IND vs SA: ತಿರುವನಂತಪುರಂಗೆ ಬಂದ ಟೀಮ್ ಇಂಡಿಯಾಕ್ಕೆ ಅವಮಾನ: ಅಭಿಮಾನಿಗಳು ಏನು ಮಾಡಿದ್ರು ನೋಡಿ

| Updated By: Vinay Bhat

Updated on: Sep 27, 2022 | 8:22 AM

India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕಾಗಿ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಭಾರತೀಯ ಆಟಗಾರರಿಗೆ ಅಲ್ಲಿನ ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಗಲಿಲ್ಲ.

IND vs SA: ತಿರುವನಂತಪುರಂಗೆ ಬಂದ ಟೀಮ್ ಇಂಡಿಯಾಕ್ಕೆ ಅವಮಾನ: ಅಭಿಮಾನಿಗಳು ಏನು ಮಾಡಿದ್ರು ನೋಡಿ
Team India
Follow us on

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿರುವ ಭಾರತ ತಂಡ ಆತ್ಮವಿಶ್ವಾಸದಲ್ಲಿದೆ. ಇದೇ ಛಲದಲ್ಲಿ ಮುಂದಿನ ಸರಣಿಗೆ ಸಜ್ಜಾಗುತ್ತಿದೆ. ಅಕ್ಟೋಬರ್ 28 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಟೀಮ್ ಇಂಡಿಯಾ (India vs South Africa) ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಇದಕ್ಕಾಗಿ ರೋಹಿತ್ ಪಡೆ ತಿರುವನಂತಪುರಂಗೆ ಬಂದಿಳಿದಿದೆ. ಕೇರಳ ಕ್ರಿಕೆಟ್ ಸಂಸ್ಥೆ ಭಾರತದ ಆಟಗಾರರಿಗೆ ಅದ್ಧೂರಿ ಸ್ವಾಗತ ನೀಡಿತು. ಆದರೆ, ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಟೀಮ್ ಇಂಡಿಯಾ (Team India) ಪ್ಲೇಯರ್ಸ್​ಗೆ ಭವ್ಯ ಸ್ವಾಗತ ಸಿಗಲಿಲ್ಲ. ಏರ್​ಪೋರ್ಟ್​ನಿಂದ ಬಂದು ಬಸ್​ಗೆ ಏರುವ ಸಂದರ್ಭ ಅಭಿಮಾನಿಗಳು ಸಂಜು.. ಸಂಜು..’ (Sanju Samson) ಎಂದು ಕೂಗಿದರು.

ಇದಕ್ಕೆ ಕಾರಣ ಸಂಜು ಸ್ಯಾಮ್ಸನ್ ಐಸಿಸಿ ಟಿ20 ವಿಶ್ವಕಪ್ ಸೇರಿದಂತೆ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಆಯ್ಕೆಯಾಗದಿರುವುದು. ಕೇರಳದ ವಿಕೆಟ್ ಕೀಪರ್, ಬ್ಯಾಟರ್ ಸ್ಯಾಮ್ಸನ್ ಅವರನ್ನು ಬಿಸಿಸಿಐ ಪುನಃ ಕಡೆಗಣಿಸಿದ್ದಕ್ಕೆ ಅವರ ಅಭಿಮಾನಿ ಭಾರತದ ಆಟಗಾರರು ಬಂದಾಗ ಸಂಜು, ಸಂಜು ಎಂದು ಕೂಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯವು ಅಕ್ಟೋಬರ್ 28ರಂದು ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇಲ್ಲಿ ಕೂಡ ಮೈದಾನದಲ್ಲಿ ನಾವು ಸಂಜು ಹೆಸರನ್ನು ಕೂಗುತ್ತೇವೆ ಎಂದು ಫ್ಯಾನ್ಸ್ ಹೇಳಿದ್ದಾರೆ.

ಇದನ್ನೂ ಓದಿ
BCCI : ಅ.18 ರಂದು ಬಿಸಿಸಿಐ ಚುನಾವಣೆ; ಜೈ ಶಾಗೆ ಅಧ್ಯಕ್ಷಗಿರಿ ಖಚಿತ..! ಐಸಿಸಿಯಲ್ಲಿ ಗಂಗೂಲಿ ದಾದಾಗಿರಿ?
IND vs SA: ಟೀಂ ಇಂಡಿಯಾದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್..! ಬದಲಿಯಾಗಿ ಬಂದವರು ಯಾರು?
IND vs AUS: ಭಾರತ- ಆಸೀಸ್ ಟಿ20 ಸರಣಿಯಲ್ಲಿ ಸೃಷ್ಟಿಯಾದ ಪ್ರಮುಖ 9 ದಾಖಲೆಗಳಿವು..!
55 ಎಸೆತಗಳಲ್ಲಿ 118 ರನ್ ಚಚ್ಚಿದ ಈ ಯುವ ಬ್ಯಾಟರ್​ಗೆ ಆಸೀಸ್ ಟಿ20 ವಿಶ್ವಕಪ್​ ತಂಡದಲ್ಲಿಲ್ಲ ಸ್ಥಾನ..!

 

ಇಂದಿನಿಂದ ಅಭ್ಯಾಸ ಶುರು:

ಸೋಮವಾರ ಸಂಜೆ ತಿರುವನಂತಪುರಂಗೆ ಬಂದ ಭಾರತ ಇಂದು ಅಭ್ಯಾಸಕ್ಕಾಗಿ ಗ್ರೀನ್‌ಫೀಲ್ಡ್ ಮೈದಾನವನ್ನು ತೆರಳಲಿದೆ. ಸಂಜೆ 5ರಿಂದ ರಾತ್ರಿ 8ರವರೆಗೆ ಭಾರತೀಯರಯ ಅಭ್ಯಾಸ ನಡೆಸಿದರೆ ದಕ್ಷಿಣ ಆಫ್ರಿಕಾ ತಂಡವು ಮಧ್ಯಾಹ್ನ 1.00 ರಿಂದ 4.00 ರವರೆಗೆ ಮೈದಾನದಲ್ಲಿ ಬೆವರಿಳಿಸಲಿದೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ತಿಳಿಸಿದೆ. 1,500 ರೂ. ಗಳ ಕಡಿಮೆ ಬೆಲೆಯ ಟಿಕೆಟ್‌ನ ಹೊರತಾಗಿಯೂ, ಇದೀಗ 75 ಪ್ರತಿಶತದಷ್ಟು ಟಿಕೆಟ್‌ಗಳು ಮಾರಾಟವಾಗಿರುವುದರಿಂದ ಇದು ಪೂರ್ಣ ಸಾಮರ್ಥ್ಯದ ಪ್ರೇಕ್ಷಕರ ಪಂದ್ಯವಾಗಲಿದೆ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಹೇಳಿಕೆ ನೀಡಿದೆ.

ಶ್ರೇಯಸ್‌ ಅಯ್ಯರ್‌, ಶಾಬಾಜ್‌ ಅಹ್ಮದ್‌ ಆಯ್ಕೆ:

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಶ್ರೇಯಸ್‌ ಅಯ್ಯರ್‌ ಮತ್ತು ಶಾಬಾಜ್‌ ಅಹ್ಮದ್‌ ಬದಲಿ ಆಟಗಾರರಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಗಾಯಾಳಾಗಿರುವ ಹಾರ್ದಿಕ್‌ ಪಾಂಡ್ಯ, ದೀಪ್‌ ಹೂಡಾ ಸ್ಥಾನವನ್ನು ಇವರು ತುಂಬಲಿದ್ದಾರೆ. ಅಂತೆಯೆ ಕೋವಿಡ್​ನಿಂದ ಗುಣಮುಖರಾಗದ ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಜೊತೆ ತಿರುವನಂತಪುರಕ್ಕೆ ಹೋಗಿಲ್ಲ. ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಶಮಿ ಸ್ಥಾನಕ್ಕೆ ಬಂದಿದ್ದ ಉಮೇಶ್ ಯಾದವ್ ತಂಡದೊಂದಿಗೆ ಕೇರಳ ತಲುಪಿದ್ದಾರೆ. ಉಮ್ರಾನ್ ಮಲಿಕ್ ಅವರನ್ನು ತಂಡದಲ್ಲಿ ಸ್ಟ್ಯಾಂಡ್‌ ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.