VIDEO: ಪ್ಯಾಡ್ ಧರಿಸದೇ ಬ್ಯಾಟಿಂಗ್​ಗೆ ಬಂದ ಪಾಕ್ ಕ್ರಿಕೆಟಿಗ..!

Haris Rauf Video: ಈ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಬ್ಯಾಟಿಂಗ್ ಮಾಡುವಾಗ ಪಾಕಿಸ್ತಾನ್ ಆಟಗಾರ ಹ್ಯಾರಿಸ್ ರೌಫ್ ಪ್ಯಾಡ್ ಧರಿಸದೇ ಕಣಕ್ಕಿಳಿದಿದ್ದಾರೆ. ಇನಿಂಗ್ಸ್​ನ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಹ್ಯಾರಿಫ್ ರೌಫ್ ಬ್ಯಾಟಿಂಗ್​ ಬಂದಿದ್ದರು. ಆದರೆ ಕ್ರೀಸ್​ಗೆ ಆಗಮಿಸಿದಾಗ ರೌಫ್ ಕಾಲಿಗೆ ಪ್ಯಾಡ್​ ಧರಿಸಿರಲಿಲ್ಲ.

VIDEO: ಪ್ಯಾಡ್ ಧರಿಸದೇ ಬ್ಯಾಟಿಂಗ್​ಗೆ ಬಂದ ಪಾಕ್ ಕ್ರಿಕೆಟಿಗ..!
Haris Rauf
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 24, 2023 | 7:50 AM

ಮುಂಬೈ: ಬಿಗ್ ಬ್ಯಾಷ್ ಲೀಗ್​ನ (BBL 2023) 13ನೇ ಸೀಸನ್​ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಅದು ಕೂಡ ಪ್ಯಾಡ್ ಧರಿಸದೇ ಬ್ಯಾಟರ್ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. ಸಿಡ್ನಿ ಥಂಡರ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್ ಸ್ಟಾರ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ 20 ಓವರ್​ಗಳಲ್ಲಿ 172 ರನ್ ಗಳಿಸಿ ಆಲೌಟ್ ಆದರು. ಈ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಸಿಡ್ನಿ ಥಂಡರ್ 18.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿತು.

ಪ್ಯಾಡ್ ಧರಿಸದೇ ಬಂದ ಪಾಕ್ ಕ್ರಿಕೆಟಿಗ:

ಈ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಬ್ಯಾಟಿಂಗ್ ಮಾಡುವಾಗ ಪಾಕಿಸ್ತಾನ್ ಆಟಗಾರ ಹ್ಯಾರಿಸ್ ರೌಫ್ ಪ್ಯಾಡ್ ಧರಿಸದೇ ಕಣಕ್ಕಿಳಿದಿದ್ದಾರೆ. ಇನಿಂಗ್ಸ್​ನ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಹ್ಯಾರಿಫ್ ರೌಫ್ ಬ್ಯಾಟಿಂಗ್​ ಬಂದಿದ್ದರು. ಆದರೆ ಕ್ರೀಸ್​ಗೆ ಆಗಮಿಸಿದ ರೌಫ್ ಕಾಲಿಗೆ ಪ್ಯಾಡ್​ ಧರಿಸಿರಲಿಲ್ಲ.

ಇದಕ್ಕೆ ಮುಖ್ಯ ಕಾರಣ ರೌಫ್ ನಾನ್ ಸ್ಟ್ರೈಕರ್​ನಲ್ಲಿ ಕಣಕ್ಕಿಳಿದಿರುವುದು. ಅಂದರೆ 19.5ನೇ ಓವರ್​ನಲ್ಲಿ ಸ್ಟೆಕೆಟೀ (0) ರನೌಟ್ ಆಗಿದ್ದರು. ಹೀಗಾಗಿ ಕೊನೆಯ ಎಸೆತವಿರುವಾಗ ಹ್ಯಾರಿಸ್ ರೌಫ್ ನಾನ್​ ಸ್ಟ್ರೈಕರ್​ನಲ್ಲಿ ಕಣಕ್ಕಿಳಿದರು. ಅತ್ತ ಕೊನೆಯ ಎಸೆತದಲ್ಲಿ ಬ್ಯಾಟಿಂಗ್ ಇರಲ್ಲ ಎಂದರಿತ ಹ್ಯಾರಿಸ್ ರೌಫ್ ಪ್ಯಾಡ್ ಧರಿಸದೇ ಬಂದು ಎಲ್ಲರ ಗಮನ ಸೆಳೆದರು. ಇದೀಗ ಪಾಕ್ ಕ್ರಿಕೆಟಿಗನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿಡ್ನಿ ಥಂಡರ್ (ಪ್ಲೇಯಿಂಗ್ XI): ಕ್ಯಾಮರೂನ್ ಬ್ಯಾಂಕ್ರಾಫ್ಟ್ (ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಜೇಸನ್ ಸಂಘ, ಆಲಿವರ್ ಡೇವಿಸ್, ಅಲೆಕ್ಸ್ ರಾಸ್, ಡೇನಿಯಲ್ ಸ್ಯಾಮ್ಸ್, ನಾಥನ್ ಮ್ಯಾಕ್ ಆಂಡ್ರ್ಯೂ, ಕ್ರಿಸ್ ಗ್ರೀನ್ (ನಾಯಕ), ಲಿಯಾಮ್ ಹ್ಯಾಚರ್, ಜಮಾನ್ ಖಾನ್, ತನ್ವೀರ್ ಸಂಘ.

ಇದನ್ನೂ ಓದಿ: IPL 2024: ಬಲಿಷ್ಠ ಪಡೆ…RCB ತಂಡದ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ

ಮೆಲ್ಬೋರ್ನ್ ಸ್ಟಾರ್ಸ್ (ಪ್ಲೇಯಿಂಗ್ XI): ಸ್ಯಾಮ್ ಹಾರ್ಪರ್ (ವಿಕೆಟ್ ಕೀಪರ್), ಥಾಮಸ್ ರೋಜರ್ಸ್, ಬ್ಯೂ ವೆಬ್‌ಸ್ಟರ್, ಗ್ಲೆನ್ ಮ್ಯಾಕ್ಸ್‌ವೆಲ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಹಿಲ್ಟನ್ ಕಾರ್ಟ್‌ರೈಟ್, ಜೊನಾಥನ್ ಮೆರ್ಲೋ, ಲಿಯಾಮ್ ಡಾಸನ್, ಉಸಾಮಾ ಮಿರ್, ಮಾರ್ಕ್ ಸ್ಟೆಕೆಟಿ, ಹ್ಯಾರಿಸ್ ರೌಫ್.