IND vs SA 1st Test: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್: ಸೆಂಚುರಿಯನ್ನಲ್ಲಿ ಟೀಮ್ ಇಂಡಿಯಾ ದಾಖಲೆ ಹೇಗಿದೆ?
Centurion Test, SA vs IND: ಭಾರತ ಹಾಗೂ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ನಡೆಯಲಿರುವ ಸೆಂಚುರಿಯನ್ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಭಾರತ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಎರಡು ಸೋಲು, ಒಂದು ಗೆಲುವು ಕಂಡಿದೆ. ಈ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ಸರಾಸರಿ ಸ್ಕೋರ್ 315 ರನ್ ಆಗಿದ್ದರೆ ಭಾರತದ್ದು 259 ರನ್ಸ್.
ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಟೆಸ್ಟ್ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 26 ರಿಂದ ಶುರುವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಉತ್ಸುಕರಾಗಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಹಳ ದಿನಗಳ ನಂತರ ಬಿಳಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆಫ್ರಿಕಾ ವಿರುದ್ಧದ ಭಾರತ ಟೆಸ್ಟ್ ತಂಡದಲ್ಲಿ ಹಲವು ಯುವ ಮುಖಗಳೂ ಇವೆ. ಜಸ್ಪ್ರೀತ್ ಬುಮ್ರಾ ಕೂಡ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಬುಮ್ರಾ ಬಹಳ ಸಮಯದಿಂದ ಟೆಸ್ಟ್ ಆಡಿಲ್ಲ. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಬಳಿಕ ಭಾರತ ಇದುವರೆಗೆ ಆಡಿರುವುದು ಕೇವಲ ಎರಡು ಪಂದ್ಯ ಮಾತ್ರ. ಹೀಗಾಗಿ ಇಂಡೋ-ಆಫ್ರಿಕಾ ಮೊದಲ ಟೆಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ.
NZ vs BAN: ಕೇವಲ 98 ರನ್ಗಳಿಗೆ ನ್ಯೂಝಿಲೆಂಡ್ ಆಲೌಟ್: ಬಾಂಗ್ಲಾಗೆ ಭರ್ಜರಿ ಜಯ
ಬೇಸರದ ಸಂಗತಿ ಎಂದರೆ ಭಾರತ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಆದರೆ, ಈ ಬಾರಿ ಭಾರತದ ಒಟ್ಟಾರೆ ಬೌಲಿಂಗ್ ಲೈನ್ ಅಪ್ ಉತ್ತಮವಾಗಿದೆ. ಬ್ಯಾಟಿಂಗ್ ವಿಷಯದಲ್ಲೂ ಬಹಳ ಮುಂದಿದೆ. ಮೊದಲ ಟೆಸ್ಟ್ ನಡೆಯಲಿರುವ ಸೆಂಚುರಿಯನ್ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಭಾರತ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಎರಡು ಸೋಲು, ಒಂದು ಗೆಲುವು ಕಂಡಿದೆ.
ಈ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ಸರಾಸರಿ ಸ್ಕೋರ್ 315 ರನ್ ಆಗಿದ್ದರೆ ಭಾರತದ್ದು 259 ರನ್ಸ್. ದಕ್ಷಿಣ ಆಫ್ರಿಕಾ ಸೆಂಚುರಿಯನ್ಸ್‌ನಲ್ಲಿ ಅತಿ ಹೆಚ್ಚು 621 ರನ್ ಗಳಿಸಿದ್ದು ಇತಿಹಾಸ. ಇದು 2020ರಲ್ಲಿ ಶ್ರೀಲಂಕಾ ವಿರುದ್ಧ ಬಂದಿದೆ. ಈ ಪಂದ್ಯದಲ್ಲಿ ಪ್ರೋಟೀಸ್ ತಂಡವು ಇನ್ನಿಂಗ್ಸ್ ಮತ್ತು 45 ರನ್‌ಗಳ ಜಯ ಸಾಧಿಸಿತ್ತು. ಈ ಮೈದಾನದಲ್ಲಿ ಭಾರತದ ಗರಿಷ್ಠ ಸ್ಕೋರ್ 2010 ರಲ್ಲಿ 459 ಆಗಿದೆ. ಹೀಗಿದ್ದರೂ ಭಾರತ ಇನ್ನಿಂಗ್ಸ್ ಹಾಗೂ 25 ರನ್‌ಗಳಿಂದ ಸೋಲನುಭವಿಸಿತ್ತು.
ಈ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ಕನಿಷ್ಠ ಸ್ಕೋರ್ 116 ಆಗಿದೆ. ಈ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಈ ಸ್ಕೋರ್ ಮಾಡಿದೆ. ಅಂತಿಮವಾಗಿ ದಕ್ಷಿಣ ಆಫ್ರಿಕಾ 87 ರನ್‌ಗಳ ಭರ್ಜರಿ ಜಯ ಸಾಧಿಸಿತು. ಮತ್ತು ಭಾರತದ ಕನಿಷ್ಠ ಸ್ಕೋರ್ 136 ಆಗಿದೆ. ಇದು ಬಂದಿರುವುದು 2010 ರಲ್ಲಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ