55 ಎಸೆತಗಳಲ್ಲಿ 118 ರನ್ ಚಚ್ಚಿದ ಈ ಯುವ ಬ್ಯಾಟರ್​ಗೆ ಆಸೀಸ್ ಟಿ20 ವಿಶ್ವಕಪ್​ ತಂಡದಲ್ಲಿಲ್ಲ ಸ್ಥಾನ..!

IND Vs AUS: ಟಿ20 ಸರಣಿಯ 3 ಪಂದ್ಯಗಳಲ್ಲಿ ಕ್ಯಾಮರೂನ್ ಗ್ರೀನ್ 55 ಎಸೆತಗಳಲ್ಲಿ 118 ರನ್ ಗಳಿಸಿದರು. ಈ ಸರಣಿಯಲ್ಲಿ 2 ಅರ್ಧಶತಕಗಳನ್ನು ಬಾರಿಸಿದ ಗ್ರೀನ್, 214.54 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದರು.

55 ಎಸೆತಗಳಲ್ಲಿ 118 ರನ್ ಚಚ್ಚಿದ ಈ ಯುವ ಬ್ಯಾಟರ್​ಗೆ ಆಸೀಸ್ ಟಿ20 ವಿಶ್ವಕಪ್​ ತಂಡದಲ್ಲಿಲ್ಲ ಸ್ಥಾನ..!
Cameron Green
TV9kannada Web Team

| Edited By: pruthvi Shankar

Sep 26, 2022 | 8:01 PM

ಹೈದರಾಬಾದ್​ನಲ್ಲಿ ನಡೆದ ಅಂತಿಮ ಟಿ20 ಪಂದ್ಯದ ಸೋಲಿನೊಂದಿಗೆ ಆಸೀಸ್ ತಂಡ ಸಪ್ಪೆಮೊರೆ ಹಾಕಿಕೊಂಡು ತನ್ನ ದೇಶದತ್ತ ಮುಖಮಾಡಿದೆ. ಕೊನೆಯ ಟಿ20 ಪಂದ್ಯದಲ್ಲಿ ಕಾಂಗರೂ ತಂಡ 186 ರನ್ ಗಳಿಸಿಯೂ ಸೋಲನುಭವಿಸಿತ್ತು. ಆಸೀಸ್ ನೀಡಿದ ಈ ಬೃಹತ್ ಟಾರ್ಗೆಟನ್ನು ಟೀಂ ಇಂಡಿಯಾ (Team India) ಕೊನೆಯ ಓವರ್​ನಲ್ಲಿ ಸಾಧಿಸಿತು. ಆಸ್ಟ್ರೇಲಿಯ ಟಿ20 ಸರಣಿಯಲ್ಲಿ ಸೋತಿರಬಹುದು. ಆದರೆ ಏಕಾಂಗಿಯನ್ನು ತಂಡವನ್ನು ಗೆಲ್ಲಿಸಬಲ್ಲ ಯುವ ಆಟಗಾರನೊಬ್ಬ ಆಸೀಸ್ ತಂಡಕ್ಕೆ ಸಿಕ್ಕಿದ್ದಾನೆ. ಟೀಂ ಇಂಡಿಯಾದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಕ್ಯಾಮರೂನ್ ಗ್ರೀನ್ (Cameron Green) ತನ್ನ ಮೊದಲ T20I ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಆಸೀಸ್ ತಂಡಕ್ಕೆ ಒಬ್ಬ ಯುವ ಆಕ್ರಮಣಕಾರಿ ಬ್ಯಾಟರ್ ಕೂಡ ಸಿಕ್ಕಿದ್ದಾನೆ.

ಟಿ20 ಸರಣಿಯ 3 ಪಂದ್ಯಗಳಲ್ಲಿ ಕ್ಯಾಮರೂನ್ ಗ್ರೀನ್ 55 ಎಸೆತಗಳಲ್ಲಿ 118 ರನ್ ಗಳಿಸಿದರು. ಈ ಸರಣಿಯಲ್ಲಿ 2 ಅರ್ಧಶತಕಗಳನ್ನು ಬಾರಿಸಿದ ಗ್ರೀನ್, 214.54 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದರು. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗ್ರೀನ್ 64 ರನ್ ಸಿಡಿಸಿದರೆ, ಹೈದರಾಬಾದ್‌ನಲ್ಲಿ 52 ರನ್​ಗಳ ಅಬ್ಬರದ ಇನ್ನಿಂಗ್ಸ್‌ ಆಡಿದರು. ಮೊಹಾಲಿಯಲ್ಲಿ 30 ಎಸೆತಗಳಲ್ಲಿ 61 ರನ್ ಗಳಿಸಿದ್ದ ಗ್ರೀನ್, ಈ ಇನ್ನಿಂಗ್ಸ್​ನಲ್ಲಿ 4 ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಬಾರಿಸಿದ್ದರು. ಹಾಗೆಯೇ 3ನೇ ಟಿ20 ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ, ತಂಡಕ್ಕೆ ಉತ್ತಮ ಆರಂಭ ನೀಡಿದ ಗ್ರೀನ್, ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಗ್ರೀನ್ ಅದ್ಭುತ ದಾಖಲೆ

ಈ ಮೂಲಕ ಭಾರತದ ವಿರುದ್ಧ ಅತಿವೇಗದ ಅರ್ಧಶತಕ ಸಿಡಿಸಿದ ದಾಖಲೆಯನ್ನು ಕ್ಯಾಮೆರಾನ್ ಗ್ರೀನ್ ಬರೆದಿದ್ದಾರೆ. ಈ ಮೊದಲು ಭಾರತದ ವಿರುದ್ಧ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಜಾನ್ಸನ್ ಚಾರ್ಲ್ಸ್ ಹೆಸರಿನಲ್ಲಿ ಈ ದಾಖಲೆ ಇತ್ತು.

ಆಸ್ಟ್ರೇಲಿಯಾಕ್ಕೆ ಸಿಕ್ಕ ಬಿಗ್ ಹಿಟ್ಟರ್

ಗ್ರೀನ್ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟಿಗನಾಗಿ ಕಾಣಿಸಿಕೊಂಡಿದ್ದಾರೆ. ರಿಕಿ ಪಾಂಟಿಂಗ್ ಅವರ ಶಿಫಾರಸಿನ ನಂತರವೇ ಈ ಆಟಗಾರ ಆಸ್ಟ್ರೇಲಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. T20 ಸರಣಿಯ ಬಗ್ಗೆ ಮಾತನಾಡುವುದಾದರೆ, ವಾರ್ನರ್ ಅನುಪಸ್ಥಿತಿಯಲ್ಲಿ, ಆಸ್ಟ್ರೇಲಿಯಾ ಕ್ರಿಸ್ ಗ್ರೀನ್‌ಗೆ ಚೊಚ್ಚಲ ಅವಕಾಶವನ್ನು ನೀಡಿತು. ಗ್ರೀನ್ ಭಾರತದ ಅತ್ಯುತ್ತಮ ಬೌಲರ್‌ಗಳನ್ನು ಎದುರಿಸಿ ಪವರ್‌ಪ್ಲೇಯಲ್ಲಿ ಅತ್ಯಧಿಕ ರನ್ ಕಲೆಹಾಕಿದರು. ಸ್ಪಿನ್ನರ್‌ಗಳಾಗಲಿ ಅಥವಾ ವೇಗದ ಬೌಲರ್‌ಗಳಾಗಲಿ ಗ್ರೀನ್ ಯಾರೊಂದಿಗೂ ಯಾವುದೇ ಸಮಸ್ಯೆ ಎದುರಿಸಲಿಲ್ಲ. ಆಸ್ಟ್ರೇಲಿಯಾ ತಂಡದ ಈ ಆಲ್‌ರೌಂಡರ್‌ನ ಪ್ರದರ್ಶನವನ್ನು ಭಾರತೀಯ ದಂತಕಥೆಗಳು ಸಹ ಮನಗಂಡಿದ್ದಾರೆ. ಅಶ್ವಿನ್ ಮತ್ತು ರವಿಶಾಸ್ತ್ರಿ ಈ ಆಟಗಾರನನ್ನು ವಿಶೇಷ ಎಂದು ಬಣ್ಣಿಸಿ, ಮುಂದಿನ ಐಪಿಎಲ್ ಬಿಡ್‌ನಲ್ಲಿ ಈ ಆಟಗಾರ ದೊಡ್ಡ ಮೊತ್ತವನ್ನು ಪಡೆಯಬಹುದು ಎಂದಿದ್ದಾರೆ. ಜೊತೆಗೆ ಟಿ20 ವಿಶ್ವಕಪ್ ತಂಡದಲ್ಲಿ ಗ್ರೀನ್​ಗೆ ಸ್ಥಾನ ಸಿಗಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈಗಾಗಲೇ ಟಿ20 ವಿಶ್ವಕಪ್​ಗೆ ಪ್ರಕಟಗೊಂಡಿರುವ ಆಸೀಸ್ ತಂಡದಲ್ಲಿ ಗ್ರೀನ್​ಗೆ ಅವಕಾಶ ಸಿಕ್ಕಿಲ್ಲ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada