IPL 2024: ಅತ್ಯಧಿಕ ಮೊತ್ತಕ್ಕೆ ಹರಾಜಾದ ಟಾಪ್-5 ಆಟಗಾರರ ಪಟ್ಟಿ ಇಲ್ಲಿದೆ

IPL 2024 Auction: ಐಪಿಎಲ್ ಸೀಸನ್ 17 ಹರಾಜು ಪ್ರಕ್ರಿಯೆ ದುಬೈನ ಕೋಕಾಕೋಲಾ ಅರೇನಾದಲ್ಲಿ ನಡೆಯುತ್ತಿದ್ದು, ಇದುವರೆಗಿನ ಆಕ್ಷನ್​ನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

TV9 Web
| Updated By: ಝಾಹಿರ್ ಯೂಸುಫ್

Updated on:Dec 19, 2023 | 4:32 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ಕ್ಕಾಗಿ ನಡೆಯುತ್ತಿರುವ ಮಿನಿ ಹರಾಜಿನಲ್ಲಿ ಇಬ್ಬರು ಆಟಗಾರರು 20 ಕೋಟಿಗೂ ಅಧಿಕ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಹಾಗೆಯೇ ಮೂವರು ಆಟಗಾರರು 11+ ಕೋಟಿ ಪಡೆದಿದ್ದಾರೆ. ಅದರಂತೆ ಇದುವರೆಗಿನ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರರು ಯಾರೆಲ್ಲಾ ಎಂದು ನೋಡೋಣ...

1 / 7
1- ಮಿಚೆಲ್ ಸ್ಟಾರ್ಕ್​: ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್​ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿಕೊಂಡಿದ್ದಾರೆ. ಸ್ಟಾರ್ಕ್ ಅವರನ್ನು ಕೆಕೆಆರ್​ ಫ್ರಾಂಚೈಸಿ ಬರೋಬ್ಬರಿ 24.75 ಕೋಟಿ ರೂ.ಗೆ ಖರೀದಿಸಿ ಹೊಸ ಇತಿಹಾಸ ನಿರ್ಮಿಸಿದೆ.

2 / 7
2- ಪ್ಯಾಟ್ ಕಮಿನ್ಸ್​: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್​ ಕಮಿನ್ಸ್ ಅವರನ್ನು 20.50 ಕೋಟಿ ರೂ. ನೀಡಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ. ಇದು ಐಪಿಎಲ್ ಇತಿಹಾಸದ 2ನೇ ದುಬಾರಿ ಬಿಡ್ಡಿಂಗ್ ಎಂಬುದು ವಿಶೇಷ.

3 / 7
3- ಡೇರಿಲ್ ಮಿಚೆಲ್: ನ್ಯೂಝಿಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಡೇರಿಲ್ ಮಿಚೆಲ್ ಅವರನ್ನು ಸಿಎಸ್​ಕೆ ಫ್ರಾಂಚೈಸಿ ಬರೋಬ್ಬರಿ 14  ಕೋಟಿ ರೂ. ನೀಡಿ ಖರೀದಿಸಿದೆ.

4 / 7
4- ಹರ್ಷಲ್ ಪಟೇಲ್: ಟೀಮ್ ಇಂಡಿಯಾ ವೇಗಿ ಹರ್ಷಲ್ ಪಟೇಲ್ ಈ ಬಾರಿ 11.75 ಕೋಟಿಗೆ ಹರಾಜಾಗಿದ್ದಾರೆ. ಆರ್​ಸಿಬಿ ತಂಡದ ಮಾಜಿ ವೇಗಿಯನ್ನು ಈ ಬಾರಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿದೆ.

5 / 7
5- ಅಲ್ಝಾರಿ ಜೋಸೆಫ್: ವೆಸ್ಟ್ ಇಂಡೀಸ್​ನ ವೇಗದ ಬೌಲರ್​ ಅಲ್ಝಾರಿ ಜೋಸೆಫ್ ಅವರನ್ನು ಆರ್​ಸಿಬಿ ಬರೋಬ್ಬರಿ 11.50 ಕೋಟಿ ರೂ ನೀಡಿ ಖರೀದಿಸಿದೆ.

6 / 7
ಐಪಿಎಲ್ ಸೀಸನ್ 17 ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದ್ದು, ಇದುವರೆಗಿನ ಆಕ್ಷನ್​ನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರರ ಪಟ್ಟಿಯನ್ನು ಈ ಮೇಲೆ ನೀಡಲಾಗಿದೆ.

7 / 7

Published On - 4:31 pm, Tue, 19 December 23

Follow us