ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 8 ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿತು. ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಪಂದ್ಯದಲ್ಲಿ ಮೊದಲು ಆಡಿದ ಟೀಂ ಇಂಡಿಯಾ 211 ರನ್ಗಳಿಗೆ ಆಲೌಟ್ ಆಯಿತು. 212 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯಿತು. ತಂಡದ ಪರ ರೀಜಾ ಹೆಂಡ್ರಿಕ್ಸ್ (52) ಮತ್ತು ಟೋನಿ ಡಿ ಜಾರ್ಜಿ (ಅಜೇಯ 119) ಮೊದಲ ವಿಕೆಟ್‌ಗೆ 130 ರನ್‌ಗಳ ಜೊತೆಯಾಟ ನಡೆಸಿ ಪಂದ್ಯವನ್ನು ಭಾರತದಿಂದ ದೂರವಿಟ್ಟರು. ಆ ಬಳಿಕ ರಾಸಿ ವನ್ ದಾರ್ ಡುಸೆನ್ (36) ಶತಕವೀರ ಜಾರ್ಜಿಗೆ ಆಸರೆಯಾಗಿ ತಂಡವನ್ನು ಸುಲಭ ಗೆಲುವಿನತ್ತ ಮುನ್ನಡೆಸಿದರು.
ಎರಡನೇ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಆತಿಥೇಯ ತಂಡದ ಆರಂಭಿಕ ಬ್ಯಾಟ್ಸ್ ಮನ್ ಟೋನಿ ಡಿ ಜಾರ್ಜಿ 119 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡಕ್ಕೆ 8 ವಿಕೆಟ್ ಗಳ ಸುಲಭ ಜಯ ತಂದುಕೊಟ್ಟರು.
ರಿಂಕು ಸಿಂಗ್ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಅವರು ಸೆಟ್ ಬ್ಯಾಟ್ಸ್‌ಮನ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರನ್ನು ಪೆವಿಲಿಯನ್‌ಗೆ ವಾಪಸ್ ಕಳುಹಿಸಿದರು.
ದಕ್ಷಿಣ ಆಫ್ರಿಕಾದ ಟೋನಿ ಡಿಜಾರ್ಜ್ ಅವರು ತಮ್ಮ ಎರಡನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ಮೊದಲ ಏಕದಿನ ಶತಕವನ್ನು ಗಳಿಸಿದರು. 109 ಎಸೆತಗಳಲ್ಲಿ ಶತಕ ಪೂರೈಸಿದರು.
ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ದಕ್ಷಿಣ ಆಫ್ರಿಕಾ 100 ರನ್ ಪೂರೈಸಿದೆ, ಆದರೆ ಭಾರತಕ್ಕೆ ಒಂದು ವಿಕೆಟ್ ಸಿಕ್ಕಿಲ್ಲ. ಭಾರತ ತಂಡಕ್ಕೆ ವಿಕೆಟ್‌ಗಳ ಅವಶ್ಯಕತೆಯಿದೆ. ಟೋನಿ ಡಿ ಜಾರ್ಜಿ ಅರ್ಧಶತಕ ಪೂರೈಸಿದ್ದಾರೆ.
ಭಾರತ ತಂಡ ವಿಕೆಟ್‌ಗಳ ನಿರೀಕ್ಷೆಯಲ್ಲಿದೆ. ದಕ್ಷಿಣ ಆಫ್ರಿಕಾ ಗೆಲ್ಲಲು 212 ರನ್ ಗಳಿಸಬೇಕಿದೆ, ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಆದಷ್ಟು ಬೇಗ ವಿಕೆಟ್ ಬೇಕು, ಆದರೆ ಭಾರತಕ್ಕೆ ವಿಕೆಟ್ ಸಿಗುತ್ತಿಲ್ಲ.
ಆಫ್ರಿಕಾ ತಂಡದ 5 ಓವರ್ ಮುಗಿದಿದೆ. ಆತಿಥೇಯರು ಈ ಐದು ಓವರ್ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 17 ರನ ಕಲೆಹಾಕಿದೆ.
ಆಫ್ರಿಕಾ ತಂಡದ ಬ್ಯಾಟಿಂಗ್ ಆರಂಭವಾಗಿದೆ. ಆರಂಭಿಕರಾಗಿ ರೀಜಾ ಹೆಂಡ್ರಿಕ್ಸ್ ಹಾಗೂ ಡಿ ಜೋರ್ಜಿ ಬ್ಯಾಟಿಂಗ್ ಆರಂಭಿಸಿದ್ದಾರೆ.
ಭಾರತ ತಂಡ 211 ರನ್‌ಗೆ ಆಲೌಟ್ ಆಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಪಂದ್ಯ ಗೆಲ್ಲಲು 212 ರನ್ ಗಳಿಸಬೇಕಿದೆ. ಈ ಗುರಿ ತುಂಬ ಸುಲಭ ಎಂದು ತೋರಬಹುದು, ಆದರೆ ಈ ಮೈದಾನವು ಬ್ಯಾಟಿಂಗ್‌ಗೆ ತುಂಬಾ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾಕ್ಕೂ ಈ ಗುರಿ ಸುಲಭವಲ್ಲ.
ಭಾರತದ ಒಂಬತ್ತನೇ ವಿಕೆಟ್ ಪತನವಾಯಿತು, 18 ರನ್ ಗಳಿಸಿದ ನಂತರ ಅರ್ಶ್ದೀಪ್ ಔಟಾದರು.
ಕುಲ್ದೀಪ್ ಯಾದವ್ ರೂಪದಲ್ಲಿ ಕೇಶವ್ ಮಹಾರಾಜ್ ಅವರ ಎರಡನೇ ವಿಕೆಟ್ ಪಡೆಯುವ ಮೂಲಕ ಭಾರತದ ಇನ್ನಿಂಗ್ಸ್ಗೆ ಶಾಕ್ ನೀಡಿದ್ದಾರೆ.
ಚೊಚ್ಚಲ ಏಕದಿನ ಪಂದ್ಯವನ್ನಾಡಿದ ರಿಂಕು ಸಿಂಗ್ ಕೇವಲ 17 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಟೀಂ ಇಂಡಿಯಾ ನಾಯಕ ರಾಹುಲ್ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದ್ದಾರೆ.
ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ 59 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. ಭಾರತ 35 ಓವರ್ಗಳಲ್ಲಿ 163 ರನ್ ಕಲೆಹಾಕಿದೆ.
ಬ್ಯೂರಾನ್ ಹೆಂಡ್ರಿಕ್ಸ್ ಅವರ ಬೌಲಿಂಗ್‌ನಲ್ಲಿ ಸಂಜು ಸ್ಯಾಮ್ಸನ್ ಕೇವಲ 12 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು. ಇದೀಗ ಭಾರತ 136 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ.
83 ಎಸೆತಗಳಲ್ಲಿ 62 ರನ್ ಬಾರಿಸಿದ್ದ ಭಾರತದ ಆರಂಭಿಕ ಸಾಯಿ ಸುದರ್ಶನ್ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾಗಿದ್ದಾರೆ.ಭಾರತದ ಮೂರನೇ ವಿಕೆಟ್ ಪತನವಾಗಿದೆ.
ಭಾರತ 24ನೇ ಓವರ್ನಲ್ಲಿ 100 ರನ್‌ಗಳ ಗಡಿ ದಾಟಿದೆ.
ಭಾರತ 22 ಓವರ್ಗಳಲ್ಲಿ 96 ರನ್ ಕಲೆಹಾಕಿದೆ. ಇದರೊಂದಿಗೆ ನಾಯಕ ರಾಹುಲ್ ಹಾಗೂ ಸಾಯಿ ಸುದರ್ಶನ್ ನಡುವೆ 50 ರನ್‌ಗಳ ಜತೆಯಾಟ ಕೂಡ ಮೂಡಿದೆ.
ಭಾರತದ ಯುವ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಸತತ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದಾರೆ. ಸುದರ್ಶನ್ 20ನೇ ಓವರ್ನಲ್ಲಿ 50 ರನ್‌ಗಳ ಗಡಿ ದಾಟಿದರು.
ಭಾರತ 14ನೇ ಓವರ್ನಲ್ಲಿ ತನ್ನ ಅರ್ಧಶತಕವನ್ನು ಪೂರೈಸಿದೆ. ಇದಕ್ಕಾಗಿ ತಂಡ ಪ್ರಮುಖ 2 ವಿಕೆಟ್ಗಳನ್ನು ಕಳೆದುಕೊಂಡಿದೆ.
12ನೇ ಓವರ್ನಲ್ಲಿ ಭಾರತ ಎರಡನೇ ವಿಕೆಟ್ ಕಳೆದುಕೊಂಡಿದೆ. ತಿಲಕ್ ವರ್ಮಾ ಕೇವಲ 10 ರನ್ಗಳಿಸಿ ಕ್ಯಾಚಿತ್ತು ಔಟಾದರು.
ಭಾರತ ಮೊದಲ ಪವರ್ ಪ್ಲೇ ಮುಗಿಸಿದೆ. ಈ 10 ಓವರ್ಗಳಲ್ಲಿ ತಂಡ 1 ವಿಕೆಟ್ ಕಳೆದುಕೊಂಡು 46 ರನ್ ಕಲೆಹಾಕಿದೆ. ಸಾಯಿ ಸುದರ್ಶನ್ ಹಾಗೂ ತಿಲಕ್ ವರ್ಮಾ ಕ್ರೀಸ್ನಲ್ಲಿದ್ದಾರೆ.
The Proteas strike early and get the opener Ruturaj Gaikwad on just 4 runs 🏏
📸:- Disney+ Hotstar #SAvIND #Insidesport #CricketTwitter pic.twitter.com/rrmIdZMZdt
— InsideSport (@InsideSportIND) December 19, 2023
ಭಾರತದ ಇನ್ನಿಂಗ್ಸ್ನ 5 ಓವರ್ ಮುಕ್ತಾಯಗೊಂಡಿದೆ. ಈ 5 ಓವರ್ಗಳಲ್ಲಿ ಭಾರತ 1 ವಿಕೆಟ್ ಕಳೆದುಕೊಂಡು ಕೇವಲ 17 ರನ್ ಕಲೆಹಾಕಿದೆ.
ಭಾರತದ ಇನ್ನಿಂಗ್ಸ್ನ ಮೊದಲ ಓವರ್ನ ಎರಡನೇ ಎಸೆತದಲ್ಲಿ ಭಾರತಕ್ಕೆ ಮೊದಲ ಹೊಡೆತ ಬಿದ್ದಿದೆ. ಆರಂಭಿಕ ರುತುರಾಜ್ ಗಾಯಕ್ವಾಡ್ ಪೆವಿಲಿಯನ್‌ಗೆ ಮರಳಿದರು.
ಕೆಎಲ್ ರಾಹುಲ್ (ವಿಕೆಟ್ ಕೀಪರ್/ನಾಯಕ), ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.
ಟೋನಿ ಡಿ ಜೋರ್ಜಿ, ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ನಾಂಡ್ರೆ ಬರ್ಗರ್, ಲಿಜಾದ್ ವಿಲಿಯಮ್ಸ್, ಬ್ಯೂರಾನ್ ಹೆಂಡ್ರಿಕ್ಸ್
ಟಾಸ್ ಗೆದ್ದ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 4:03 pm, Tue, 19 December 23