IND VS SA: ಸೋಲುವಾಗಲೇ ತಂಡ ಬದಲಿಸದ ಭಾರತ ಈಗ ಬದಲಿಸುತ್ತಾ? ಹೈವೋಲ್ಟೇಜ್​ ಪಂದ್ಯಕ್ಕೆ ಭಾರತದ ಸಂಭಾವ್ಯ XI

IND VS SA: ಪಂತ್ ಫೈನಲ್​ನಲ್ಲಿ ಅಯ್ಯರ್ ರೂಪದಲ್ಲಿ ಬದಲಾವಣೆ ಮಾಡುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ಐಪಿಎಲ್ 2022 ರಲ್ಲಿ ಅದ್ಭುತ ಆಟ ಪ್ರದರ್ಶಿಸಿದ ದೀಪಕ್ ಹೂಡಾ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

IND VS SA: ಸೋಲುವಾಗಲೇ ತಂಡ ಬದಲಿಸದ ಭಾರತ ಈಗ ಬದಲಿಸುತ್ತಾ? ಹೈವೋಲ್ಟೇಜ್​ ಪಂದ್ಯಕ್ಕೆ ಭಾರತದ ಸಂಭಾವ್ಯ XI
IND VS SA
Follow us
TV9 Web
| Updated By: ಪೃಥ್ವಿಶಂಕರ

Updated on:Jun 18, 2022 | 4:00 PM

5 ಪಂದ್ಯಗಳ ಟಿ20 ಸರಣಿ (T20 series)ಯ ಅಂತಿಮ ಪಂದ್ಯ ಭಾನುವಾರ ಬೆಂಗಳೂರಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಎರಡೂ ತಂಡಗಳು 2-2ರಲ್ಲಿ ಸರಣಿ ಸಮಬಲ ಸಾಧಿಸಿವೆ. ಹೀಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಕೊನೆಯ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವತ್ತ ಕಣ್ಣಿಟ್ಟಿವೆ. ಸರಣಿಯ ಮೊದಲ ಎರಡು ಪಂದ್ಯಗಳನ್ನು ಪ್ರವಾಸಿ ತಂಡ ಗೆದ್ದುಕೊಂಡಿತ್ತು, ಆದರೆ ಆ ನಂತರ ಭಾರತ ತಂಡವು ಸೆಡ್ಡು ಹೊಡೆದು ಮುಂದಿನ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಿತು. ಇದೀಗ ಅಂತಿಮ ಪಂದ್ಯದಲ್ಲಿ ಆಡುವ ಇಲೆವೆನ್ ತಂಡವನ್ನು ಕಣಕ್ಕಿಳಿಸುವುದೇ ಭಾರತದ ನಾಯಕ ರಿಷಬ್ ಪಂತ್ (Rishabh Pant) ಮುಂದಿರುವ ದೊಡ್ಡ ಸವಾಲು. ವಾಸ್ತವವಾಗಿ, ಮೊದಲ ಎರಡು ಪಂದ್ಯಗಳಲ್ಲಿ ಸೋತರೂ, ಪಂತ್ ಮೂರನೇ ಮತ್ತು ನಾಲ್ಕನೇ T20 ಪಂದ್ಯಗಳ ಆಡುವ XI ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಿಲ್ಲ. ಅವರ ನಾಯಕತ್ವದ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು, ಆದರೆ ಈಗ ಅವರ ಮುಂದಿರುವ ದೊಡ್ಡ ಸವಾಲೆಂದರೆ, ಅಂತಿಮ ಪಂದ್ಯದ ಆಡುವ XI ಅನ್ನು ಪಂತ್ ಬದಲಾಯಿಸುತ್ತಾರೆಯೇ ಎಂಬುದು.

ಪಂತ್ ಮತ್ತು ಅಯ್ಯರ್ ಕಳಪೆ ಫಾರ್ಮ್​

ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಅವರ ಬ್ಯಾಟ್ ಬಿರುಸಾಗಿ ಸಾಗಿತ್ತು. ಅವೇಶ್ ಖಾನ್, ಹರ್ಷಲ್ ಪಟೇಲ್ ಮತ್ತು ಯುಜುವೇಂದ್ರ ಚಾಹಲ್ ಕೂಡ ಫಾರ್ಮ್‌ಗೆ ಬಂದಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ, ಮೂರನೇ ಪಂದ್ಯದಲ್ಲಿ ರಿತುರಾಜ್ ಗಾಯಕ್ವಾಡ್ ಅರ್ಧಶತಕ ಗಳಿಸಿದರು. ಆದರೆ, ನಾಲ್ಕನೇ ಪಂದ್ಯದಲ್ಲಿ ಅವರು ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತರಾದರು. ಅದೇ ಸಮಯದಲ್ಲಿ, ಇಶಾನ್ ಕಿಶನ್ ಮೊದಲ ಪಂದ್ಯದಲ್ಲಿ 76, ಎರಡನೇ ಪಂದ್ಯದಲ್ಲಿ 34, ಮೂರನೇ ಪಂದ್ಯದಲ್ಲಿ 54 ಮತ್ತು ನಾಲ್ಕನೇ ಪಂದ್ಯದಲ್ಲಿ 27 ರನ್ ಗಳಿಸಿದರು. ಭಾರತ ತಂಡದಲ್ಲಿ ಯಾರಾದರೂ ಫಾರ್ಮ್‌ಗೆ ಮರಳಲು ಸಾಧ್ಯವಾಗದಿದ್ದರೆ ಅದು ನಾಯಕ ಪಂತ್ ಮತ್ತು ಶ್ರೇಯಸ್ ಅಯ್ಯರ್.

ಇದನ್ನೂ ಓದಿ
Image
Dinesh Karthik: 16 ವರ್ಷ, 36 ಪಂದ್ಯ.. 3ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ; ಇದು ದಿನೇಶ್ ಕಾರ್ತಿಕ್ ಟಿ20 ಕರಿಯರ್
Image
IND vs SA 5th T20 Match Live Streaming: ಹರಿಣಗಳನ್ನು ಮಣಿಸಿ ಸರಣಿ ಗೆಲ್ಲುತ್ತಾ ಭಾರತ? ಪಂದ್ಯದ ಬಗ್ಗೆ ಒಂದಿಷ್ಟು ಮಾಹಿತಿ
Image
IND vs SA: ಕಾರ್ತಿಕ್- ಹಾರ್ದಿಕ್ ಅಬ್ಬರ.. ಅವೇಶ್- ಹರ್ಷಲ್ ಮಾರಕ ದಾಳಿ; ಭಾರತಕ್ಕೆ 82 ರನ್ ಜಯ

ಇದನ್ನೂ ಓದಿ:WI vs BAN: ಬಿಟ್ಟಿದ್ದು ಬರೋಬ್ಬರಿ 24 ಕ್ಯಾಚ್! ಗಲ್ಲಿ ಕ್ರಿಕೆಟ್ ನೆನಪಿಸಿದ ಬಾಂಗ್ಲಾ ತಂಡ; ಗೆಲುವಿನ ಸನಿಹದಲ್ಲಿ ವಿಂಡೀಸ್

ಹೂಡಾಗೆ ಅವಕಾಶ

ಕಳೆದ 4 ಪಂದ್ಯಗಳಲ್ಲಿ ಬೇಜವಾಬ್ದಾರಿ ಹೊಡೆತಗಳನ್ನು ಆಡುವ ಮೂಲಕ ಪಂತ್ ಒಂದೇ ರೀತಿಯಲ್ಲಿ ಔಟಾಗುತ್ತಿದ್ದಾರೆ. ಈ ಸರಣಿಯಲ್ಲಿ ಅವರು 29, 5, 6 ಮತ್ತು 17 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅದೇ ಸಮಯದಲ್ಲಿ, ಅಯ್ಯರ್ ಈ ಸರಣಿಯಲ್ಲಿ 36, 40, 14 ಮತ್ತು 4 ರನ್ ಗಳಿಸಿದರು. ಇಂತಹ ಪರಿಸ್ಥಿತಿಯಲ್ಲಿ ಪಂತ್ ಫೈನಲ್​ನಲ್ಲಿ ಅಯ್ಯರ್ ರೂಪದಲ್ಲಿ ಬದಲಾವಣೆ ಮಾಡುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ಐಪಿಎಲ್ 2022 ರಲ್ಲಿ ಅದ್ಭುತ ಆಟ ಪ್ರದರ್ಶಿಸಿದ ದೀಪಕ್ ಹೂಡಾ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

5 ನೇ T20I ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ / ದೀಪಕ್ ಹೂಡಾ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಮತ್ತು ಯುಜ್ವೇಂದ್ರ ಚಾಹಲ್.

Published On - 4:00 pm, Sat, 18 June 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ