NZ vs BAN: ಕೇವಲ 98 ರನ್​ಗಳಿಗೆ ನ್ಯೂಝಿಲೆಂಡ್ ಆಲೌಟ್​: ಬಾಂಗ್ಲಾಗೆ ಭರ್ಜರಿ ಜಯ

New Zealand vs Bangladesh: ಕೇವಲ 12 ರನ್​ಗಳಿಸಿ ರಚಿನ್ ರವೀಂದ್ರ ತಂಝಿಮ್​ಗೆ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಹೆನ್ರಿ ನಿಕೋಲ್ಸ್ (1) ಕೂಡ ಕ್ಯಾಚಿತ್ತು ನಿರ್ಗಮಿಸಿದರು. ಇನ್ನು ನಾಯಕ ಟಾಮ್ ಲಾಥಮ್ 21 ರನ್​ಗಳಿಸಿ ಔಟಾದರು. ಅತ್ತ ಕ್ರೀಸ್​ ಕಚ್ಚಿ ನಿಂತಿದ್ದ ವಿಲ್ ಯಂಗ್ 43 ಎಸೆತಗಳಲ್ಲಿ 26 ರನ್​ ಬಾರಿಸಿ ಶೊರಿಫುಲ್ ಇಸ್ಲಾಂ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

NZ vs BAN: ಕೇವಲ 98 ರನ್​ಗಳಿಗೆ ನ್ಯೂಝಿಲೆಂಡ್ ಆಲೌಟ್​: ಬಾಂಗ್ಲಾಗೆ ಭರ್ಜರಿ ಜಯ
NZ vs BAN
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 23, 2023 | 7:48 AM

ನೇಪಿಯರ್​ನ ಮೆಕ್ಲೀನ್ ಪಾರ್ಕ್​ನಲ್ಲಿ ನಡೆದ ಆತಿಥೇಯ ನ್ಯೂಝಿಲೆಂಡ್​ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ್ (Bangladesh) ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ತಂಡ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್​ ಆರಂಭಿಸಿದ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ಕಿವೀಸ್ ಪಡೆಗೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು.

ಕೇವಲ 12 ರನ್​ಗಳಿಸಿ ರಚಿನ್ ರವೀಂದ್ರ ತಂಝಿಮ್​ಗೆ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಹೆನ್ರಿ ನಿಕೋಲ್ಸ್ (1) ಕೂಡ ಕ್ಯಾಚಿತ್ತು ನಿರ್ಗಮಿಸಿದರು. ಇನ್ನು ನಾಯಕ ಟಾಮ್ ಲಾಥಮ್ 21 ರನ್​ಗಳಿಸಿ ಔಟಾದರು. ಅತ್ತ ಕ್ರೀಸ್​ ಕಚ್ಚಿ ನಿಂತಿದ್ದ ವಿಲ್ ಯಂಗ್ 43 ಎಸೆತಗಳಲ್ಲಿ 26 ರನ್​ ಬಾರಿಸಿ ಶೊರಿಫುಲ್ ಇಸ್ಲಾಂ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮಾರ್ಕ್​ ಚಾಪ್ಮನ್ (2) ಬಂದ ವೇಗದಲ್ಲೇ ಪೆವಿಲಿಯನ್​ಗೆ ಹಿಂತಿರುಗಿದರು.

ಕೇವಲ 63 ರನ್​ಗಳಿಗೆ ಅಗ್ರ ಕ್ರಮಾಂಕದ 5 ವಿಕೆಟ್​ಗಳನ್ನು ಕಬಳಿಸಿದ ಬಾಂಗ್ಲಾದೇಶ್ ಬೌಲರ್​ಗಳು ಪಂದ್ಯ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ ಆ ಬಳಿಕ ಬಂದ ಬ್ಯಾಟರ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಈ ಮೂಲಕ 31.4 ಓವರ್​ಗಳಲ್ಲಿ ನ್ಯೂಝಿಲೆಂಡ್ ತಂಡವನ್ನು 98 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಬಾಂಗ್ಲಾದೇಶ್ ಯಶಸ್ವಿಯಾಯಿತು.

ಬಾಂಗ್ಲಾದೇಶ್ ತಂಡದ ಪರ ಶೊರಿಫುಲ್ ಇಸ್ಲಾಂ, ತಂಝಿಮ್ ಹಸನ್ ಹಾಗೂ ಸೌಮ್ಯ ಸರ್ಕಾರ್ ತಲಾ 3 ವಿಕೆಟ್​ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು.

ಇನ್ನು 99 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡದ ಪರ ಅನಾಮುಲ್ ಹಕ್ ಹಾಗೂ ನಜ್ಮುಲ್ ಹೊಸೈನ್ ಶಾಂಟೊ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 33 ಎಸೆತಗಳಲ್ಲಿ 7 ಫೋರ್​ಗಳೊಂದಿಗೆ 37 ರನ್​ ಬಾರಿಸಿದ ಅನಾಮುಲ್ ಔಟಾದರೆ, ಮತ್ತೊಂದೆಡೆ ಶಾಂಟೊ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ 15.2 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು ಬಾಂಗ್ಲಾದೇಶ್ ತಂಡವು ಗುರಿ ಮುಟ್ಟಿತು. ಈ ಸೋಲಿನ ಹೊರತಾಗಿಯೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಝಿಲೆಂಡ್ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ.

ನ್ಯೂಝಿಲೆಂಡ್ ಪ್ಲೇಯಿಂಗ್ ಇಲೆವೆನ್: ವಿಲ್ ಯಂಗ್ , ರಚಿನ್ ರವೀಂದ್ರ , ಹೆನ್ರಿ ನಿಕೋಲ್ಸ್ , ಟಾಮ್ ಲಾಥಮ್ (ನಾಯಕ) ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಮಾರ್ಕ್ ಚಾಪ್ಮನ್ , ಜೋಶ್ ಕ್ಲಾರ್ಕ್ಸನ್ , ಆಡಮ್ ಮಿಲ್ನೆ , ಆದಿತ್ಯ ಅಶೋಕ್ , ಜಾಕೋಬ್ ಡಫ್ಫಿ , ವಿಲಿಯಂ ಒರೂರ್ಕೆ.

ಇದನ್ನೂ ಓದಿ: Team India: ತನ್ನದೇ ದಾಖಲೆ ಮುರಿದು ಹೊಸ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

ಬಾಂಗ್ಲಾದೇಶ್ ಪ್ಲೇಯಿಂಗ್ ಇಲೆವೆನ್: ಸೌಮ್ಯ ಸರ್ಕಾರ್ , ಅನಾಮುಲ್ ಹಕ್ , ನಜ್ಮುಲ್ ಹೊಸೈನ್ ಶಾಂಟೋ (ನಾಯಕ) , ಲಿಟ್ಟನ್ ದಾಸ್ , ತೌಹಿದ್ ಹೃದಯೋಯ್ , ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್) , ಮೆಹಿದಿ ಹಸನ್ ಮಿರಾಜ್ , ತಂಝಿಮ್ ಹಸನ್ ಸಾಕಿಬ್ , ರಿಶಾದ್ ಹೊಸೈನ್ , ಶೊರಿಫುಲ್ ಇಸ್ಲಾಮ್ , ಮುಸ್ತಾಫ್ ಇಸ್ಲಾಮ್.

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ