Kieron Pollard: ಇಂಗ್ಲೆಂಡ್ ತಂಡದ ಸಹಾಯಕ ಕೋಚ್​ ಆಗಿ ಕೀರನ್ ಪೊಲಾರ್ಡ್​ ಹೊಸ ಇನಿಂಗ್ಸ್​..!

Kieron Pollard: ವೆಸ್ಟ್ ಇಂಡೀಸ್ ಕ್ರಿಕೆಟಿಗ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್​ನ ಕಿಂಗ್ ಆಗಿ ಗುರುತಿಸಿಕೊಂಡಿದ್ದಾರೆ. ಹಲವು ಬಾರಿ ಬ್ಯಾಟಿಂಗ್-ಬೌಲಿಂಗ್-ಫೀಲ್ಡಿಂಗ್ ಮೂಲಕ ಪಂದ್ಯಗಳ ಫಲಿತಾಂಶವನ್ನೇ ಬದಲಿಸಿದ್ದರು. ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಒಟ್ಟು 637 ಟಿ20 ಪಂದ್ಯಗಳನ್ನಾಡಿರುವ ಪೊಲಾರ್ಡ್ 12390 ರನ್ ಕಲೆಹಾಕಿದ್ದಾರೆ.

Kieron Pollard: ಇಂಗ್ಲೆಂಡ್ ತಂಡದ ಸಹಾಯಕ ಕೋಚ್​ ಆಗಿ ಕೀರನ್ ಪೊಲಾರ್ಡ್​ ಹೊಸ ಇನಿಂಗ್ಸ್​..!
Kieron Pollard
Follow us
TV9 Web
| Updated By: ಝಾಹಿರ್ ಯೂಸುಫ್

Updated on:Dec 25, 2023 | 7:06 AM

ಜೂನ್ 4 ರಿಂದ ಟಿ20 ವಿಶ್ವಕಪ್ ಶುರುವಾಗಲಿದೆ. ಯುಎಸ್​ಎ ಹಾಗೂ ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಈ ಟೂರ್ನಿಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ. ಅದು ಕೂಡ ವಿಂಡೀಸ್​ನ ಸ್ಟಾರ್ ಆಲ್​ರೌಂಡರ್​ ಕೀರನ್ ಪೊಲಾರ್ಡ್​ಗೆ (Kieron Pollar) ಹೊಸ ಜವಾಬ್ದಾರಿವಹಿಸುವ ಮೂಲಕ ಎಂಬುದು ವಿಶೇಷ. ಹೌದು, ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿ  ಕೀರನ್ ಪೊಲಾರ್ಡ್​ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ವಿಶ್ವಕಪ್ ಟೂರ್ನಿಯುದ್ದಕ್ಕೂ ವಿಂಡೀಸ್​ ತಂಡದ ಮಾಜಿ ಆಟಗಾರ ಇಂಗ್ಲೆಂಡ್ ತಂಡದೊಂದಿಗೆ ರಣತಂತ್ರ ಹೆಣೆಯಲಿದ್ದಾರೆ.

2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಆಸೀಸ್ ಮಾಜಿ ಆಟಗಾರ ಮೈಕಲ್ ಹಸ್ಸಿ ಅವರನ್ನು ತಂಡದ ವಿಶೇಷ ಸಲಹೆಗಾರನಾಗಿ ನೇಮಿಸಿತ್ತು. ಅಲ್ಲದೆ ಆ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟಕ್ಕೇರಿತ್ತು.

ಈ ಬಾರಿ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಯುಎಸ್​ಎ ನಲ್ಲಿ ನಡೆಯಲಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ತಮ್ಮ ತಂಡದ ಸಹಾಯಕ ಕೋಚ್​ ಆಗಿ ಕೀರನ್ ಪೊಲಾರ್ಡ್ ಅವರನ್ನು ನೇಮಿಸಿದೆ.

ಇತ್ತ ಕೀರನ್ ಪೊಲಾರ್ಡ್ ಇನ್ನೂ ಕೂಡ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿಲ್ಲ. 36 ವರ್ಷದ ವಿಶ್ವದ ಹಲವು ಲೀಗ್​ಗಳಲ್ಲಿ ಆಡುತ್ತಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ನಡುವೆ ಇದೀಗ ಇಂಗ್ಲೆಂಡ್ ತಂಡದ ಪರ ಹೊಸ ಇನಿಂಗ್ಸ್ ಆರಂಭಿಸುವ ಅವಕಾಶ ಕೀರನ್ ಪೊಲಾರ್ಡ್​ಗೆ ಲಭಿಸಿದೆ.

ಅದರಂತೆ ಟಿ20 ವಿಶ್ವಕಪ್​ನಲ್ಲಿ ಕೆರಿಬಿಯನ್ ದ್ವೀಪಗಳಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಲು ಇಂಗ್ಲೆಂಡ್ ತಂಡವು ಕೀರನ್ ಪೊಲಾರ್ಡ್ ಅವರ ಸಲಹೆಗಳನ್ನು ಪಡೆಯಲಿದೆ. ಈ ಸಲಹೆಗಳೊಂದಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಟಿ20 ವಿಶ್ವಕಪ್​ ಅನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2024: ಬಲಿಷ್ಠ ಪಡೆ…RCB ತಂಡದ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ

ಟಿ20 ಕ್ರಿಕೆಟ್​ನ ಕಿಂಗ್ ಪೊಲಾರ್ಡ್​:

ವೆಸ್ಟ್ ಇಂಡೀಸ್ ಕ್ರಿಕೆಟಿಗ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್​ನ ಕಿಂಗ್ ಆಗಿ ಗುರುತಿಸಿಕೊಂಡಿದ್ದಾರೆ. ಹಲವು ಬಾರಿ ಬ್ಯಾಟಿಂಗ್-ಬೌಲಿಂಗ್-ಫೀಲ್ಡಿಂಗ್ ಮೂಲಕ ಪಂದ್ಯಗಳ ಫಲಿತಾಂಶವನ್ನೇ ಬದಲಿಸಿದ್ದರು. ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಒಟ್ಟು 637 ಟಿ20 ಪಂದ್ಯಗಳನ್ನಾಡಿರುವ ಪೊಲಾರ್ಡ್ 12390 ರನ್ ಕಲೆಹಾಕಿದ್ದಾರೆ. ಹೀಗಾಗಿಯೇ ಟಿ20 ವಿಶ್ವಕಪ್​ನಲ್ಲಿ ವಿಂಡೀಸ್ ಕ್ರಿಕೆಟಿಗನ ನೆರವು ಪಡೆಯಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ.

Published On - 8:09 am, Sun, 24 December 23