ಇಂಗ್ಲೆಂಡ್​ನಲ್ಲಿ ಕಳ್ಳರ ಕಾಟ: ರೂಮ್​​ನಲ್ಲೇ ಟೀಂ ಇಂಡಿಯಾ ಆಟಗಾರ್ತಿಯ ಹಣ-ಒಡವೆ ಕದ್ದ ಖದೀಮರು

ನಮ್ಮ ತಂಡ ತಂಗಿದ್ದ ಲಂಡನ್‌ನ ಮ್ಯಾರಿಯಟ್ ಹೋಟೆಲ್‌ನಲ್ಲಿ ಕಳ್ಳತನ ನಡೆದಿದ್ದು ಇದು ನಮಗೆ ಆಘಾತವನ್ನುಂಟು ಮಾಡಿದೆ. ಯಾರೋ ನನ್ನ ಖಾಸಗಿ ಕೋಣೆಗೆ ನುಗ್ಗಿ ನನ್ನ ಬ್ಯಾಗ್, ನಗದು, ಕಾರ್ಡ್‌, ವಾಚ್‌ಗಳು ಮತ್ತು ಆಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ಭಾಟಿಯಾ ಟ್ವೀಟ್ ಮಾಡಿದ್ದಾರೆ.

ಇಂಗ್ಲೆಂಡ್​ನಲ್ಲಿ ಕಳ್ಳರ ಕಾಟ: ರೂಮ್​​ನಲ್ಲೇ ಟೀಂ ಇಂಡಿಯಾ ಆಟಗಾರ್ತಿಯ ಹಣ-ಒಡವೆ ಕದ್ದ ಖದೀಮರು
ಭಾರತ ಮಹಿಳಾ ಕ್ರಿಕೆಟ್ ತಂಡ
TV9kannada Web Team

| Edited By: pruthvi Shankar

Sep 26, 2022 | 7:09 PM

ಇಂಗ್ಲೆಂಡ್‌ನಲ್ಲಿ ಐತಿಹಾಸಿಕ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರ್ತಿಯರಿಗೆ (India women’s team) ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ ಎಂಬ ಮಾಹಿತಿ ಈಗಷ್ಟೇ ಹೊರಬಿದ್ದಿದೆ. ವಾಸ್ತವವಾಗಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡ ತಂಗಿದ್ದ ಹೋಟೆಲ್​ನ ರೂಂನಲ್ಲಿ ಕಳ್ಳತನ ನಡೆದಿದೆ. ತಮ್ಮ ಹೋಟೆಲ್ ಕೋಣೆಯಲ್ಲಿ ಕಳ್ಳತನವಾಗಿದೆ ಎಂದು ಟೀಂ ಇಂಡಿಯಾ ಮಹಿಳಾ ಆಟಗಾರ್ತಿ ತಾನಿಯಾ ಭಾಟಿಯಾ (Taniya Bhatia) ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾಟಿಯಾ ಟ್ವೀಟ್ ಮಾಡಿದ್ದು, ಕಳ್ಳರು ತಮ್ಮ ಕೊಠಡಿಯಿಂದ ನಗದು, ಕಾರ್ಡ್‌, ಆಭರಣ ಮತ್ತು ವಾಚ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಬರದುಕೊಂಡಿದ್ದಾರೆ. ಅಲ್ಲದೆ ತಾನಿಯಾ ಭಾಟಿಯಾ ಅವರು ಟ್ವೀಟ್ ಮಾಡುವ ಮೂಲಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ನೇರವಾಗಿ ಪ್ರಶ್ನೆಗಳನ್ನು ಮಾಡಿದ್ದಾರೆ. ಏಕದಿನ ಹಾಗೂ ಟಿ20 ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಲಂಡನ್‌ನ ಮ್ಯಾರಿಯಟ್ ಹೋಟೆಲ್‌ನಲ್ಲಿ ವಾಸ್ಥವ್ಯ ಹೂಡಿತ್ತು.

ಕೊಠಡಿಯಲ್ಲಿ ಕಳ್ಳತನವಾದ ನಂತರ ತಾನಿಯಾ ಭಾಟಿಯಾ ಟ್ವೀಟ್ ಮಾಡಿ, ನಮ್ಮ ತಂಡ ತಂಗಿದ್ದ ಲಂಡನ್‌ನ ಮ್ಯಾರಿಯಟ್ ಹೋಟೆಲ್‌ನಲ್ಲಿ ಕಳ್ಳತನ ನಡೆದಿದ್ದು ಇದು ನಮಗೆ ಆಘಾತವನ್ನುಂಟು ಮಾಡಿದೆ. ಯಾರೋ ನನ್ನ ಖಾಸಗಿ ಕೋಣೆಗೆ ನುಗ್ಗಿ ನನ್ನ ಬ್ಯಾಗ್, ನಗದು, ಕಾರ್ಡ್‌, ವಾಚ್‌ಗಳು ಮತ್ತು ಆಭರಣಗಳನ್ನು ಕದ್ದೊಯ್ದಿದ್ದಾರೆ. ಮ್ಯಾರಿಯಟ್ ಹೋಟೆಲ್ ಅಸುರಕ್ಷಿತವಾಗಿದೆ. ಈ ಮಾಹಿತಿ ತಿಳಿದ ತಕ್ಷಣ ಇಸಿಬಿ ಈ ಬಗ್ಗೆ ಶೀಘ್ರವಾಗಿ ತನಿಖೆ ನಡೆಸಿ, ನಾನು ಕಳೆದುಕೊಂಡ ವಸ್ತುಗಳನ್ನು ಪುನಃ ನನಗೆ ಸಿಗುವಂತೆ ಮಾಡುತ್ತದೆ ಎಂದು ನಾನು ಆಶಿಸುತ್ತೇನೆ. ಇಸಿಬಿ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿರುವ ಹೋಟೆಲ್‌ನಲ್ಲಿ ಇಂತಹ ಕಳಪೆ ಭದ್ರತೆ ಇದೆ ಎಂದರೆ ನಂಬಲಾಸಾಧ್ಯವಾಗಿದೆ. ಹೀಗಾಗಿ ಇಸಿಬಿ ಈ ವಿಷಯದ ಬಗ್ಗೆ ಗಮನ ಹರಿಸುತ್ತಾರೆ ಎಂದು ಭಾವಿಸುತ್ತೇವೆ ಎಂದು ಭಾಟಿಯಾ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ 3-0 ಅಂತರದಿಂದ ಅವರದ್ದೇ ನೆಲದಲ್ಲಿ ಮಣಿಸಿತ್ತು. ತಾನಿಯಾ ಭಾಟಿಯಾಗೆ ODI ಸರಣಿಯಲ್ಲಿ ಆಡಲು ಅವಕಾಶ ಸಿಗಲಿಲ್ಲ ಆದರೆ ಅವರು ತಂಡದ ಭಾಗವಾಗಿದ್ದರು. ಹೀಗಾಗಿ ಅವರು ತಂಗಿದ್ದ ಕೋಣೆಯಲ್ಲಿ ಕಳ್ಳತನ ನಡೆದಿರುವುದು ಎಲ್ಲರೂ ಆಘಾತಕ್ಕೊಳಗಾಗುವಂತೆ ಮಾಡಿದೆ. ಜೊತೆಗೆ ಈ ಘಟನೆಯಿಂದ ECB ಯ ಖ್ಯಾತಿಗೂ ಧಕ್ಕೆಯಾಗಿದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada