
ಕೊಲಂಬೊದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ XI (India vs Sri Lanka XI) ನಡುವಿನ 3 ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನದ ಕೊನೆಯ ಓವರ್ನಲ್ಲಿ ಪಂದ್ಯವನ್ನು ಗೆದ್ದಿಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಗೆಲುವಿನ ಶ್ರೀಲಂಕಾ ತಂಡದ ನೀಡಿದ 207 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಸುಲಭವಾಗಿ ಗುರಿ ಬೆನ್ನಟ್ಟುವಂತೆ ತೋರುತ್ತಿತ್ತು. ಆದರೆ ತಂಡದ ಆಟಗಾರರು ಕ್ರೀಸ್ನಲ್ಲಿ ಸಮಯ ಕಳೆಯುವ ಸಲುವಾಗಿ ಸಾಕಷ್ಟು ಎಸೆತಗಳನ್ನು ಡಾಟ್ ಮಾಡಿದರು. ಹೀಗಾಗಿ ಪಂದ್ಯ ಕೊನೆಯ ಓವರ್ವರೆಗೂ ಸಾಗಿತು. ಕೊನೆ ಕೊನೆಗೆ ಟೀಂ ಇಂಡಿಯಾ ಈ ಗುರಿಯನ್ನು ಬೆನ್ನಟ್ಟದೆ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸುವಂತೆ ತೋರುತ್ತಿತ್ತು. ಆದರೆ ದಿನದಾಟದ ಕೊನೆಯ ಓವರ್ನಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದರು.
ಈ ಪಂದ್ಯದಲ್ಲಿ, ಶ್ರೀಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ ಮೊದಲ ಇನ್ನಿಂಗ್ಸ್ ಅನ್ನು 8 ವಿಕೆಟ್‌ಗೆ 363 ರನ್‌ಗಳಿಗೆ ಡಿಕ್ಲೇರ್ ಮಾಡಿತು. ನಂತರ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 357 ರನ್‌ಗಳಿಗೆ ಡಿಕ್ಲೇರ್ ಮಾಡಿತು. ಹೀಗಾಗಿ ಶ್ರೀಲಂಕಾಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 6 ರನ್‌ಗಳ ಮುನ್ನಡೆ ಪಡದುಕೊಂಡಿತು. ನಂತರ ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 200 ರನ್ ಗಳಿಸಿ ಭಾರತಕ್ಕೆ 207 ರನ್‌ಗಳ ಗುರಿ ನೀಡಿತು.ಈ ಗುರಿ ಬೆನ್ನಟ್ಟಿದ ಭಾರತ 4 ವಿಕೆಟ್‌ಗಳಿಗೆ 214 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಇಲೆವೆನ್ ಪರ ನಿಶಾನ್ ಮದುಷ್ಕ 63 ರನ್ ಗಳಿಸಿ ರಿಟೈರ್ಡ್ ಹರ್ಟ್ ಆದರೆ, ಮತ್ತೊಬ್ಬ ಆರಂಭಿಕ ರವಿಂದು ರಸಂತ 8 ರನ್ ಗಳಿಸಿ ಔಟಾದರು. ಪಸಿಂದು ಸೂರ್ಯಬಂದರ 4 ರನ್ ಗಳಿಸಿದರೆ, ಪವನ್ ರತ್ನಾಯಕೆ 16 ರನ್ ಗಳಿಸಿ ಔಟಾದರು. ಅಂಜೆಲಾ ಬಂಡಾರ 35 ರನ್, ನಿಪುನ್ ಧನಂಜಯ 46 ರನ್ ಮತ್ತು ಸೋನಾಲ್ ದಿನುಷಾ 9 ರನ್ ಗಳಿಸಿ ಔಟಾದರು. ರಮೇಶ್ ಮೆಂಡಿಸ್ 16 ರನ್ ಗಳಿಸಿ ಅಜೇಯರಾಗಿ ಉಳಿದರೆ, ಕೇಶರ ನುವಂತ 1 ರನ್ ಗಳಿಸಿ ಔಟಾದರು. ಭಾರತದ ಪರ ರವೀಂದ್ರ ಜಡೇಜ ಮತ್ತು ಗುರ್ನೂರ್ ಬ್ರಾರ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.
ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 61 ರನ್ ಗಳಿಸಿದರೆ, ನಾಯಕ ಶುಭ್ಮನ್ ಗಿಲ್ 44 ರನ್ ಗಳಿಸಿದರು. ಧ್ರುವ್ ಜುರೆಲ್ 17 ರನ್ ಗಳಿಸಿ ಔಟ್ ಆದರೆ, ರಿಷಭ್ ಪಂತ್ 68 ಎಸೆತಗಳಲ್ಲಿ 28 ರನ್ ಗಳಿಸಿದರು. ರವೀಂದ್ರ ಜಡೇಜಾ 22 ರನ್ ಗಳಿಸಿದರೆ, ಮಾನವ್ ಸುತಾರ್ ರಿಟೈರ್ಡ್ ಔಟ್ ಆದರು. ಗುರ್ನೂರ್ ಬ್ರಾರ್ ಅವರ ಇನ್ನಿಂಗ್ಸ್ ಕೇವಲ 2 ರನ್‌ಗಳಿಗೆ ಅಂತ್ಯವಾಯಿತು. ಸಿರಾಜ್ ಬಿರುಗಾಳಿಯ ಇನ್ನಿಂಗ್ಸ್ ಆಡಿದ 15 ಎಸೆತಗಳಲ್ಲಿ 4 ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ ಅಜೇಯ 32 ರನ್ ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು.
Published On - 5:53 pm, Sun, 9 August 26