IND vs SA 5th T20 Match Preview: ಬೆಂಗಳೂರಿನಲ್ಲಿ ಸರಣಿ ನಿರ್ಧಾರ; ಭಾರತಕ್ಕೆ ಇತಿಹಾಸ ಸೃಷ್ಟಿಸುವ ಅವಕಾಶ

| Updated By: ಪೃಥ್ವಿಶಂಕರ

Updated on: Jun 18, 2022 | 5:52 PM

India vs South Africa, 5th T20 Match Preview: ಭಾನುವಾರ ನಡೆಯಲಿರುವ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಐದನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತದ ಯುವ ತಂಡ ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಗೆಲುವು ದಾಖಲಿಸುವ ಉದ್ದೇಶದಿಂದ ತಂಡವಾಗಿ ಉತ್ತಮ ಪ್ರದರ್ಶನ ತೋರಲಿದೆ.

IND vs SA 5th T20 Match Preview: ಬೆಂಗಳೂರಿನಲ್ಲಿ ಸರಣಿ ನಿರ್ಧಾರ; ಭಾರತಕ್ಕೆ ಇತಿಹಾಸ ಸೃಷ್ಟಿಸುವ ಅವಕಾಶ
ಟೀಂ ಇಂಡಿಯಾ
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa ) ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿ (five-match T20 series) ಇದೀಗ ರೋಚಕ ತಿರುವನ್ನು ತಲುಪಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿದೆ. ಭಾನುವಾರ ನಡೆಯಲಿರುವ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಐದನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತದ ಯುವ ತಂಡ ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಗೆಲುವು ದಾಖಲಿಸುವ ಉದ್ದೇಶದಿಂದ ತಂಡವಾಗಿ ಉತ್ತಮ ಪ್ರದರ್ಶನ ತೋರಲಿದೆ. ಭಾರತ ಎಂಟು ದಿನಗಳಲ್ಲಿ ನಾಲ್ಕು ಪಂದ್ಯಗಳನ್ನು ಆಡಿದೆ ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರ ಸ್ಥಿರತೆಯ ತತ್ವದ ಪ್ರಕಾರ ಆಡುವ XI ನಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಲಾಗಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಸೋತ ಭಾರತ ಮೂರನೇ ಪಂದ್ಯವನ್ನು 48 ರನ್‌ಗಳಿಂದ ಮತ್ತು ನಾಲ್ಕನೇ ಪಂದ್ಯವನ್ನು 82 ರನ್‌ಗಳಿಂದ ಗೆದ್ದುಕೊಂಡಿತು. ಭಾರತ ತಂಡ ಇದುವರೆಗೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಪಕ್ಷೀಯ T20I ಸರಣಿಯನ್ನು ಗೆದ್ದಿಲ್ಲ.

ತೆಂಬ ಬವುಮಾ ಆಡುವುದು ಕಷ್ಟ

ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ವಿಜಯದ ವಾಸ್ತುಶಿಲ್ಪಿ ಪಾತ್ರವನ್ನು ನಿರ್ವಹಿಸಿದರೆ, ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ಕೂಡ ನಿರೀಕ್ಷೆಯಂತೆ ಪ್ರದರ್ಶನ ನೀಡಿದರು. ಯುಜುವೇಂದ್ರ ಚಹಾಲ್ ಅವರು ತಮ್ಮ ಐಪಿಎಲ್ ತವರು ಮೈದಾನದಲ್ಲಿ ನಡೆಯುವ ಈ ನಿರ್ಣಾಯಕ ಪಂದ್ಯದಲ್ಲಿ ಖಂಡಿತವಾಗಿಯೂ ಏನಾದರೂ ವಿಶೇಷ ಸಾಧನೆ ಮಾಡಲು ಬಯಸುತ್ತಾರೆ. ಎರಡೂ ತಂಡಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿಳಿದಾಗ ಮೊದಲೆರಡು ಪಂದ್ಯಗಳಲ್ಲಿ ಸುಸ್ತಾಗಿ ಕಾಣುತ್ತಿರುವ ಭಾರತ ತಂಡ ಗೆಲುವಿಗೆ ಪ್ರಬಲ ಪೈಪೋಟಿ ನೀಡಲಿದೆ. ತೆಂಬಾ ಬವುಮಾ ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ದಕ್ಷಿಣ ಆಫ್ರಿಕಾ ಅವರನ್ನು ಕಳೆದುಕೊಳ್ಳುತ್ತದೆ. ಕಳೆದ ಎರಡು ಪಂದ್ಯಗಳಲ್ಲಿ, ಅವರ ಬ್ಯಾಟಿಂಗ್ ಸಹ ದುರ್ಬಲವಾಗಿ ಕಂಡುಬಂದಿದೆ. ಈ ಕಾರಣದಿಂದಾಗಿ ಭಾರತದ ದಾಳಿಯು ಸಾಕಷ್ಟು ತೀಕ್ಷ್ಣವಾಗಿ ಕಾಣಲು ಪ್ರಾರಂಭಿಸಿದೆ.

ಇದನ್ನೂ ಓದಿ
Dinesh Karthik: 16 ವರ್ಷ, 36 ಪಂದ್ಯ.. 3ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ; ಇದು ದಿನೇಶ್ ಕಾರ್ತಿಕ್ ಟಿ20 ಕರಿಯರ್
IND vs SA 5th T20 Match Live Streaming: ಹರಿಣಗಳನ್ನು ಮಣಿಸಿ ಸರಣಿ ಗೆಲ್ಲುತ್ತಾ ಭಾರತ? ಪಂದ್ಯದ ಬಗ್ಗೆ ಒಂದಿಷ್ಟು ಮಾಹಿತಿ
IND vs SA: ಕಾರ್ತಿಕ್- ಹಾರ್ದಿಕ್ ಅಬ್ಬರ.. ಅವೇಶ್- ಹರ್ಷಲ್ ಮಾರಕ ದಾಳಿ; ಭಾರತಕ್ಕೆ 82 ರನ್ ಜಯ

ಇದನ್ನೂ ಓದಿ:IND VS SA: ಸೋಲುವಾಗಲೇ ತಂಡ ಬದಲಿಸದ ಭಾರತ ಈಗ ಬದಲಿಸುತ್ತಾ? ಹೈವೋಲ್ಟೇಜ್​ ಪಂದ್ಯಕ್ಕೆ ಭಾರತದ ಸಂಭಾವ್ಯ XI

ಸುಧಾರಿಸಿದ ಪಂತ್ ನಾಯಕತ್ವ

ಈ ಸರಣಿಯಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡಿಲ್ಲ ಆದರೆ ಎರಡು ಪಂದ್ಯಗಳಲ್ಲಿ ಸೋತ ನಂತರ ಫಾರ್ಮ್​ಗೆ ಮರಳಿರುವುದು ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಯುವ ನಾಯಕ ರಿಷಭ್ ಪಂತ್ ಐಪಿಎಲ್ ನಂತರ ರೂರ್ಕಿಯಲ್ಲಿರುವ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯಲು ಇಷ್ಟಪಡುತ್ತಿದ್ದರು ಆದರೆ ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅವರು ತಂಡದಲ್ಲಿ ಸ್ಟಾರ್ ಪವರ್ ಅನ್ನು ಉಳಿಸಿಕೊಳ್ಳುವ ಕಸರತ್ತಿನಲ್ಲಿ ಆಡಬೇಕಾಯಿತು. ನಾಯಕತ್ವದಲ್ಲಿ ಪಂತ್ ಯಾವುದೇ ಅದ್ಭುತಗಳನ್ನು ಮಾಡಲು ಸಾಧ್ಯವಾಗಲಿಲ್ಲ, ಹೀಗಾಗಿ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿತು. ಭಾರತ ಈ ಸರಣಿಯನ್ನು ಗೆದ್ದರೆ, ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಜೊತೆಗೆ ಪಂತ್ ಕೂಡ ನಾಯಕತ್ವದ ತಂಡದ ಭಾಗವಾಗಲಿದ್ದಾರೆ. ಏಕೆಂದರೆ 2023 ರ ವಿಶ್ವಕಪ್ ನಂತರ ಭಾರತ ತಂಡವು ಮತ್ತೆ ಬದಲಾವಣೆಯ ಹಂತವನ್ನು ಎದುರಿಸಲಿದೆ.

ತಂಡದಲ್ಲಿ ಬದಲಾವಣೆಗಳಿರಬಹುದು

ದ್ರಾವಿಡ್ ಟೀಂ ಇಂಡಿಯಾದ ಟಾಪ್​3 ಬ್ಯಾಟಿಂಗ್ ಆರ್ಡರ್​ನಲ್ಲಿ ಬದಲಾವಣೆಯ ಸಾಧ್ಯತೆಯನ್ನು ಪರಿಗಣಿಸಬಹುದು. ಪ್ರಸ್ತುತ ತಂತ್ರದೊಂದಿಗೆ ಉತ್ತಮ ಪಿಚ್‌ಗಳಲ್ಲಿ ಉತ್ತಮ ದಾಳಿಯ ಎದುರು ರುತುರಾಜ್ ಗಾಯಕ್ವಾಡ್ ದುರ್ಬಲರಾಗಿದ್ದಾರೆ. ಇಶಾನ್ ಕಿಶನ್ ಸರಣಿಯಲ್ಲಿ ಸಾಕಷ್ಟು ರನ್ ಗಳಿಸಿರಬಹುದು ಆದರೆ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿನ ಹೆಚ್ಚುವರಿ ವೇಗ ಮತ್ತು ಬೌನ್ಸ್ ಅವರಿಗೆ ಸಮಸ್ಯೆಯಾಗಬಹುದು. ಶ್ರೇಯಸ್ ಅಯ್ಯರ್ ಅವರು ಇಡೀ ಸರಣಿಯನ್ನು ಆಡಿದರೂ ಈ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತ ತಂಡ ಈಗ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಆಡಿದರೆ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಸ್ಥಾನಕ್ಕೆ ಬರಲಿದ್ದಾರೆ.

ಸ್ಪಿನ್ ಬೌಲರ್‌ಗಳು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ

ಐಸಿಸಿ ಟೂರ್ನಿಗಳ ವರ್ಷದಲ್ಲಿ ಕಾರ್ತಿಕ್ ಯಾವಾಗಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಐರ್ಲೆಂಡ್‌ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳಲ್ಲಿದ್ದಾರೆ. ಟಿ 20 ವಿಶ್ವಕಪ್‌ನಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಪಾತ್ರವನ್ನು ಅವರಿಗೆ ವಹಿಸಿದರೆ, ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ ಯಾರೂ ಆಶ್ಚರ್ಯಪಡಬೇಕಾಗಿಲ್ಲ. ಬೌಲರ್​ಗಳ ಪೈಕಿ ಭುವನೇಶ್ವರ್ ಕುಮಾರ್ ಹೊಸ ಚೆಂಡಿನೊಂದಿಗೆ ಸ್ವಿಂಗ್ ಮಾಡುತ್ತಿದ್ದಾರೆ. ಅವೇಶ್ ಖಾನ್ ಉತ್ತಮ ಬೌನ್ಸರ್‌ಗಳ ಮೂಲಕ ಬೌಲಿಂಗ್ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ನಲ್ಲಿ ಸ್ಥಾನಕ್ಕಾಗಿ ಪ್ರಬಲ ಸ್ಪರ್ಧಿಯಾಗಿದ್ದಾರೆ. ಈ ಸರಣಿಯಲ್ಲಿ ಸ್ಪಿನ್ನರ್‌ಗಳು ಯಾವುದೇ ಸಾಧನೆ ಮಾಡಿಲ್ಲ. ಅಕ್ಷರ್ ಪಟೇಲ್ ಅವರು ಮಿಂಚಲು ಸಾಧ್ಯವಾಗಲಿಲ್ಲ ಮತ್ತು ಚಹಾಲ್ ಕೂಡ ಸ್ಥಿರವಾಗಿ ಉತ್ತಮವಾಗಿ ಆಡಲು ಸಾಧ್ಯವಾಗಲಿಲ್ಲ.

Published On - 5:52 pm, Sat, 18 June 22