IND vs SA: ಐದೂವರೆ ವರ್ಷಗಳ ನಂತರ ವೃತ್ತಿ ಬದುಕಿನ 2ನೇ ಶತಕ ಬಾರಿಸಿದ ತೆಂಬಾ ಬವುಮ

| Updated By: ಪೃಥ್ವಿಶಂಕರ

Updated on: Jan 19, 2022 | 5:41 PM

IND vs SA: ಪಾರ್ಲ್ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅದ್ಭುತ ಶತಕ ಬಾರಿಸಿದರು. ಬಾವುಮಾ 133 ಎಸೆತಗಳಲ್ಲಿ ಶತಕ ಪೂರೈಸಿದರು.

IND vs SA: ಐದೂವರೆ ವರ್ಷಗಳ ನಂತರ ವೃತ್ತಿ ಬದುಕಿನ 2ನೇ ಶತಕ ಬಾರಿಸಿದ ತೆಂಬಾ ಬವುಮ
ತೆಂಬಾ ಬವುಮ
Follow us on

ಟೆಸ್ಟ್ ಸರಣಿಯಲ್ಲಿ ಭಾರತದ ಬೌಲರ್​ಗಳಿಗೆ ಸಮಸ್ಯೆಯಾಗಿ ಪರಿಣಮಿಸಿದ್ದ ತೆಂಬಾ ಬಾವುಮಾ, ಏಕದಿನ ಸರಣಿಯಲ್ಲೂ ಟೀಂ ಇಂಡಿಯಾಕ್ಕೆ ಸಂಕಷ್ಟ ತಂದೊಡ್ಡಿದ್ದರು. ಪಾರ್ಲ್ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅದ್ಭುತ ಶತಕ ಬಾರಿಸಿದರು. ಬಾವುಮಾ 133 ಎಸೆತಗಳಲ್ಲಿ ಶತಕ ಪೂರೈಸಿದರು. ಬಾವುಮಾ ಅವರ ವೃತ್ತಿ ಜೀವನದಲ್ಲಿ ಇದು ಎರಡನೇ ಏಕದಿನ ಶತಕವಾಗಿದ್ದು, ಇದು ಭಾರತದ ವಿರುದ್ಧ ಅವರ ಮೊದಲ ಏಕದಿನ ಶತಕವಾಗಿದೆ.

ಚೊಚ್ಚಲ ಏಕದಿನ ಪಂದ್ಯದಲ್ಲೇ ಐರ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದ ತೆಂಬಾ ಬಾವುಮಾ, ಆ ಬಳಿಕ ಎರಡು ಬಾರಿ ಶತಕ ವಂಚಿತರಾಗಿದ್ದರು, ಆದರೆ ಈ ಬಾರಿ ಬಾವುಮಾ ಯಾವುದೇ ತಪ್ಪು ಮಾಡದೆ ಟೀಂ ಇಂಡಿಯಾದ ಬಲಿಷ್ಠ ಬೌಲಿಂಗ್ ಎದುರು ಅಮೋಘ ಶತಕ ಬಾರಿಸಿದ್ದರು. ತೆಂಬಾ ಬವುಮಾ ನಾಯಕನಾಗಿ ಮೊದಲ ಬಾರಿಗೆ ಶತಕ ಗಳಿಸಿದರು ಮತ್ತು ಅವರು ಏಕದಿನದಲ್ಲಿ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ 7 ನೇ ನಾಯಕರಾಗಿದ್ದಾರೆ.

ತೆಂಬಾ ಬಾವುಮಾ ಅವರು ಬಹಳ ಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಕಾಲಿಟ್ಟಿದ್ದರು. ದಕ್ಷಿಣ ಆಫ್ರಿಕಾ 15.1 ಓವರ್‌ಗೆ ಕೇವಲ 58 ರನ್ ಗಳಿಸಿ ಯೆನೆಮನ್ ಮಲಾನ್ ಮತ್ತು ಕ್ವಿಂಟನ್ ಡಿ ಕಾಕ್ ವಿಕೆಟ್ ಕಳೆದುಕೊಂಡಿತು. ಆದರೆ, ಇದಾದ ಬಳಿಕ ತೆಂಬಾ ಬಾವುಮಾ ತಾಳ್ಮೆಯಿಂದ ಆಡುತ್ತಾ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ನಿಭಾಯಿಸಿದರು. ಬಾವುಮಾ 76 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ, ಅವರಿಗೆ ಬೆಂಬಲವಾಗಿ ಬಂದ ರಾಸಿ ವ್ಯಾನ್ ಡೆರ್ ದುಸಾನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಇಬ್ಬರೂ ಆಟಗಾರರು ನಾಲ್ಕನೇ ವಿಕೆಟ್​ಗೆ 97 ಎಸೆತಗಳಲ್ಲಿ ಶತಕದ ಜೊತೆಯಾಟ ನಡೆಸಿದರು. ಇಬ್ಬರೂ ಆಟಗಾರರು ತಂಡವನ್ನು 38.1 ಓವರ್‌ಗಳಲ್ಲಿ 200 ರನ್ ಗಡಿ ದಾಟಿಸಿದರು. ನಂತರ ಅದೇ ಜೋಡಿ ತಂಡವನ್ನು 250 ಕ್ಕೆ ಕೊಂಡೊಯ್ದರು.

ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಗೆಲ್ಲುವಲ್ಲಿ ತೆಂಬಾ ಬಾವುಮಾ ಪ್ರಮುಖ ಪಾತ್ರ ವಹಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ 3 ಟೆಸ್ಟ್‌ಗಳಲ್ಲಿ 73.66 ಸರಾಸರಿಯಲ್ಲಿ 221 ರನ್ ಗಳಿಸಿದರು, ಇದರಲ್ಲಿ 2 ಅರ್ಧಶತಕಗಳು ಸೇರಿವೆ.