, ಕೊಹ್ಲಿ ಸೊಂಟಕ್ಕಿಂತ ಎತ್ತರಕ್ಕೆ ಎದ್ದು ಬರುತ್ತಿತ್ತು. ಆದರೆ ಬ್ಯಾಲೆನ್ಸ್ ಕಳೆದುಕೊಳ್ಳದೆ ಬ್ಯಾಕ್‌ಫೂಟ್ ಪಂಚ್ ಆಡಿದ ವಿರಾಟ್, ಲಾಂಗ್ ಆನ್ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. ಕೊಹ್ಲಿ ಬ್ಯಾಟ್ನಿಂದ ಹೊರಬಿದ್ದ ಈ ಸಿಕ್ಸರ್ ಪಾಕ್ ತಂಡಕ್ಕೆ ಶಾಕ್ ನೀಡಿದರೆ, ಮೆಲ್ಬೋರ್ನ್ನಲ್ಲಿ ನೆರದಿದ್ದ ಸುಮಾರು 90 ಸಾವಿರ ಪ್ರೇಕ್ಷಕರು ಪುಳಕಿತರಾದರು. ಆದರೆ ಇಲ್ಲಿಗೆ ಸುಮ್ಮನಾಗದ ಕೊಹ್ಲಿ, ನಂತರದ ಎಸೆತವನ್ನು ಫ್ಲಿಕ್ ಮಾಡಿ, ಫೈನ್ ಲೆಗ್‌ನಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಅಲ್ಲಿಗೆ ಪಾಕ್ ಪಡೆಯ ಸೋಲು ಖಚಿತವಾಯಿತು.
ಮನಸಾರೆ ಹೋಗಳಿದ ಸಚಿನ್
ಈ ಮೂಲಕ 19ನೇ ಓವರ್‌ನಲ್ಲಿ 15 ರನ್‌ಗಳ ನೆರವಿನಿಂದ ಭಾರತಕ್ಕೆ ಕೊನೆಯ ಓವರ್‌ನಲ್ಲಿ 16 ರನ್‌ಗಳು ಬಾಕಿ ಉಳಿದವು. ಇದನ್ನು ಟೀಂ ಇಂಡಿಯಾ ನಾಟಕೀಯ ರೀತಿಯಲ್ಲಿ ಸಾಧಿಸಿತು. ಕೊಹ್ಲಿಯ ಈ ಅದ್ಭುತ ಸಿಕ್ಸರ್‌ಗಳು ಎಲ್ಲರನ್ನೂ ಅಚ್ಚರಿಗೊಳಿಸಿದವು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಟ್ವೀಟ್ ಮಾಡಿ, ಇದು ಕೊಹ್ಲಿಯ ಅತ್ಯುತ್ತಮ ಇನ್ನಿಂಗ್ಸ್ ಎಂದಿದ್ದಾರೆ. ಎಲ್ಲದೆ ರೌಫ್ ವಿರುದ್ಧ ಬಾರಿಸಿದ ಮೊದಲ ಸಿಕ್ಸರ್ ಅಂತು ಅದ್ಭುತವಾಗಿತ್ತು ಎಂದು ಸಚಿನ್ ಹೊಗಳಿದ್ದಾರೆ.
.@imVkohli, it was undoubtedly the best innings of your life. It was a treat to watch you play, the six off the back foot in the 19th over against Rauf over long on was spectacular! ?Keep it going. ? #INDvPAK #T20WorldCup pic.twitter.com/FakWPrStMg
— Sachin Tendulkar (@sachin_rt) October 23, 2022
ಕೊಹ್ಲಿಯ ಆ ಎರಡು ಸಿಕ್ಸರ್‌ಗಳನ್ನು ಕೊಂಡಾಡಿದ ರೋಹಿತ್
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಕೂಡ ಕೊಹ್ಲಿಯ ಆ ಎರಡು ಸಿಕ್ಸರ್‌ಗಳನ್ನು ಕೊಂಡಾಡಿದರು. ಆ ಎರಡು ಸಿಕ್ಸರ್ಗಳ ಬಳಿಕ ಪಂದ್ಯ ಭಾರತದತ್ತ ವಾಲಿತು. ಈ ಮಾದರಿಯಲ್ಲಿ ನಾನು ಕಂಡ ಅತ್ಯುತ್ತಮ ಜೊತೆಯಾಟ ಇದು (ಕೊಹ್ಲಿ-ಹಾರ್ದಿಕ್). ಈ ಪಂದ್ಯದಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು ಎಂದು ರೋಹಿತ್ ಕೊಹ್ಲಿ ಆಟವನ್ನು ಕೊಂಡಾಡಿದ್ದಾರೆ.
Published On - 11:15 am, Mon, 24 October 22