IND vs SA: ಪದೇಪದೇ ಅದೇ ತಪ್ಪು, 11 ಬಾರಿ ಔಟ್! ಕೊಹ್ಲಿಗೆ ತನ್ನ ತಪ್ಪಿನ ಅರಿವಾಗುವುದಾದರೂ ಯಾವಾಗ?

| Updated By: ಪೃಥ್ವಿಶಂಕರ

Updated on: Dec 29, 2021 | 5:54 PM

Virat Kohli: ವಿರಾಟ್ ಕೊಹ್ಲಿ ಕಳೆದ 3 ವರ್ಷಗಳಲ್ಲಿ 11 ಡ್ರೈವ್‌ಗಳಿಗೆ ಔಟಾಗಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಟೆಸ್ಟ್ ಮಾದರಿಯಲ್ಲಿ ಮತ್ತೆ ಮತ್ತೆ ಅದೇ ರೀತಿಯಲ್ಲಿ ಔಟ್ ಆಗುವುದು ನಿಜಕ್ಕೂ ಕಳವಳಕಾರಿ ವಿಷಯ.

IND vs SA: ಪದೇಪದೇ ಅದೇ ತಪ್ಪು, 11 ಬಾರಿ ಔಟ್! ಕೊಹ್ಲಿಗೆ ತನ್ನ ತಪ್ಪಿನ ಅರಿವಾಗುವುದಾದರೂ ಯಾವಾಗ?
ವಿರಾಟ್, ದ್ರಾವಿಡ್
Follow us on

ವಿರಾಟ್ ಕೊಹ್ಲಿ… ವಿಶ್ವ ಕ್ರಿಕೆಟ್‌ನಲ್ಲಿ ಪ್ರತಿಯೊಬ್ಬರು ಮಾತನಾಡುವ ಹೆಸರು. ವಿರಾಟ್ ಕ್ರೀಸ್‌ನಲ್ಲಿರುವಾಗ, ಬೌಲರ್‌ಗಳು ತಮ್ಮ 100 ಪ್ರತಿಶತ ಸಾಮಥ್ರ್ಯವನ್ನು ನೀಡಬೇಕಾಗುತ್ತದೆ. ಏಕೆಂದರೆ ಬೌಲರ್​ಗಳ ಸಣ್ಣ ತಪ್ಪನ್ನು ವಿರಾಟ್ ದಂಡಿಸುತ್ತಾರೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿರಾಟ್ ಕೊಹ್ಲಿ ಅವರ ಫಾರ್ಮ್ ಮತ್ತು ಅವರ ಬ್ಯಾಟಿಂಗ್ ಹವಾಮಾನದಂತೆ ಬದಲಾಗಿದೆ. ವಿರಾಟ್ ಕೊಹ್ಲಿ ತಮ್ಮ ತಪ್ಪುಗಳಿಂದ ಕಲಿಯುತ್ತಿದ್ದುದನ್ನು ಈಗ ಮತ್ತೆ ಮತ್ತೆ ಪುನರಾವರ್ತಿಸುತ್ತಿದ್ದಾರೆ. ಇದೇ ಕಾರಣಕ್ಕೆ ಎರಡು ವರ್ಷ ಕಳೆದರೂ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಒಂದೇ ಒಂದು ಶತಕ ಬರಲಿಲ್ಲ.

ಸೆಂಚುರಿಯನ್ ಟೆಸ್ಟ್ ಕುರಿತು ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಂದೇ ತಪ್ಪು ಮಾಡಿದರು ಮತ್ತು ಫಲಿತಾಂಶವು ಎರಡೂ ಬಾರಿಯೂ ಒಂದೇ ಆಗಿತ್ತು. ಮೊದಲ ಇನಿಂಗ್ಸ್‌ನಲ್ಲಿ 10ನೇ ಸ್ಟಂಪ್‌ನ ಚೆಂಡನ್ನು ಹೊಡೆಯಲು ಯತ್ನಿಸುತ್ತಿದ್ದಾಗ ವಿರಾಟ್ ವಿಕೆಟ್ ಕಳೆದುಕೊಂಡರು. ಎರಡನೇ ಇನ್ನಿಂಗ್ಸ್‌ನಲ್ಲೂ 8ನೇ ಸ್ಟಂಪ್‌ನ ಚೆಂಡನ್ನು ಆಡಲು ವಿರಾಟ್ ಪ್ರಯತ್ನಿಸಿದರು. ಪರಿಣಾಮ 18 ರನ್‌ಗಳಿಗೆ ಇನ್ನಿಂಗ್ಸ್ ಅಂತ್ಯಗೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಊಟದ ನಂತರ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲಿಯೇ ಡ್ರೈವ್ ಮಾಡಲು ಪ್ರಯತ್ನಿಸಿದ್ದು ದೊಡ್ಡ ವಿಷಯ. ಮಾರ್ಕೊ ಯೆನ್ಸನ್ ಅವರ ಎಸೆತದಲ್ಲಿ ಅವರು ಔಟಾದ ಚೆಂಡು ಮೈನರ್ ಬಾಲ್ ಆಗಿತ್ತು, ಯಾವುದೇ ಬ್ಯಾಟ್ಸ್‌ಮನ್ ಅದನ್ನು ಬಿಡುತ್ತಿದ್ದರು ಆದರೆ ವಿರಾಟ್ ಕೊಹ್ಲಿ ಅದರ ಮೇಲೆ ಶಾಟ್ ಆಡಲು ಪ್ರಯತ್ನಿಸಿ ಔಟಾದರು.

ಅದೇ ತಪ್ಪನ್ನು 11 ಬಾರಿ ಪುನರಾವರ್ತಿಸಲಾಗಿದೆ!
ಸ್ಟಾರ್ ಆಟಗಾರರು ಒಂದು ಬಾರಿ ಮಾಡಿದ ತಪ್ಪಿನಿಂದ ಪಾಠ ಕಲಿತು ತಮ್ಮ ಆಟವನ್ನು ಸುಧಾರಿಸುತ್ತಾರೆ ಎಂದು ಹೇಳಲಾಗುತ್ತದೆ. ವಿರಾಟ್ ಕೊಹ್ಲಿ ಕೂಡ ಇದೇ ರೀತಿಯದ್ದನ್ನು ಮಾಡುತ್ತಿದ್ದರು, ಅದಕ್ಕಾಗಿಯೇ ಅವರ ಬ್ಯಾಟ್‌ನಿಂದ 70 ಅಂತರರಾಷ್ಟ್ರೀಯ ಶತಕಗಳು ಹೊರಬಂದವು. ಆದರೆ ಕಳೆದ ಮೂರು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಬದಲಾಗಿದ್ದಾರೆ. ವಿರಾಟ್ ಕೊಹ್ಲಿ ಕಳೆದ 3 ವರ್ಷಗಳಲ್ಲಿ 11 ಡ್ರೈವ್‌ಗಳಿಗೆ ಔಟಾಗಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಟೆಸ್ಟ್ ಮಾದರಿಯಲ್ಲಿ ಮತ್ತೆ ಮತ್ತೆ ಅದೇ ರೀತಿಯಲ್ಲಿ ಔಟ್ ಆಗುವುದು ನಿಜಕ್ಕೂ ಕಳವಳಕಾರಿ ವಿಷಯ. ವಿರಾಟ್ ಕೊಹ್ಲಿಗೆ ಶತಕದ ಬರ ಮುಗಿಯಲಿ ಎಂದು ಜನ ಕಾಯುತ್ತಿದ್ದಾರೆ, ಆದರೆ ಇಂತಹ ತಪ್ಪಿನಿಂದ ಅದು ಆಗುವುದಿಲ್ಲ.

ವಿರಾಟ್ ಕೊಹ್ಲಿ ವಿಕೆಟ್ ಬಗ್ಗೆ ಪ್ರತಿಕ್ರಿಯಿಸಿದ ಸುನಿಲ್ ಗವಾಸ್ಕರ್, ಭೋಜನದ ನಂತರ ಭಾರತ ತಂಡದ ನಾಯಕ ಇಂತಹ ಶಾಟ್ ಆಡುತ್ತಿರುವುದು ನಿಜಕ್ಕೂ ಅಚ್ಚರಿ ತಂದಿದೆ ಎಂದಿದ್ದಾರೆ. ಗವಾಸ್ಕರ್, ‘ಇದು ತುಂಬಾ ಕೆಟ್ಟ ಹೊಡೆತ ಎಂದು ನೀವು ಒಪ್ಪಿಕೊಳ್ಳಬೇಕು. ಊಟದ ನಂತರದ ಮೊದಲ ಎಸೆತದಲ್ಲಿಯೇ ಇಂತಹ ಕೆಟ್ಟ ಹೊಡೆತಕ್ಕೆ ಕೈ ಹಾಕಬಾರದಿತ್ತು. ಪ್ರತಿಯೊಬ್ಬ ಬ್ಯಾಟ್ಸ್‌ಮನ್ ವಿರಾಮದ ನಂತರ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾನೆ. ಆದರೆ ಕೊಹ್ಲಿ ಅನುಭವಿ ಬ್ಯಾಟ್ಸ್‌ಮನ್ ಹೀಗಾಗಿ ಅವರ ಮನಸ್ಸಿನಲ್ಲಿ ವೇಗವಾಗಿ ರನ್ ಗಳಿಸುವ ಆಲೋಚನೆ ನಡೆಯುತ್ತಿರಬೇಕು, ಇದರಿಂದ ಇನ್ನಿಂಗ್ಸ್ ಶೀಘ್ರದಲ್ಲೇ ಡಿಕ್ಲೇರ್ ಆಗಬಹುದು. ಬಹುಶಃ ಹೀಗಾಗಿ ಈ ತಪ್ಪು ಸಂಭವಿಸಿದೆ ಎಂದಿದ್ದಾರೆ.