
2025 ರ ಮಹಿಳಾ ಏಕದಿನ ವಿಶ್ವಕಪ್‌ನ (Women’s World Cup 2025) 10 ನೇ ಪಂದ್ಯವು ಅಕ್ಟೋಬರ್ 9 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ (India Women vs South Africa Women) ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ವಿಶಾಖಪಟ್ಟಣಂನಲ್ಲಿರುವ ACA VDCA ಕ್ರಿಕೆಟ್ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಈ ಪಂದ್ಯಾವಳಿಯಲ್ಲಿ ಭಾರತದ ಪ್ರದರ್ಶನ ಇಲ್ಲಿಯವರೆಗೆ ಉತ್ತಮವಾಗಿದ್ದು, ಇದುವರೆಗೆ ಆಡಿರುವ ಎರಡಕ್ಕೆ ಎರಡೂ ಪಂದ್ಯಗಳನ್ನು ಗೆದ್ದಿದೆ. ಇದೀಗ ಆಫ್ರಿಕಾ ವಿರುದ್ಧ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸುವ ಇರಾದೆಯಲ್ಲಿದೆ. ಇತ್ತ ಆಫ್ರಿಕಾ ತಂಡ ಆಡಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಸೋತು ಒಂದರಲ್ಲಿ ಗೆದ್ದಿದೆ. ಹೀಗಾಗಿ ಆಫ್ರಿಕಾ ತಂಡ ಕೂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ನೋಡುತ್ತಿದೆ. ಆದರೆ ಈ ಪಂದ್ಯ ನಡೆಯುವ ಸಾಧ್ಯತೆಗಳು ಕಡಿಮೆ ಎಂದು ಹವಾಮಾನ ವರದಿ ಹೇಳುತ್ತಿದೆ.
ಅಕ್ಟೋಬರ್ 9 ರಂದು ವಿಶಾಖಪಟ್ಟಣಂನಲ್ಲಿನ ಹವಾಮಾನದ ಬಗ್ಗೆ ಹೇಳುವುದಾದರೆ, ಈ ದಿನ ಮಳೆಯಾಗುವ ಸಾಧ್ಯತೆ ಶೇ. 75 ರಷ್ಟು ಇದೆ. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಆ ಸಮಯದಲ್ಲಿ, ವಿಶಾಖಪಟ್ಟಣಂನಲ್ಲಿ ಮಳೆಯಾಗುವ ಸಾಧ್ಯತೆ ಶೇ. 23 ರಷ್ಟು ಇದ್ದು, ಸಂಜೆ 4 ಗಂಟೆಗೆ ಮಳೆಯಾಗುವ ಸಾಧ್ಯತೆ ಶೇ. 49 ರಷ್ಟು ಇದೆ. ಸಂಜೆ 5 ಗಂಟೆಗೆ ಮಳೆಯಾಗುವ ಸಾಧ್ಯತೆ ಶೇ. 51 ರಷ್ಟು ಇದೆ. ಪರಿಣಾಮವಾಗಿ, ಈ ಪಂದ್ಯದಲ್ಲಿ ಮಳೆಯಿಂದಾಗಿ ಆಟವನ್ನು ಹಲವಾರು ಬಾರಿ ನಿಲ್ಲಿಸಬೇಕಾಗಹುದು. ಪಂದ್ಯದ ದಿನದ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದ್ದು, ರಾತ್ರಿಯಲ್ಲಿ ಅದು 28 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ.
ವಿಶಾಖಪಟ್ಟಣಂನಲ್ಲಿರುವ ಪಿಚ್ ಕಪ್ಪು ಮಣ್ಣಿನಿಂದ ಮಾಡಲ್ಪಟ್ಟಿದೆ. ಹೀಗಾಗಿ ಇಲ್ಲಿ ಸ್ಪಿನ್ನರ್‌ಗಳ ವಿರುದ್ಧ ಬ್ಯಾಟಿಂಗ್ ಮಾಡುವುದು ಸ್ವಲ್ಪ ಕಷ್ಟಕರವಾಗಿರುತ್ತದೆ. ಆರಂಭಿಕ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ಸಹಾಯ ಸಿಗುವ ಸಾಧ್ಯತೆಯಿದೆ. ಟಾಸ್ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಟಾಸ್ ಗೆದ್ದರೆ, ಇಬ್ಬರೂ ನಾಯಕರು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಬಹುದು.
World Cup 2025: ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾ ಭಾರತ? ಎದುರಾಳಿ ಯಾರು?
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಪ್ರತೀಕಾ ರಾವಲ್, ಉಮಾ ಚೆಟ್ರಿ, ರೇಣುಕಾ ಸಿಂಗ್ ಠಾಕೂರ್, ಸ್ನೇಹ ರಾಣಾ, ಶ್ರೀ ಚರಣಿ, ರಾಧಾ ಯಾದವ್, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್.
ದಕ್ಷಿಣ ಆಫ್ರಿಕಾ ತಂಡ: ಲಾರಾ ವೊಲ್ವಾರ್ಡ್ಟ್ (ನಾಯಕಿ), ಮರಿಜಾನ್ನೆ ಕಪ್, ತಜ್ಮಿನ್ ಬ್ರಿಟ್ಸ್, ಅಯಾಬೊಂಗಾ ಖಾಕಾ, ಮಸಾಬಟಾ ಕ್ಲಾಸ್, ಸುನೆ ಲೂಸ್, ಕ್ಲೋಯ್ ಟ್ರಯಾನ್, ನಡಿನ್ ಡಿ ಕ್ಲರ್ಕ್, ಸಿನಾಲೊ ಜಾಫ್ತಾ, ನಾನ್‌ಕುಲುಲೆಕೊ ಮ್ಲಾಬಾ, ಅನ್ನೇರಿ ಡೆರ್ಕ್ಸೆನ್, ಅನ್ನೆಕೆ ಬಾಷ್, ಕರಾಬೊ ಮೆಸೊ, ತುಮಿ ಸೆಖುಖುನೆ, ನೊಂದುಮಿಸೊ ಶಾಂಗಸೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ