AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಸಿಂಗ್ ಸ್ಟಾರ್ ಏಷ್ಯಾಕಪ್​ಗೆ ಭಾರತ ತಂಡ ಪ್ರಕಟ: ಜಿತೇಶ್ ಶರ್ಮಾಗೆ ನಾಯಕತ್ವ

Rising Stars Asia Cup 2025: ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯು ನವೆಂಬರ್ 14 ರಿಂದ ಶುರುವಾಗಲಿದೆ. ಏಷ್ಯನ್ ರಾಷ್ಟ್ರಗಳ ಉದಯೋನ್ಮುಖ ತಾರೆಗಳನ್ನು ಒಳಗೊಂಡಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗ್ರೂಪ್-ಬಿ ನಲ್ಲಿ ಕಾಣಿಸಿಕೊಂಡಿದ್ದು, ಮೊದಲ ಸುತ್ತಿನಲ್ಲೇ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದಾರೆ.

ರೈಸಿಂಗ್ ಸ್ಟಾರ್ ಏಷ್ಯಾಕಪ್​ಗೆ ಭಾರತ ತಂಡ ಪ್ರಕಟ: ಜಿತೇಶ್ ಶರ್ಮಾಗೆ ನಾಯಕತ್ವ
Jitesh Sharma
ಝಾಹಿರ್ ಯೂಸುಫ್
|

Updated on:Nov 04, 2025 | 11:38 AM

Share

ಖತಾರ್‌ನಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ ಟಿ20 ಟೂರ್ನಿಗಾಗಿ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮುನ್ನಡೆಸಲಿದ್ದಾರೆ. ಹಾಗೆಯೇ ಉಪನಾಯಕನಾಗಿ ನಮನ್ ಧೀರ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ತಂಡದಲ್ಲಿ ಯುವ ಸ್ಫೋಟಕ ದಾಂಡಿಗರಾದ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಕೂಡ ಸ್ಥಾನ ಪಡೆದಿದ್ದಾರೆ. ಕಳೆದ ಸೀಸನ್​ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಅತ್ತ ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್ ಪರ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಈ ಇಬ್ಬರು ಯುವ ದಾಂಡಿಗರು ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹಾಗೆಯೇ ನೆಹಾಲ್ ವಧೇರಾ, ಸೂರ್ಯಾಂಶ್ ಶೆಡ್ಗೆ, ರಮಣ್​ದೀಪ್, ಅಶುತೋಷ್ ಶರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಯುವ ಆಲ್​ರೌಂಡರ್ ಹರ್ಷ್ ದುಬೆ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು ಬೌಲರ್​ಗಳ ಪಟ್ಟಿಯಲ್ಲಿ ಕನ್ನಡಿಗ ವಿಜಯಕುಮಾರ್ ವೈಶಾಕ್, ಯಶ್ ಠಾಕೂರ್, ಸುಯಶ್ ಶರ್ಮಾ ಸ್ಥಾನ ಪಡೆದಿದ್ದಾರೆ. ಅದರಂತೆ ಉದಯೋನ್ಮುಖ ಏಷ್ಯಾಕಪ್ ಟಿ20 ಟೂರ್ನಿಗೆ ಭಾರತ ಎ ತಂಡ ಈ ಕೆಳಗಿನಂತಿದೆ…

ಭಾರತ ಎ ತಂಡ : ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್ (ಉಪನಾಯಕ), ಸೂರ್ಯಾಂಶ್ ಶೆಡ್ಗೆ, ಜಿತೇಶ್ ಶರ್ಮಾ (ನಾಯಕ) ರಮಣದೀಪ್ ಸಿಂಗ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್‌ನೀತ್ ಸಿಂಗ್, ಸುಯಶ್ ಶರ್ಮಾ, ವಿಜಯಕುಮಾರ್ ವೈಶಾಕ್, ಯಧುವೀರ್ ಸಿಂಗ್ ಚರಕ್,

ಮೀಸಲು ಆಟಗಾರರು: ಶೇಖ್ ರಶೀದ್, ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್, ಸಮೀರ್ ರಿಝ್ವಿ.

ಇದನ್ನೂ ಓದಿ: IPL 2026: ಹೆಚ್ಚುವರಿ 10 ಪಂದ್ಯಗಳು… ಐಪಿಎಲ್​​ನಲ್ಲಿ ಮಹತ್ವದ ಬದಲಾವಣೆ

 ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌- ಭಾರತದ ವೇಳಾಪಟ್ಟಿ
ಇಲ್ಲ. ದಿನ ದಿನಾಂಕ ಮುಖಾಮುಖಿ   ಪಂದ್ಯ
1 ಶುಕ್ರವಾರ  ನವೆಂಬರ್ 14 ಭಾರತ  vs ಯುಎಇ ಗ್ರೂಪ್ ಬಿ ಲೀಗ್ ಪಂದ್ಯ
2 ಭಾನುವಾರ  ನವೆಂಬರ್ 16 ಭಾರತ vs ಪಾಕಿಸ್ತಾನ್ ಗ್ರೂಪ್ ಬಿ ಲೀಗ್ ಪಂದ್ಯ
3 ಮಂಗಳವಾರ  ನವೆಂಬರ್ 18 ಭಾರತ vs ಓಮನ್ ಗ್ರೂಪ್ ಬಿ ಲೀಗ್ ಪಂದ್ಯ
4 ಶುಕ್ರವಾರ  ನವೆಂಬರ್ 21 ಸೆಮಿಫೈನಲ್ -1  ಪಂದ್ಯ
5 ಶುಕ್ರವಾರ  ನವೆಂಬರ್ 21 ಸೆಮಿಫೈನಲ್ – 2 ಪಂದ್ಯ
6 ಭಾನುವಾರ  ನವೆಂಬರ್ 23 ಫೈನಲ್

Published On - 11:29 am, Tue, 4 November 25

ಬಲೂಚಿಸ್ತಾನಲ್ಲಿ ಮತ್ತೆ ಜಾಫರ್ ಎಕ್ಸ್​ಪ್ರೆಸ್ ರೈಲಿನ ಮೇಲೆ ದಾಳಿ
ಬಲೂಚಿಸ್ತಾನಲ್ಲಿ ಮತ್ತೆ ಜಾಫರ್ ಎಕ್ಸ್​ಪ್ರೆಸ್ ರೈಲಿನ ಮೇಲೆ ದಾಳಿ
Daily Devotional:ಕಾರ್ತೀಕ ಮಾಸದ ಕೊನೆ ಸೋಮವಾರ ವಿಧಿ ವಿಧಾನ
Daily Devotional:ಕಾರ್ತೀಕ ಮಾಸದ ಕೊನೆ ಸೋಮವಾರ ವಿಧಿ ವಿಧಾನ
ಇಂದು ಈ ರಾಶಿಯವರು ಅನ್ಯ ಮನಸ್ಸಿನಿಂದ ವ್ಯಾಪಾರ ಹಾಳುಮಾಡಿಕೊಳ್ಳಬಹುದು
ಇಂದು ಈ ರಾಶಿಯವರು ಅನ್ಯ ಮನಸ್ಸಿನಿಂದ ವ್ಯಾಪಾರ ಹಾಳುಮಾಡಿಕೊಳ್ಳಬಹುದು
ಕೊಪ್ಪಳ: ಯಲಬುರ್ಗಾದಲ್ಲಿ ಮಹಿಳೆಗೆ ಮದ್ಯ ಸೇವನೆ ಮಾಡಿಸಿ ನಾಲ್ವರಿಂದ ರೇಪ್
ಕೊಪ್ಪಳ: ಯಲಬುರ್ಗಾದಲ್ಲಿ ಮಹಿಳೆಗೆ ಮದ್ಯ ಸೇವನೆ ಮಾಡಿಸಿ ನಾಲ್ವರಿಂದ ರೇಪ್
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸುದ್ದಿ; ಡಿಕೆಶಿ ಹೇಳಿದ್ದಿದು
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸುದ್ದಿ; ಡಿಕೆಶಿ ಹೇಳಿದ್ದಿದು
ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಬಗ್ಗೆ ನಟ ದೀಕ್ಷಿತ್ ಶೆಟ್ಟಿ ಹೇಳಿದ್ದೇನು?
ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಬಗ್ಗೆ ನಟ ದೀಕ್ಷಿತ್ ಶೆಟ್ಟಿ ಹೇಳಿದ್ದೇನು?
ಬಾಗಲಕೋಟೆ: ಬೆಂಕಿ ಹಚ್ಚುತ್ತಿರುವ ವಿಡಿಯೋ ವೈರಲ್​​​
ಬಾಗಲಕೋಟೆ: ಬೆಂಕಿ ಹಚ್ಚುತ್ತಿರುವ ವಿಡಿಯೋ ವೈರಲ್​​​
ಚಿತ್ತಾಪುರದಲ್ಲಿ ಮೊಳಗಿದ ಆರ್​​ಎಸ್​ಎಸ್​​ ಗೀತೆ: ವಿಡಿಯೋ ನೋಡಿ
ಚಿತ್ತಾಪುರದಲ್ಲಿ ಮೊಳಗಿದ ಆರ್​​ಎಸ್​ಎಸ್​​ ಗೀತೆ: ವಿಡಿಯೋ ನೋಡಿ
RSS Pathsanchalan Live: ಚಿತ್ತಾಪುರದಲ್ಲಿ RSS ಪಥಸಂಚಲನ, ಲೈವ್​​
RSS Pathsanchalan Live: ಚಿತ್ತಾಪುರದಲ್ಲಿ RSS ಪಥಸಂಚಲನ, ಲೈವ್​​
ಬಿಗ್​​ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್: ಕಣ್ಣೀರು ಹಾಕಿದ ಅಶ್ವಿನಿ
ಬಿಗ್​​ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್: ಕಣ್ಣೀರು ಹಾಕಿದ ಅಶ್ವಿನಿ