ಇಂದು IND vs PAK ನಡುವೆ ಫೈನಲ್: ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

India vs Pakistan U19 Asia Cup final: ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಏಕೆಂದರೆ ಲೀಗ್ ಹಂತದಲ್ಲೇ ಪಾಕಿಸ್ತಾನ್ ತಂಡಕ್ಕೆ ಹೀನಾಯ ಸೋಲುಣಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.

ಇಂದು IND vs PAK ನಡುವೆ ಫೈನಲ್: ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ
Ind Vs Pak

Updated on: Dec 21, 2025 | 7:55 AM

ಅಂಡರ್-19 ಏಷ್ಯಾಕಪ್​ ಏಕದಿನ ಟೂರ್ನಿಯ ಫೈನಲ್ ಪಂದ್ಯವು ಇಂದು ನಡೆಯಲಿದೆ. ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ (India vs Pakistan) ತಂಡಗಳು ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ ನಡೆದ ಲೀಗ್ ಹಂತದ ಪಂದ್ಯದಲ್ಲಿ ಪಾಕ್ ಪಡೆಯನ್ನು ಟೀಮ್ ಇಂಡಿಯಾ 90 ರನ್​ಗಳಿಂದ ಬಗ್ಗು ಬಡಿದಿತ್ತು. ಹೀಗಾಗಿ ಈ ಮ್ಯಾಚ್​ನಲ್ಲೂ ಭಾರತ ತಂಡವೇ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ. ಇನ್ನು ಈ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ…

ಎಷ್ಟು ಗಂಟೆಗೆ ಮ್ಯಾಚ್ ಶುರು?

ಭಾರತ-ಪಾಕ್ ನಡುವಣ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 10.30 ರಿಂದ ಶುರುವಾಗಲಿದೆ. ಇನ್ನು 10 ಗಂಟೆಗೆ ಟಾಸ್ ಪ್ರಕ್ರಿಯೆ ಜರುಗಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಪಂದ್ಯವನ್ನು ಸೋನಿ ನೆಟ್​ವರ್ಕ್​ನ ಚಾನೆಲ್​ಗಳಲ್ಲಿ ಲೈವ್ ವೀಕ್ಷಿಸಬಹುದು. ಸೋನಿ ಸ್ಪೋರ್ಟ್ಸ್ 1, ಸೋನಿ ಸ್ಪೋರ್ಟ್ಸ್ 3, ಸೋನಿ ಸ್ಪೋರ್ಟ್ಸ್ 4 ಚಾನೆಲ್​ಗಳಲ್ಲಿ ನೇರ ಪ್ರಸಾರ ಇರಲಿದ್ದು, ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

ಉಭಯ ತಂಡಗಳು:

ಭಾರತ U19 ತಂಡ: ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ಆರೋನ್ ಜಾರ್ಜ್, ವಿಹಾನ್ ಮಲ್ಹೋತ್ರಾ, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್), ಕಾನಿಷ್ಕ್ ಚೌಹಾಣ್, ಹೆನಿಲ್ ಪಟೇಲ್, ಖಿಲನ್ ಪಟೇಲ್, ದೀಪೇಶ್ ದೇವೇಂದ್ರನ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್, ನಮನ್ ಪುಷ್ಪಾಕ್, ಹರ್ವಂಶ್ ಪಂಗಾಲಿಯ, ಯುವರಾಜ್ ಗೊಯಿಲ್.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 7 ಆಟಗಾರರು ಔಟ್..!

ಪಾಕಿಸ್ತಾನ್ U19 ತಂಡ: ಸಮೀರ್ ಮಿನ್​ಹಾಸ್, ಹಮ್ಝ ಝಹೂರ್ (ವಿಕೆಟ್ ಕೀಪರ್), ಉಸ್ಮಾನ್ ಖಾನ್, ಅಹ್ಮದ್ ಹುಸೇನ್, ಫರ್ಹಾನ್ ಯೂಸಫ್ (ನಾಯಕ), ಹುಝೈಫಾ ಅಹ್ಸಾನ್, ದನಿಯಾಲ್ ಅಲಿ ಖಾನ್, ಮೊಹಮ್ಮದ್ ಶಯಾನ್, ಅಬ್ದುಲ್ ಸುಭಾನ್, ಮೊಹಮ್ಮದ್ ಸಯ್ಯಾಮ್, ಅಲಿ ರಾಝ, ಮೊಮಿನ್ ಕಮರ್, ಅಲಿ ಹಸ್ಸಾನ್ ಬಲಾಚ್.