ಟೆಸ್ಟ್ ಕ್ರಿಕೆಟ್ನಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಭಾರತ ತಂಡ ದಕ್ಷಿಣ ಆಫ್ರಿಕಾ (India vs South Africa) ನೆಲದಲ್ಲಿ ಮಾತ್ರ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಇದೀಗ ಇತಿಹಾಸ ಸೃಷ್ಟಿಸಲು ಹೊರಟಿರುವ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂಡೋ-ಆಫ್ರಿಕಾ ನಡುವೆ ಡಿಸೆಂಬರ್ 26 ಮಂಗಳವಾರದಿಂದ ಪ್ರಥಮ ಟೆಸ್ಟ್ ಪಂದ್ಯ ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಪ್ರಾರಂಭವಾಗುತ್ತದೆ. ಇದಕ್ಕೆ ಎಲ್ಲರೀತಿಯ ಸಿದ್ಧತೆಗಳು ನಡೆಯುತ್ತಿವೆ. ಆದರೆ, ಬೇಸರದ ಸಂಗತಿ ಎಂದರೆ ಡಿಸೆಂಬರ್ 26 ರಂದು ಮೊದಲ ಟೆಸ್ಟ್ ಪಂದ್ಯ ಅಂದುಕೊಂಡ ಸಮಯಕ್ಕೆ ಆರಂಭವಾಗುವುದು ಅನುಮಾನವಂತೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡು ಟೆಸ್ಟ್ ಪಂದ್ಯಗಳ ಸರಣಿ ಇದೆ. ಮೊದಲ ಪಂದ್ಯವು ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಡಿಸೆಂಬರ್ 26 ರಿಂದ 30 ರವರೆಗೆ ನಡೆಯಲಿದ್ದು, ಎರಡನೇ ಪಂದ್ಯವು 2024 ಜನವರಿ 3 ರಿಂದ 7 ರವರೆಗೆ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಆದರೆ, ಮೊದಲ ಟೆಸ್ಟ್ ಪಂದ್ಯದ ಆಕ್ಷನ್ ನಿಗದಿತ ಸಮಯಕ್ಕೆ ಆರಂಭವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
IND vs SA 1st Test: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್: ಸೆಂಚುರಿಯನ್‌ನಲ್ಲಿ ಟೀಮ್ ಇಂಡಿಯಾ ದಾಖಲೆ ಹೇಗಿದೆ?
ಸೆಂಚುರಿಯನ್ ಹವಾಮಾನವು ಈ ಟೆಸ್ಟ್ ಪಂದ್ಯಕ್ಕೆ ಅಡ್ಡಿ ಪಡಿಸುವುದು ದಟ್ಟವಾಗಿದೆ. ಕಳೆದ ಕೆಲವು ದಿನಗಳಿಂದ ದಕ್ಷಿಣ ಆಫ್ರಿಕಾದ ಈ ನಗರದಲ್ಲಿ ಹವಾಮಾನವು ಸ್ಪಷ್ಟ ಮತ್ತು ಬಿಸಿಲಿನಿಂದ ಕೂಡಿದೆ. ಆದರೆ ಮಂಗಳವಾರದಂದು, ಪಂದ್ಯ ಆರಂಭವಾಗುವ ದಿನ ಹವಾಮಾನವು ಫೌಲ್ ಎಂದು ಹೇಳಲಾಗುತ್ತದೆ. ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ, ಡಿಸೆಂಬರ್ 26 ರಂದು ಸೆಂಚುರಿಯನ್‌ನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮಳೆಯ ಸಾಧ್ಯತೆ ಶೇಕಡಾ 96 ರಷ್ಟಿದೆ.
ಪಿಟಿಐ ಜೊತೆ ಮಾತನಾಡಿದ ಕ್ಯುರೇಟರ್ ಬ್ಲೋಯ್, ಮುಂದಿನ ದಿನಗಳಲ್ಲಿ ತಾಪಮಾನವು 20 ಡಿಗ್ರಿಗಳಿಗೆ ಇಳಿಯಬಹುದು ಮತ್ತು ಮೊದಲ ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಮೊದಲ ದಿನ ಅಂದರೆ ಡಿಸೆಂಬರ್ 26 ರಂದು ಯಾವುದೇ ರೀತಿಯ ಕ್ರಿಕೆಟ್ ಪಂದ್ಯ ನೋಡುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಕ್ಯುರೇಟರ್ ಹೇಳಿದ್ದಾರೆ. ಡಿ. 26ರಂದು ಮಾತ್ರವಲ್ಲದೆ ಡಿಸೆಂಬರ್ 27ರಂದು ಮಳೆಯಾಗುವ ನಿರೀಕ್ಷೆಯಿದ್ದು, ಇಂತಹ ಪರಿಸ್ಥಿತಿಯಲ್ಲಿ ನಿಗದಿತ ಸಮಯಕ್ಕೆ ಆಟ ಆರಂಭವಾಗುವ ಅಥವಾ ಮುಗಿಯುವ ಸಾಧ್ಯತೆ ಇಲ್ಲ. ಹೀಗಿರುವಾಗ ಡಿಸೆಂಬರ್ 26ಕ್ಕೆ ಸೆಂಚುರಿಯನ್ ಟೆಸ್ಟ್ ಆರಂಭವಾಗುವ ಸಾಧ್ಯತೆ ಕಡಿಮೆ ಇದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ